ಮೋದಿ ಕ್ರಿಕೆಟ್‌ ರಾಜತಂತ್ರಕ್ಕೆ ಸಚಿನ್‌ ತೆಂಡೂಲ್ಕರ್‌ ಮೆಚ್ಚುಗೆ 

ಬುಧವಾರ, ಜೂನ್ 26, 2019
29 °C

ಮೋದಿ ಕ್ರಿಕೆಟ್‌ ರಾಜತಂತ್ರಕ್ಕೆ ಸಚಿನ್‌ ತೆಂಡೂಲ್ಕರ್‌ ಮೆಚ್ಚುಗೆ 

Published:
Updated:

ನವದೆಹಲಿ: ಟೀಂ ಇಂಡಿಯಾದ ಸಹಿಯುಳ್ಳ ಕ್ರಿಕೆಟ್‌ ಬ್ಯಾಟ್‌ ಅನ್ನು ಮಾಲ್ಡೀವ್ಸ್‌ ಅಧ್ಯಕ್ಷರಿಗೆ ಉಡುಗೊರೆಯಾಗಿ ನೀಡಿದ ನರೇಂದ್ರ ಮೋದಿ ಅವರನ್ನು ಕ್ರಿಕೆಟ್‌ ದಂತಕತೆ ಸಚಿನ್‌ ತೆಂಡೂಲ್ಕರ್‌ ಅವರು ಹಾಡಿ ಹೊಗಳಿದ್ದಾರೆ.

ವಿಶ್ವಕಪ್‌ ಸರಣಿ ನಡೆಯುತ್ತಿರುವ ಈ ಹೊತ್ತಿನಲ್ಲೇ ನಡೆದಿರುವ ಈ ಬೆಳವಣಿಗೆಯೂ ಮೋದಿ ಅವರ ಕ್ರಿಕೆಟ್‌ ರಾಜತಾಂತ್ರಿಕತೆಗೆ ಉತ್ತಮ ನಿದರ್ಶನ ಎಂದಿದ್ದಾರೆ ಸಚಿನ್‌. 

‘ನನ್ನ ಸ್ನೇಹಿತ, ಮಾಲ್ಡೀವ್ಸ್‌ ಅಧ್ಯಕ್ಷ ಇಬ್ರಾಹಿಮ್‌ ಮೊಹಮದ್‌ ಸೋಲಿಹ್‌ ಕ್ರಿಕೆಟ್‌ನ ಅಭಿಮಾನಿ. ಆದ್ದರಿಂದ ನಾನು ಟೀಂ ಇಂಡಿಯಾದ ಸಹಿ ಇರುವ ಬ್ಯಾಟ್‌ ಅನ್ನು ಅವರಿಗೆ ಉಡುಗೊರೆಯಾಗಿ ನೀಡಿದೆ,’ ಎಂದು ಮೋದಿ ಅವರು ಜೂನ್‌ 8ರಂದು ಫೋಟೊ ಸಹಿತ ಟ್ವೀಟ್‌ ಮಾಡಿದ್ದರು.

ಈ ಟ್ವೀಟ್‌ ಅನ್ನು ಉಲ್ಲೇಖಿಸಿ ಮಂಗಳವಾರ ರಾತ್ರಿ ಟ್ವೀಟ್‌ ಮಾಡಿರುವ ಸಚಿನ್‌ ತೆಂಡೂಲ್ಕರ್‌, ‘ಕ್ರಿಕೆಟ್‌ ಅನ್ನು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು ಮೋದಿಜಿ. ಕ್ರಿಕೆಟ್‌ ರಾಜತಾಂತ್ರಿಕತೆಗೆ ಇದು ಉತ್ತಮ ನಿದರ್ಶನ,’ ಎಂದು ಅವರು ಬರೆದುಕೊಂಡಿದ್ದಾರೆ. ಅಲ್ಲದೆ, ಕ್ರಿಕೆಟ್‌ ಭೂಪಟದಲ್ಲಿ ಶೀಘ್ರವೇ ಮಾಲ್ಡೀವ್ಸ್‌ ಅನ್ನೂ ನೋಡಲು ಬಯಸುತ್ತೇನೆ,’ ಎಂದು ಅವರು ಆಶಿಸಿದ್ದಾರೆ. 

ಮಾಲ್ಡೀವ್ಸ್‌ನಲ್ಲಿ ಕ್ರಿಕೆಟ್‌ ಅನ್ನು ಪ್ರೋತ್ಸಾಹಿಸಲು ಭಾರತ ನೆರವಾಗುವುದಾಗಿ ಮೋದಿ ಅವರು ಅಲ್ಲಿನ ಅಧ್ಯಕ್ಷ ಸೋಲಿಹ್‌ ಅವರಿಗೆ ವಚನ ನೀಡಿದ್ದಾರೆ.

ಸದ್ಯ ಭಾರತವು ಮಾಲ್ಡೀವ್ಸ್‌ನಲ್ಲಿ ಕ್ರಿಕೆಟ್‌ ತರಬೇತಿ ನೀಡುತ್ತಿದೆ. ಅಲ್ಲದೆ, ಅಲ್ಲಿ ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ಹೇಳಿದ್ದಾರೆ. 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 16

  Happy
 • 1

  Amused
 • 3

  Sad
 • 1

  Frustrated
 • 1

  Angry

Comments:

0 comments

Write the first review for this !