ಮೇಲ್ಬರ್ನ್: ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಸೂಪರ್ 12ರ ಹಂತದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅಮೋಘ ಬ್ಯಾಟಿಂಗ್ ಪ್ರದರ್ಶನ ತೋರಿದ ವಿರಾಟ್ ಕೊಹ್ಲಿ ಭಾರತಕ್ಕೆ 4 ವಿಕೆಟ್ ಅಂತರದ ಗೆಲುವು ತಂದುಕೊಟ್ಟರು.

ಪಂದ್ಯ ಮುಗಿದ ತಕ್ಷಣ ರೋಹಿತ್ ಶರ್ಮಾ ಓಡಿ ಬಂದು ವಿರಾಟ್ ಕೊಹ್ಲಿ ಅವರನ್ನು ತಬ್ಬಿ ಎತ್ತಿಕೊಂಡು ಕುಣಿದಾಡಿದರು.ಇದೀಗ ಈ ವಿಡಿಯೊ ಫೋಟೊಗಳು ವೈರಲ್ ಆಗಿವೆ. ಇದೇ ವೇಳೆ ಪಂದ್ಯ ಗೆಲ್ಲಿಸಿಕೊಟ್ಟ ಕೊಹ್ಲಿ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ನಾನು ನೋಡಿದ ಅತ್ಯುತ್ತಮ ಪಂದ್ಯ

ಇನ್ನು ಜಯದ ಬಗ್ಗೆ ತಮ್ಮ ಪತಿ ವಿರಾಟ್ ಕೊಹ್ಲಿ ಅವರ ಬಗ್ಗೆ ಹೃದಯ ತುಂಬಿ ಮಾತನಾಡಿರುವ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಅವರು, ಈ ಪಂದ್ಯ ನನ್ನ ಜೀವನದಲ್ಲೇ ನಾನು ನೋಡಿದ ಅತ್ಯುತ್ತಮ ಪಂದ್ಯ ಎಂದು ಕೊಂಡಾಡಿದ್ದಾರೆ.

ಈ ಬಗ್ಗೆ ಅವರು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ನೀನು ತುಂಬಾ ಸುಂದರ ಕೊಹ್ಲಿ, ನಮ್ಮ ಜನರಿಗೆ ನೀನು ನಿಜವಾದ ದೀಪಾವಳಿ ಉಡುಗೊರೆ ನೀಡಿದೆ. ಅದ್ಬುತ ಪಂದ್ಯ ಎಂದು ಮೆಚ್ಚಿ ಬರೆದುಕೊಂಡಿದ್ದಾರೆ.

ನಾನು ನನ್ನ ಕೋಣೆಯಲ್ಲಿ ಈ ಪಂದ್ಯ ನೋಡುತ್ತಿದ್ದೆ. ನಾನು ಕುಣಿದು ಕುಪ್ಪಳಿಸಿದೆ. ಆದರೆ ನಮ್ಮ ಮಗುವಿಗೆ ನಾನೇಕೆ ನೃತ್ಯ ಮಾಡಿದೆ ಎಂದು ಗೊತ್ತಿಲ್ಲ. ಆದರೆ, ಮುಂದೊಂದು ದಿನ ಇದು ಗೊತ್ತಾಗುತ್ತದೆ ಎಂದು ಬರೆದುಕೊಂಡಿದ್ದಾರೆ.

53 ಎಸೆತಗಳನ್ನು ಎದುರಿಸಿದ ಕೊಹ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 82 ರನ್ ಬಾರಿಸಿದರು. ಮೊದಲ 50 ರನ್ ಗಳಿಸಲು 43 ಎಸೆತಗಳನ್ನು ತೆಗೆದುಕೊಂಡ ಅವರು, ನಂತರದ 32 ರನ್ ಅನ್ನು ಕೇವಲ 10 ಎಸೆತಗಳಲ್ಲೇ ಚಚ್ಚಿದರು.

ಪಾಕ್ ಎದುರು ಜಯ ತಂದುಕೊಟ್ಟ ಪತಿ ವಿರಾಟ್ ಕುರಿತು ಭಾವುಕ ಸಂದೇಶ ಹಂಚಿಕೊಂಡ ಅನುಷ್ಕಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.