ಬೆಂಗಳೂರು: ಆರ್ಸಿಬಿ ‘ವಿಜಯೋತ್ಸವ’ ಕಾರ್ಯಕ್ರಮಕ್ಕಾಗಿ (ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣ) ಸುಮಾರು ₹15 ಕೋಟಿಗೂ ಹೆಚ್ಚು ಖರ್ಚಾಗಿರುವುದಾಗಿ ಗೊತ್ತಾಗಿದೆ.

ಐಪಿಎಲ್ನ ಇವೆಂಟ್ ಮ್ಯಾನೇಜ್ಮೆಂಟ್ ಜವಾಬ್ದಾರಿ ಹೊತ್ತಿರುವ ಡಿಎನ್ಎ ಎಂಟರ್ಟೈನ್ಮೆಂಟ್ ನೆಟ್ವರ್ಕ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯೇ ವಿಜಯೋತ್ಸವ ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡಿತ್ತು. ಈ ಕಂಪನಿ ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರ ಮೊಮ್ಮಕ್ಕಳಿಗೆ ಸೇರಿದ್ದು, ಸರ್ಕಾರದಲ್ಲಿ ಪ್ರಭಾವ ಹೊಂದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಜಯೋತ್ಸವವನ್ನು ಶನಿವಾರ ಹಮ್ಮಿಕೊಳ್ಳಬೇಕು ಎಂಬುದು ಆರಂಭದ ಯೋಜನೆಯಾಗಿತ್ತು. ಆದರೆ, ಪ್ರಮುಖ ಸಚಿವರೊಬ್ಬರ ಒತ್ತಡದ ಕಾರಣ ತರಾತುರಿಯಲ್ಲಿ ಬುಧವಾರವೇ ನಿಗದಿ ಮಾಡಲಾಯಿತು. ಹೀಗಾಗಿ ಕ್ರೀಡಾಂಗಣ ಮತ್ತು ವಿಧಾನಸೌಧದ ಬಳಿ ಸೇರಬಹುದಾದ ಜನಸಂಖ್ಯೆ ಮತ್ತು ಅದನ್ನು ನಿಭಾಯಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಯೋಚಿಸುವಲ್ಲಿ ಡಿಎನ್ಎ ಸಂಸ್ಥೆಯೂ ಎಡವಿದೆ ಎಂದು ಮೂಲಗಳು ಹೇಳಿವೆ.

ವಿಜಯೋತ್ಸವಕ್ಕೆ ಅಧಿಕಾರಿಗಳ ಒತ್ತಡ: ವಿಧಾನಸೌಧದ ಮೆಟ್ಟಿಲುಗಳ ಮೇಲೆ ವಿಜಯೋತ್ಸವ ನಡೆಸಲು ಸಚಿವರು ಮಾತ್ರವಲ್ಲದೇ ಮುಖ್ಯಕಾರ್ಯದರ್ಶಿಯಾದಿಯಾಗಿ ಹಲವು ಹಿರಿಯ ಅಧಿಕಾರಿಗಳೂ ಮುತುವರ್ಜಿ ವಹಿಸಿದ್ದರು. ಆರ್ಸಿಬಿ 18 ವರ್ಷಗಳಲ್ಲಿ ಮೊದಲ ಬಾರಿಗೆ ಗೆದ್ದಿರುವುದರಿಂದ ವಿಧಾನಸೌಧದ ಮುಂದೆ ವಿಜಯೋತ್ಸವ ಆಚರಿಸಬೇಕು ಎಂದು ಮುಖ್ಯಮಂತ್ರಿಯವರಿಗೆ ಸಲಹೆ ನೀಡಿದರು ಎಂದು ಮೂಲಗಳು ತಿಳಿಸಿವೆ.

ಡಿಎನ್ಎ, ಆರ್ಸಿಬಿಯ ನಾಲ್ವರ ಬಂಧನ

ಬೆಂಗಳೂರು ರಾಯಲ್ ಚಾಲೆಂಜರ್ಸ್ (ಆರ್ಸಿಬಿ) ತಂಡದ ವಿಜಯೋತ್ಸವದ ವೇಳೆ ಕಾಲ್ತುಳಿತದಿಂದ ಉಂಟಾದ ಸಾವು–ನೋವು ಪ್ರಕರಣ ಸಂಬಂಧ ಆರ್ಸಿಬಿಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ನಿಖಿಲ್ ಸೋಸಲೆ, ಡಿಎನ್ಎ ಮ್ಯಾನೇಜ್ಮೆಂಟ್ (ಇವೆಂಟ್ ಮ್ಯಾನೇಜ್ಮೆಂಟ್) ಸಿಬ್ಬಂದಿ ಸುನಿಲ್ ಮ್ಯಾಥ್ಯು, ಕಿರಣ್ ಮತ್ತು ಸುಮಂತ್ ಎಂಬವರನ್ನು ಕೇಂದ್ರ ಅಪರಾಧ ದಳ ಹಾಗೂ ಕಬ್ಬನ್ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
.ಆರ್ಸಿಬಿ ವಿಜಯೋತ್ಸವ ದುರಂತಕ್ಕೆ ಸಿಎಂ ಸಿದ್ದರಾಮಯ್ಯ ಕಾರಣ: ಕುಮಾರಸ್ವಾಮಿ.ಬೆಂಗಳೂರು ಕಾಲ್ತುಳಿತ: ಆರ್ಸಿಬಿ, ಡಿಎನ್ಎ, ಕೆಎಸ್ಸಿಎ ವಿರುದ್ಧ ಎಫ್ಐಆರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.