ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿತ್‌ ಶರ್ಮಾಗೆ ಭಾರತ ಟಿ20 ತಂಡದ ನಾಯಕತ್ವ ಸಾಧ್ಯತೆ: ವರದಿ

Last Updated 2 ನವೆಂಬರ್ 2021, 11:02 IST
ಅಕ್ಷರ ಗಾತ್ರ

ನವದೆಹಲಿ:ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಮುಗಿದ ಬಳಿಕಈ ಮಾದರಿಯಲ್ಲಿತಂಡದ ನಾಯಕತ್ವ ತೊರೆಯುವುದಾಗಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ಘೋಷಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಶೀಘ್ರದಲ್ಲೇ ಹೊಸ ನಾಯಕನ ಹೆಸರನ್ನು ಘೋಷಿಸಲಿದೆ.

ಸದ್ಯ ಉಪನಾಯಕನಾಗಿರುವ ರೋಹಿತ್‌ ಶರ್ಮಾ ನಾಯಕತ್ವದ ರೇಸ್‌ನಲ್ಲಿ ಮುಂದಿದ್ದಾರೆ.

ಹೊಸ ನಾಯಕನ ಆಯ್ಕೆ ಸಲುವಾಗಿಚೇತನ್‌ ಶರ್ಮಾ ನೇತೃತ್ವದ ಆಯ್ಕೆ ಸಮಿತಿಸಭೆಗೆ ಸಮಯ ನಿಗದಿಯಾಗಿದೆ.ಐಪಿಎಲ್‌ನಲ್ಲಿ ಯಶಸ್ವಿ ನಾಯಕ ಎನಿಸಿರುವ ರೋಹಿತ್‌ ಶರ್ಮಾ ಅವರಿಗೆ ತಂಡದ ನಾಯಕತ್ವ ಸಿಗುವುದು ಬಹುತೇಕ ಖಚಿತ ಎನ್ನಲಾಗಿದೆ. ಆದಾಗ್ಯೂ ನ್ಯೂಜಿಲೆಂಡ್‌ ವಿರುದ್ಧದ ಮುಂಬರುವ ಚುಟುಕು ಕ್ರಿಕೆಟ್‌ ಸರಣಿಗೆ ರೋಹಿತ್‌ಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ತಾತ್ಕಾಲಿಕವಾಗಿ ಮತ್ತೊಬ್ಬ ಆಟಗಾರನಿಗೆ ನಾಯಕತ್ವದ ಜವಾಬ್ದಾರಿ ವಹಿಸಲಾಗುತ್ತದೆ ಎಂದು ಕ್ರಿಕ್‌ಬಜ್‌ ವರದಿ ಮಾಡಿದೆ.

ಚುಟುಕು ವಿಶ್ವಕಪ್‌ ಬಳಿಕನ್ಯೂಜಿಲೆಂಡ್‌ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, ಆತಿಥೇಯ ತಂಡದ ವಿರುದ್ಧ ಮೂರು ಟಿ20 (ನವೆಂಬರ್‌17-21) ಹಾಗೂ ಎರಡು ಟೆಸ್ಟ್‌ (ನ. 25-29 ಹಾಗೂ ಡಿ. 03-07) ಪಂದ್ಯಗಳನ್ನು ಆಡಲಿದೆ.

ಏಕದಿನ ನಾಯಕತ್ವವೂ ರೋಹಿತ್‌ಗೆ?
ವಿಶ್ವಕಪ್‌ ಟೂರ್ನಿಯ‌ ಮೊದಲೆರಡು ಪಂದ್ಯಗಳಲ್ಲಿ ಭಾರತ ತಂಡ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌ ವಿರುದ್ಧ ಸೋಲು ಕಂಡಿರುವುದು ವಿರಾಟ್‌ ನಾಯಕತ್ವದ ಬಗ್ಗೆ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.ಒಂದುವೇಳೆ ಭಾರತ ತಂಡವು ಮುಂಬರುವ (2023) ಚುಟುಕು ವಿಶ್ವಕಪ್‌ನಲ್ಲಿ ರೋಹಿತ್‌ ನಾಯಕತ್ವದಲ್ಲಿ ಉತ್ತಮ ಪ್ರದರ್ಶನ ನೀಡಿದರೆ, ಏಕದಿನ ಮಾದರಿಯ ನಾಯಕತ್ವವೂ ಕೊಹ್ಲಿ ಕೈಯಿಂದ ಜಾರುವ ಸಾಧ್ಯತೆ ಇದೆ ಎನ್ನಲಾಗಿದೆ.

ನಿಗದಿತ ಓವರ್‌ನ ಕ್ರಿಕೆಟ್‌ನ ಎರಡೂ ಮಾದರಿಯಲ್ಲಿ ಒಬ್ಬರೇ ತಂಡವನ್ನು ಮುನ್ನಡೆಸುವುದು ನಿರ್ವಹಣೆಗೂ ಅನುಕೂಲಕರ ಆಯ್ಕೆಯಾಗಲಿದೆ. ಆದಾಗ್ಯೂ, ಸದ್ಯಟಿ20 ತಂಡಕ್ಕೆ ಮಾತ್ರವೇ ಹೊಸ ನಾಯಕನ ಆಯ್ಕೆ ಮಾಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT