ಜೋಹಾನ್ಸ್‌ಬರ್ಗ್: ಬಾಂಗ್ಲಾದೇಶ ಎದುರಿನ ಟೆಸ್ಟ್ ಸರಣಿಯಲ್ಲಿ ಆಡುವ ಆಫ್ರಿಕಾ ಕ್ರಿಕೆಟ್ ತಂಡದಲ್ಲಿ ಐಪಿಎಲ್ ನಲ್ಲಿ ಆಡುವ ಆಟಗಾರರನ್ನು ಆಯ್ಕೆಗೆ ಪರಿಗಣಿಸಿಲ್ಲ.

ಇದರಿಂದಾಗಿ ಪ್ರಮುಖ ಆಟಗಾರರಾದ ಕಗಿಸೊ ರಬಾಡ, ಲುಂಗಿ ಗಿಡಿ, ಮಾರ್ಕೊ ಜೆನ್ಸನ್, ಬ್ಯಾಟರ್‌ಗಳಾದ ಏಡನ್ ಮಾರ್ಕರಂ ಮತ್ತು ರಸಿ ವ್ಯಾನ್ ಡರ್ ಡಸೆನ್ ಅವರು ಬಾಂಗ್ಲಾ ಪ್ರವಾಸದ ಬದಲು ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಟೂರ್ನಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಆದ್ದರಿಂದ ಅವರನ್ನು ತಂಡದಿಂದ ಕೈಬಿಡಲಾಗಿದೆ.

ಏನ್ರಿಚ್ ನಾಕಿಯಾ ಗಾಯದಿಂದಾಗಿ ಆಯ್ಕೆಯಾಗಿಲ್ಲ. ಅವರು ಐಪಿಎಲ್‌ನಲ್ಲಿ ಆಡುವುದೂ ಅನುಮಾನವಾಗಿದೆ.

ಮಾರ್ಚ್ 31ರಿಂದ ಡರ್ಬನ್‌ನಲ್ಲಿ ಮೊದಲ ಟೆಸ್ಟ್ ಆರಂಭವಾಗಲಿದೆ. ಪೋರ್ಟ್ ಎಲಿಜಬೆತ್‌ನಲ್ಲಿ ಏಪ್ರಿಲ್ 7ರಿಂದ ಎರಡನೇ ಟೆಸ್ಟ್ ನಡೆಯಲಿದೆ.

ಇದೇ 26ರಿಂದ ಮುಂಬೈನಲ್ಲಿ 15ನೇ ಆವೃತ್ತಿಯ ಐಪಿಎಲ್ ಆರಂಭವಾಗುವುದು.

ತಂಡ: ಡೀನ್ ಎಲ್ಗರ್ (ನಾಯಕ), ತೆಂಬಾ ಬವುಮಾ (ಉಪನಾಯಕ), ಡ್ಯಾರಿನ್ ಡುಪಾವಿಲನ್, ಸರೆಲ್ ಎರ್ವಿ, ಸೈಮನ್ ಹಾರ್ಮರ್, ಕೇಶವ್ ಮಹಾರಾಜ್, ವಿಯಾನ್ ಮಲ್ದಾರ್, ಡುವಾನ್ ಒಲಿವಿಯರ್, ಕೀಗನ್ ಪೀಟರ್ಸನ್, ರಯಾನ್ ರಿಕೆಲ್ಟನ್, ಲುಥೊ ಸಿಪಾಮ್ಲಾ, ಗ್ಲೆಂಟನ್ ಸ್ಟರ್‌ಮನ್, ಕೈಲ್ ವೆರೆಯನ್ (ವಿಕೆಟ್‌ಕೀಪರ್), ಲಿಝಾದ್ ವಿಲಿಯಮ್ಸ್, ಖಾಯಾ ಜೊಂಡೊ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.