ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಆಟಗಾರನ ಕ್ಯಾಚ್ ನೋಡಿ ಸಚಿನ್ ತೆಂಡೂಲ್ಕರ್ ಫಿದಾ!

Last Updated 12 ಫೆಬ್ರವರಿ 2023, 18:47 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ವ್ಯಾಕ್ಸಿನ್ ಡಿಪೊ ಆವರಣದಲ್ಲಿ ಶನಿವಾರ ನಡೆದ ಟೆನಿಸ್‌ ಬಾಲ್ ಕ್ರಿಕೆಟ್ ಪಂದ್ಯದಲ್ಲಿ ಸ್ಥಳೀಯ ಆಟಗಾರ ಕಿರಣ ತರಳೇಕರ್ ಹಿಡಿದ ಅದ್ಭುತ ಕ್ಯಾಚ್ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವರ ಗಮನಸೆಳೆದಿದೆ.

ಬೌಂಡರಿಯಾಚೆ ಹೋದ ಚೆಂಡನ್ನು ಕಿರಣ ಗಾಳಿಯಲ್ಲಿ‌‌ ನೆಗೆದು ಹಿಡಿದರು. ಬೌಂಡರಿ ಲೈನ್ ದಾಟುವ ಮುನ್ನ ಕೈಯಲ್ಲಿದ್ದ ಚೆಂಡನ್ನು ಮೇಲಕ್ಕೆಸೆದರು. ಅದೂ ಕೂಡ ಬೌಂಡರಿ ಆಚೆಗೇ ಬೀಳುತ್ತಿತ್ತು. ಕ್ಷಣಾರ್ಧದಲ್ಲೇ ಅದನ್ನರಿತ ಅವರು ಮತ್ತೆ ಗಾಳಿಯಲ್ಲಿ ಹಾರಿ ಚೆಂಡನ್ನು ಕಾಲಿನಿಂದ ಒದ್ದು ಗ್ರೌಂಡ್ ಒಳಕ್ಕೆ ಅಟ್ಟಿದರು. ಬೌಂಡರಿ ಆಚೆಗೆ ಹೋಗಿ ಮತ್ತೆ ಒಳಗೆ ಬಂದ ಚೆಂಡನ್ನು ಇನ್ನೊಬ್ಬ ಆಟಗಾರ ಕುನಾಲ್ ಕೊಂಡ ಹಿಡಿದರು. ಈ ದೃಶ್ಯ ಭಾನುವಾರ ಸಂಜೆಯಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು.

ಇದರ ವಿಡಿಯೊ ತುಣುಕನ್ನು ಹಾಕಿ ಟ್ವೀಟ್ ಮಾಡಿದ ತೆಂಡೂಲ್ಕರ್, ಕಿರಣ ಅವರ ಬೆನ್ನು ತಟ್ಟಿದ್ದಾರೆ. ‘ಫುಟ್‌ಬಾಲ್ ಕೂಡ ಆಡಲು ಗೊತ್ತಿರುವ ವ್ಯಕ್ತಿಯನ್ನು ನೀವು ಕ್ರಿಕೆಟ್‌ಗೆ ಕರೆತಂದಾಗ ಹೀಗೇ ಆಗುತ್ತದೆ...' ಎಂದು ತಮ್ಮ ಟ್ವೀಟ್‌ನಲ್ಲಿ ಬರೆದಿದ್ದಾರೆ.

ಈ ಟ್ವೀಟ್‌ಗೆ 60 ಸಾವಿರ ಜನ ಲೈಕ್ ಮಾಡಿದ್ದು, 4,576 ಮಂದಿ ಮರುಟ್ವೀಟ್ ಹಾಗೂ 386 ಮಂದಿ ಕಮೆಂಟ್ ಮಾಡಿದ್ದಾರೆ. ನಿಪ್ಪಾಣಿಯ ಎಸ್ಆರ್‌ಎಸ್ ಹಾಗೂ ಬೆಳಗಾವಿಯ ಸಾಯಿರಾಜ್ ತಂಡಗಳ‌ ಮಧ್ಯೆ ಈ ಪಂದ್ಯ ನಡೆದಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT