ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20ಯಲ್ಲಿ 14 ಸಾವಿರ ರನ್‌ ಗಳಿಸಿ ಚುಟುಕು ಕ್ರಿಕೆಟ್‌ನ ಸಚಿನ್‌‌ ಎನಿಸಿಕೊಂಡ ಗೇಲ್

ಅಕ್ಷರ ಗಾತ್ರ

ವೆಸ್ಟ್‌ಇಂಡೀಸ್‌ನ ದೈತ್ಯ ಪ್ರತಿಭೆ, ಚುಟುಕು ಕ್ರಿಕೆಟ್‌ನ ಸ್ಫೋಟಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಹೊಸ ದಾಖಲೆ ಬರೆದಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ14 ಸಾವಿರ ರನ್‌ ಪೂರೈಸಿದ ಏಕೈಕ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ವೆಸ್ಟ್‌ ಇಂಡೀಸ್‌ ಹಾಗೂ ವಿವಿಧ ಪ್ರಾಂಚೈಸ್‌ಗಳ ಪರ ಇದುವರೆಗೆ ಒಟ್ಟು 431 ಪಂದ್ಯಗಳ423 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಗೇಯ್ಲ್‌,14,038 ರನ್‌ ಕಲೆಹಾಕಿದ್ದಾರೆ.22 ಶತಕ ಮತ್ತು ಬರೋಬ್ಬರಿ 87 ಅರ್ಧಶತಕಗಳು ಇದರಲ್ಲಿವೆ. ವಿಂಡೀಸ್‌ನವರೇ ಆದ ಕೀರನ್‌ ಪೊಲಾರ್ಡ್‌545 ಪಂದ್ಯಗಳ484 ಇನಿಂಗ್ಸ್‌ಗಳಿಂದ 10,836 ರನ್‌ ಗಳಿಸಿಎರಡನೇ ಸ್ಥಾನದಲ್ಲಿದ್ದಾರೆ.

425 ಪಂದ್ಯಗಳ 397 ಇನಿಂಗ್ಸ್‌ಗಳಿಂದ 10,741 ರನ್‌ ಗಳಿಸಿರುವ ಪಾಕಿಸ್ತಾನದ ಶೋಯೆಬ್‌ ಮಲಿಕ್‌,304 ಪಂದ್ಯಗಳ 303 ಇನಿಂಗ್ಸ್‌ಗಳಿಂದ 10,017 ಕಲೆಹಾಕಿರುವ ಆಸ್ಟ್ರೇಲಿಯಾದ ಡೇವಿಡ್‌ ವಾರ್ನರ್‌ ಮತ್ತು310 ಪಂದ್ಯಗಳ 295 ಇನಿಂಗ್ಸ್‌ಗಳಿಂದ 9,922ರನ್‌ ಗಳಿಸಿರುವ ಭಾರತದ ವಿರಾಟ್‌ ಕೊಹ್ಲಿ ಕ್ರಮವಾಗಿ3, 4 ಮತ್ತು5ನೇ ಸ್ಥಾನಗಳಲ್ಲಿದ್ದಾರೆ.

ಆಸಿಸ್‌ ವಿರುದ್ಧ ಅರ್ಧಶತಕ
ಆಸ್ಟ್ರೇಲಿಯಾ ಮತ್ತುವೆಸ್ಟ್‌ ಇಂಡೀಸ್‌5 ಪಂದ್ಯಗಳ ಟಿ20 ಸರಣಿಯಲ್ಲಿ ಸೆಣಸುತ್ತಿವೆ. ಮೊದಲೆರಡು ಪಂದ್ಯಗಳನ್ನು ಗೆದ್ದುಕೊಂಡಿದ್ದ ವಿಂಡೀಸ್‌,ಸೋಮವಾರ ಮೂರನೇ ಪಂದ್ಯದಲ್ಲಿ ಆಸಿಸ್‌ಗೆ ಮುಖಾಮುಖಿಯಾಗಿತ್ತು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಆಸಿಸ್‌ ನಿಗದಿತ20 ಓವರ್‌ಗಳಲ್ಲಿ6 ವಿಕೆಟ್‌ಗಳನ್ನು ಕಳೆದುಕೊಂಡು141 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ ವಿಂಡೀಸ್‌ಗೆ ಗೇಲ್‌ ನೆರವಾದರು.ಕೇವಲ38 ಎಸೆತ ಎದುರಿಸಿದ ಅವರು4 ಬೌಂಡರಿ 7 ಸಿಕ್ಸರ್‌ ಸಹಿತ67 ರನ್‌ ಚಚ್ಚಿದರು.

ಹೀಗಾಗಿ ಕೆರಿಬಿಯನ್‌ ನಾಡಿನ ತಂಡ6 ವಿಕೆಟ್‌ ಅಂತರದಿಂದ ಗೆದ್ದು, ಸರಣಿಯಲ್ಲಿ3-0 ಅಂತರದ ಮುನ್ನಡೆ ಸಾಧಿಸಿತು.

ಟಿ20 ಕ್ರಿಕೆಟ್‌ನ ಸಚಿನ್
ಕ್ರಿಸ್‌ ಗೇಲ್‌ ಸಾಧನೆಗೆ ಟ್ವಿಟರ್‌ನಲ್ಲಿ ಶ್ಲಾಘನೆಯ ಮಹಾಪೂರವೇ ಹರಿದುಬಂದಿದೆ.

ಅಭಿಮಾನಿಯೊಬ್ಬರು, ʼಕೆಲವರು ಇನ್ನೂ, ʼಓಹ್‌ ಇದು ಟಿ20 ಕ್ರಿಕೆಟ್‌ ಎನ್ನಬಹುದು. ಆದರೆ, ಬ್ಯಾಟ್ಸ್‌ಮನ್‌ ಒಬ್ಬ 40 ಎಸೆತಗಳನ್ನು ಎದುರಿಸುವುದೇ ಅಪರೂಪ ಎನ್ನಬಹುದಾದ ಈ ಮಾದರಿಯ ಕ್ರಿಕೆಟ್‌ನಲ್ಲಿ 14,000 ರನ್‌ಗಳು ಊಹಿಸಲಾಗದ ಸಂಖ್ಯೆಯಾಗಿದೆ.
ಏಕದಿನ ಕ್ರಿಕೆಟ್‌ಗೆ ಸಚಿನ್‌ ತೆಂಡೂಲ್ಕರ್‌ ಇದ್ದಂತೆ, ಚುಟುಕು ಕ್ರಿಕೆಟ್‌ಗೆ ಕ್ರಿಸ್‌ ಗೇಲ್‌ʼ ಎಂದು ಹೊಗಳಿದ್ದಾರೆ.

ಸಚಿನ್‌ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್‌ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಅವರು 463 ಪಂದ್ಯಗಳ 452 ಇನಿಂಗ್ಸ್‌ಗಳಿಂದ 18426 ರನ್‌ ಗಳಿಸಿದ್ದಾರೆ.

ಮತ್ತಷ್ಟು ಟ್ವೀಟ್‌ಗಳು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT