ಭಾನುವಾರ, ಮಾರ್ಚ್ 26, 2023
24 °C

ಮತ್ತೆ ವೀಕ್ಷಕ ವಿವರಣೆಗಾರನಾಗುವ ಸುಳಿವು ನೀಡಿದ ರವಿ ಶಾಸ್ತ್ರಿ

ಪಿಟಿಐ Updated:

ಅಕ್ಷರ ಗಾತ್ರ : | |

ದುಬೈ: ವಿಶ್ವಕಪ್ ಟೂರ್ನಿಯೊಂದಿಗೆ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನದಿಂದ ನಿರ್ಗಮಿಸುತ್ತಿರುವ ರವಿ ಶಾಸ್ತ್ರಿ ಅವರು ಮತ್ತೆ ವೀಕ್ಷಕ ವಿವರಣೆಗಾರನಾಗುವ ಸುಳಿವು ನೀಡಿದ್ದಾರೆ.

ಸೋಮವಾರ ರಾತ್ರಿಯ ಭಾರತ–ನಮೀಬಿಯಾ ಪಂದ್ಯದ ಬಳಿಕ ಮಾತನಾಡಿದ ಅವರು, ‘ನೀವೆಲ್ಲ ತಿಳಿದಿರುವಂತೆ ನಾನು ಭವಿಷ್ಯದಲ್ಲಿ ವೀಕ್ಷಕ ವಿವರಣೆ ಮಾಡುವ ಸಾಧ್ಯತೆ ಇದೆ. ಆ ಕ್ಷೇತ್ರದಲ್ಲಿ ನಾನು ತೊಡಗಿಸಿಕೊಳ್ಳಲಿದ್ದೇನೆ. ವೀಕ್ಷಕ ವಿವರಣೆಗಾರನಾಗುವುದು ಖುಷಿ ಕೊಡುತ್ತದೆ’ ಎಂದು ಹೇಳಿದ್ದಾರೆ.

ಓದಿ: 

ಭಾರತ ಮತ್ತು ಇಂಗ್ಲೆಂಡ್‌ ನಡುವೆ ಕೋವಿಡ್–19 ಸಾಂಕ್ರಾಮಿಕದ ಕಾರಣ ಬಾಕಿಯಾಗಿದ್ದ ಐದನೇ ಟೆಸ್ಟ್ ಪಂದ್ಯ ಮುಂದಿನ ವರ್ಷ ನಡೆಯಲಿದೆ. ಆ ಪಂದ್ಯದಲ್ಲಿ ಶಾಸ್ತ್ರಿ ಅವರು ವೀಕ್ಷಕ ವಿವರಣೆಗಾರನಾಗಿ ಕಾರ್ಯನಿರ್ವಹಿಸುವ ನಿರೀಕ್ಷೆ ಇದೆ. ಶಾಸ್ತ್ರಿ ಅವರು ಐಪಿಎಲ್ ತಂಡವೊಂದರ ಕೋಚ್ ಆಗಿ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆಗಳಿವೆ ಎಂದೂ ಇತ್ತೀಚೆಗೆ ವರದಿಯಾಗಿತ್ತು.

2011ರಲ್ಲಿ ಬಾರತ ತಂಡವು ವಿಶ್ವಕಪ್ ಗೆದ್ದ ಸಂದರ್ಭದಲ್ಲಿ ಶಾಸ್ತ್ರಿ ಅವರು ವೀಕ್ಷಕ ವಿವರಣೆಗಾರನಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು