ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾ ಪಯಣದ ಬಗ್ಗೆ ವಿರಾಟ್ ಪತ್ರ: ಜಾಲತಾಣಗಳಲ್ಲಿ ಕೊಹ್ಲಿ ಜನ್ಮದಿನದ್ದೇ ಹವಾ

ಹುಟ್ಟುಹಬ್ಬದ ಶುಭಾಶಯ
Last Updated 5 ನವೆಂಬರ್ 2019, 17:34 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿವಿರಾಟ್‌ ಕೊಹ್ಲಿ ಅವರು ಮಂಗಳವಾರ 31ನೇ ವಸಂತಕ್ಕೆ ಕಾಲಿರಿಸಿದರು. ಅವರಿಗೆ ದೇಶ, ವಿದೇಶಗಳ ಅಭಿಮಾನಿಗಳು, ಸ್ನೇಹಿತರು, ಆಟಗಾರರು ಮತ್ತು ಗಣ್ಯರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ.

ಆದರೆ, ಎಲ್ಲಕ್ಕಿಂತ ವಿಶೇಷವಾಗಿ ಅವರು ತಮಗೆ ತಾವೇ ಅಭಿನಂದಿಸಿಕೊಂಡು ಬರೆದಿರುವ ಪತ್ರವು ಸಾಕಷ್ಟು ಸುದ್ದಿ ಮಾಡಿದೆ.
ಅವರ ತಮ್ಮ ಸ್ವಗತ ಪತ್ರದಲ್ಲಿ 15 ವರ್ಷಗಳ ಕ್ರೀಡಾ ಪ್ರಯಾಣದ ಕುರಿತು ಮತ್ತು ಕುಟುಂಬ ಪ್ರೀತಿಯ ಬಗ್ಗೆ ಉಲ್ಲೇಖಿಸಿದ್ದಾರೆ. ಬಾಲ್ಯದಲ್ಲಿ ತಮ್ಮ ದೆಹಲಿಯಲ್ಲಿ ಸವಿದ ಪರೋಟಾಗಳ ಕುರಿತೂ ಬರೆದಿದ್ದಾರೆ.

ಪತ್ರದಲ್ಲಿ ಏನಿದೆ?

ಹಾಯ್ ಚಿಕೂ..

ನಿನಗೆ ಮೊದಲಿಗೆ ಜನ್ಮದಿನದ ಶುಭಾಶಯಗಳು. ನಂಗೊತ್ತು ಭವಿಷ್ಯದ ಬಗ್ಗೆ ಕೇಳಲು ಸಾಕಷ್ಟು ಪ್ರಶ್ನೆಗಳಿವೆ. ಕ್ಷಮಿಸು. ಎಲ್ಲ ಪ್ರಶ್ನೆಗಳಿಗೂ ಉತ್ತರಿಸುವುದಿಲ್ಲ. ಇವತ್ತು ತಲುಪಿರುವ ಗುರಿಗಿಂತ ಸಾಗಿದ ಹಾದಿ ಮುಖ್ಯ. ಆ ಪಯಣದಲ್ಲಿ ಎದುರಾದ ಸವಾಲುಗಳೂ ರೋಚಕವಾಗಿದ್ದವು. ನಿರಾಶೆಗಳನ್ನು ಕಲಿಕೆಯ ಅವಕಾಶಗಳೆಂದು ಪರಿಗಣಿಸಿದೆ. ಒಟ್ಟಿನಲ್ಲಿ ಈ ಪಯಣವು ಸೂಪರ್!

ನಾನು ನಿನಗೆ ಹೇಳಲು ಬಯಸುವುದು ಏನೆಂದರೆ; ಈ ಜೀವನ ಎಂಬುದು ದೊಡ್ಡ ವಿಷಯಗಳ ಕಣಜ ವಿರಾಟ್, ನಿನ್ನಹಾದಿಯಲ್ಲಿ ಬರುವ ಪ್ರತಿಯೊಂದು ಅವಕಾಶವನ್ನು ಸಮರ್ಥವಾಗಿ ಬಳಸಿಕೊಳ್ಳಲು ಸಿದ್ಧವಾಗಿರಬೇಕು. ಆದರೆ, ಯಾವುದನ್ನೂ ಲಘುವಾಗಿ ತೆಗೆದುಕೊಳ್ಳಬೇಡ. ಕೆಲವೊಮ್ಮೆ ಅವುಗಳನ್ನು ಪಡೆದುಕೊಳ್ಳಲು ಸಾಧ್ಯವಾಗದೆವಿಫಲರಾಗಬಹುದು. ಇಂತಹ ಅನುಭವ ಬಹಳಷ್ಟು ಮಂದಿಗೆ ಆಗುತ್ತದೆ. ಮತ್ತೆ ಪ್ರಯತ್ನಿಸಿದ ಸಾಧನೆ ಮಾಡುವ ಬಗ್ಗೆ ಸ್ವಯಂ ಪ್ರತಿಜ್ಞೆ ಮಾಡಿಕೊ. ಇದುವರೆಗೆ ಆ ರೀತಿ ಮಾಡಿರದಿದ್ದರೆ, ಈಗ ಮತ್ತೆ ಪ್ರಯತ್ನಿಸು.

ನಿನ್ನನ್ನು ಬಹಳ ಜನರು ಪ್ರೀತಿಸುತ್ತಿರಬಹುದು. ಇನ್ನೂ ಕೆಲವರು ಇಷ್ಟಪಡದೆಇರಬಹುದು. ಅವರ ಬಗ್ಗೆ ತಲೆಕೆಡಿಸಿಕೊಳ್ಳಬೇಡ. ನಿನ್ನ ಮೇಲೆ ನಿನಗೆ ವಿಶ್ವಾಸವಿರಲಿ. ಇಂದು ನೀನುಹಾಕಿಕೊಂಡಿರುವ ಬೂಟುಗಳುತಂದೆ ಕೊಟ್ಟಿರುವ ಉಡುಗೊರೆಯಲ್ಲ ಎಂಬ ಸಂಗತಿ ನಿನಗೂಗೊತ್ತಿದೆ. ಆದರೆ ಬೆಳಿಗ್ಗೆ ಅವರು ನಿನಗೆನೀಡಿದ ಅಪ್ಪುಗೆ ಅಥವಾ ನಿನ್ನಎತ್ತರದ ಬಗ್ಗೆ ಅವರು ಮಾಡಿದ ತಮಾಷೆಗೆ ಬೆಲೆ ಕಟ್ಟಲಾಗದು. ಕೆಲವೊಮ್ಮೆ ಅವರು ಕಟ್ಟುನಿಟ್ಟಾಗಿ ಇರಬಹುದು. ಆದರೆ, ಅದು ನಿನ್ನಒಳಿತಿಗಾಗಿ. ಕೆಲವೊಮ್ಮೆ ಪೋಷಕರು ನಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳುತ್ತಿಲ್ಲ ಎಂದೆನಿಸಬಹುದು. ಆದರೆ, ನಮ್ಮ ಕುಟುಂಬ ಮಾತ್ರ ನಮ್ಮನ್ನು ಬೇಷರತ್‌ ಆಗಿ ಪ್ರೀತಿಸುತ್ತದೆ. ಅದಕ್ಕೆ ಪ್ರತಿಯಾಗಿ ಅವರನ್ನು ಪ್ರೀತಿಸು. ಅವರನ್ನು ಗೌರವಿಸು, ಅವರಿಗೆ ಬಹಳಷ್ಟುಸಮಯ ಮೀಸಲಿಡು. ಪ್ರತಿನಿತ್ಯ ನೀನು ಅವರನ್ನು ಪ್ರೀತಿಸುತ್ತಿರುವುದಾಗಿ ಅಪ್ಪನಿಗೆ ತಿಳಿಸು.

ಅಂತಿಮವಾಗಿ, ನಿನ್ನಹೃದಯದ ಮಾತುಗಳನ್ನು ಅನುಸರಿಸು. ನಿನ್ನಕನಸುಗಳನ್ನು ಬೆನ್ನಟ್ಟಿ, ದೊಡ್ಡದಾದ ಕನಸು ಹೇಗೆ ಬದಲಾವಣೆಗಳನ್ನು ಮಾಡುತ್ತದೆ ಎಂಬುದನ್ನು ಜಗತ್ತಿಗೆ ತೋರಿಸು. ನೀನು ಸದಾ ನೀನಾಗಿರು.

ಮತ್ತು..ಆ ಪರೋಟಾಗಳನ್ನು ನೆನಪಿಸಿಕೊ ಗೆಳೆಯ! ಮುಂದಿನ ದಿನಗಳಲ್ಲಿ ಅವುಗಳು ಸಿಗುವುದು
ವಿರಳವಾಗಬಹುದು ..

ಪ್ರತಿದಿನವೂ ಅಮೋಘವಾಗಿರಲಿ
ವಿರಾಟ್

ಸದ್ಯ ವಿಶ್ರಾಂತಿಯಲ್ಲಿರುವ ಕೊಹ್ಲಿ, ನವೆಂಬರ್‌ 14ರಂದು ನಡೆಯುವ ಬಾಂಗ್ಲಾ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯಕ್ಕೆ ತಂಡಕ್ಕೆ ಸೇರಿಕೊಳ್ಳಲ್ಲಿದ್ದಾರೆ.

ವಿರುಷ್ಕಾ ಬಗ್ಗೆ ಇವರಿಗೆ ಗೊತ್ತೇ ಇಲ್ಲ!
ಕ್ರಿಕೆಟ್ ತಾರೆ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರಿಗೆ ದೇಶ–ವಿದೇಶಗಳಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಇದ್ದಾರೆ. ಆದರೆ, ಈ ದಂಪತಿಯು ಮನೆ ಬಾಗಿಲಿಗೆ ಬಂದು ನಿಂತಾಗ ಗುರುತಿಸದಂತಹ ಜನರೂ ಇದ್ದಾರೆಂದರೆ!

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ತಮ್ಮ 31ನೇ ಜನ್ಮದಿನದ ಅಂಗವಾಗಿ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಮಂಗಳವಾರ ಪರ್ವತ ಪ್ರದೇಶವೊಂದರಲ್ಲಿ ಚಾರಣ ಮಾಡಿದರು. ಈ ಸಂದರ್ಭದಲ್ಲಿ ಅವರು ಅಲ್ಲಿ ವಾಸವಾಗಿರುವ ಕುಟುಂಬದೊಂದಿಗೆ ಸಮಯ ಕಳೆದರು –ಟ್ವಿಟರ್ ಚಿತ್ರ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ತಮ್ಮ 31ನೇ ಜನ್ಮದಿನದ ಅಂಗವಾಗಿ ಪತ್ನಿ ಅನುಷ್ಕಾ ಶರ್ಮಾ ಅವರೊಂದಿಗೆ ಮಂಗಳವಾರ ಪರ್ವತ ಪ್ರದೇಶವೊಂದರಲ್ಲಿ ಚಾರಣ ಮಾಡಿದರು. ಈ ಸಂದರ್ಭದಲ್ಲಿ ಅವರು ಅಲ್ಲಿ ವಾಸವಾಗಿರುವ ಕುಟುಂಬದೊಂದಿಗೆ ಸಮಯ ಕಳೆದರು –ಟ್ವಿಟರ್ ಚಿತ್ರ

ಹೌದು; ಇಂತಹ ಒಂದು ಅಪರೂಪದ ಅನುಭವ ಸ್ವತಃ ವಿರುಷ್ಕಾ ದಂಪತಿಗೆ ಆಗಿದೆ. ಬಾಂಗ್ಲಾದೇಶದ ಎದುರಿನ ಟ್ವೆಂಟಿ–20 ಸರಣಿಯಿಂದ ವಿಶ್ರಾಂತಿ ಪಡೆದಿರುವ ಕೊಹ್ಲಿ ತಮ್ಮ ಪತ್ನಿಯೊಂದಿಗೆ ಈಚೆಗೆ ಭೂತಾನ್‌ನ ಪರ್ವತ ಪ್ರದೇಶವೊಂದಕ್ಕೆ ಚಾರಣಕ್ಕೆ ತೆರಳಿದ್ದರು. 8.5 ಕಿಲೋಮೀಟರ್ಸ್‌ ಚಾರಣ ಮಾಡಿದರು. ಅದೇ ಹಾದಿಯಲ್ಲಿದ್ದ ಪುಟ್ಟ ಹಳ್ಳಿಯ ಮನೆಯೊಂದರ ಅಂಗಳದಲ್ಲಿದ್ದ ಮುದ್ದಾದ ಆಕಳಕರುವಿಗೆ ಅನುಷ್ಕಾ ಗರಿಕೆ ಹುಲ್ಲು ತಿನ್ನಿಸಿದರು. ಆಗ ಆ ಮನೆಯಲ್ಲಿದ್ದವರು ಬಂದು ‘ನೀವು ಯಾರು? ಎಲ್ಲಿಂದ ಬಂದಿದ್ದೀರಿ? ತುಂಬಾ ದಣಿದಿರಬೇಕು. ಬನ್ನಿ ಚಹಾ ಕುಡಿಯಿರಿ’ ಎಂದು ಆತ್ಮೀಯವಾಗಿ ಆಹ್ವಾನಿಸಿದರು. ದಣಿದಿದ್ದ ವಿರುಷ್ಕಾ ದಂಪತಿ ಮನೆಯೊಳಗೆ ಹೋಗಿ ಚಹಾ ಕುಡಿದು, ಬಿಸ್ಕತ್ ತಿಂದು ಅಲ್ಲಿದ್ದವರೊಂದಿಗೆ ತಮ್ಮ ಪರಿಚಯ ಮಾಡಿಕೊಂಡರು.

ಅಲ್ಲಿಂದ ಮರಳಿದ ನಂತರ ಅನುಷ್ಕಾ ಶರ್ಮಾ ಈ ವಿಷಯವನ್ನು ಟ್ವೀಟ್ ಮಾಡಿದ್ದಾರೆ. ‘ಇದೊಂದು ಅಪರೂಪದ ಸಂಗತಿ. ಅಪ್ಪಟ ಮಾನವೀಯ ಸಂಪರ್ಕದ ಕಥೆ. ಹೃದಯ ತಟ್ಟಿತು. ನಾವಲ್ಲಿದ್ದಾಗಲೇ ಬಂದ ಕೆಲವು ವಿದೇಶಿ ಚಾರಣಿಗರಿಗೂ ಆ ಕುಟುಂಬವು ಕರೆದು ಉಪಚರಿಸಿತು. ಆದರೆ ಅದಕ್ಕೆ ಪ್ರತಿಯಾಗಿ ಏನನ್ನೂ ಪಡೆಯಲಿಲ್ಲ’ ಎಂದು ಭಾವುಕರಾಗಿ ವಿವರಿಸಿದ್ದಾರೆ. ಜೊತೆಗೆ ಆ ಕುಟುಂಬದೊಂದಿಗೆ ತಾವಿದ್ದ ಚಿತ್ರವನ್ನೂ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT