ನವಿ ಮುಂಬೈ: ಕಿಮ್ ಗಾರ್ಥ್ (27ಕ್ಕೆ2) ಹಾಗೂ  ಎಲಿಸ್ ಪೆರಿ ಅವರ ಬ್ಯಾಟಿಂಗ್ (ಅಜೇಯ 34) ಬಲದಿಂದ ಆಸ್ಟ್ರೇಲಿಯಾ ತಂಡವು ಭಾನುವಾರ ಇಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಭಾರತದ ಎದುರು ಜಯಿಸಿತು.

ಡಿ.ವೈ.ಪಾಟೀಲ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರು ವಿಕೆಟ್‌ಗಳಿಂದ ಜಯಿಸಿದ ಆಸ್ಟ್ರೇಲಿಯಾ, ಮೂರು ಪಂದ್ಯಗಳ ಸರಣಿಯಲ್ಲಿ 1–1 ಸಮಬಲ ಸಾಧಿಸಿತು.

ಟಾಸ್ ಗೆದ್ದು ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ಜಾರ್ಜಿಯಾ ವೇರ್ ಹ್ಯಾಮ್, ಕಿಮ್ ಗಾರ್ತ್, ಅನಾಬೆಲ್ ಸದರ್ಲೆಂಡ್ ಅವರು  ಭಾರತದ  ಪ್ರಮುಖ ಬ್ಯಾಟರ್‌ಗಳ ವಿಕೆಟ್ ಕಬಳಿಸಿದರು.

ಇದರಿಂದಾಗಿ ತಂಡವು 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 130 ರನ್‌ಗಳ ಸಾಧಾರಣ ಮೊತ್ತ ಗಳಿಸಿತು. ಭಾರತದ ದೀಪ್ತಿ ಶರ್ಮಾ 30 (27ಎ) ಸ್ಮೃತಿ ಮಂದಾನಾ (23; 25ಎ)ಹಾಗೂ ರಿಚಾ ಘೋಷ್ (23, 19ಎ) ರನ್ ಗಳಿಸಿದರು.

ಅದಕ್ಕುತ್ತರವಾಗಿ ಪ್ರವಾಸಿ ತಂಡವು 19 ಓವರ್‌ಗಳಲ್ಲಿ 4 ವಿಕೆಟ್‌ಗೆ 133 ರನ್ ಗಳಿಸಿ ಜಯಿಸಿತು.

300ನೇ ಅಂತರರಾಷ್ಟ್ರೀಯ ಪಂದ್ಯ ಆಡಿದ ಎಲಿಸ್ ಪೆರಿ 34 ರನ್ (21ಎ, 3x4, 2x6) ಗಳಿಸಿದರು. ಇವರಿಗೆ ಸಹ ಆಟಗಾರರಾದ  ಅಲಿಸ್ಸಾ ಹೀಲಿ (26), ಬೆತ್ ಮೂನಿ (20), ತಹ್ಲಿಯಾ ಮೆಗ್ರಾ (19) ಮತ್ತು ಫೋಬೆ ಲಿಚ್‌ಫೀಲ್ಡ್ (ಅಜೇಯ 18) ರನ್ ಗಳಿಸಿದರು.

ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 130 (ಸ್ಮೃತಿ ಮಂದಾನ 23, ರಿಚಾ ಘೋಷ್ 23, ದೀಪ್ತಿ ಶರ್ಮಾ 30, ಕಿಮ್ ಗಾರ್ಥ್ 27ಕ್ಕೆ2, ಸದರ್ಲೆಂಡ್ 18ಕ್ಕೆ2, ವೇರ್‌ಹ್ಯಾಮ್ 17ಕ್ಕೆ2) ಆಸ್ಟ್ರೇಲಿಯಾ: 19 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 133 (ಅಲಿಸಾ ಹೀಲಿ 26, ಬೆತ್ ಮೂನಿ 20, ಎಲಿಸಾ ಪೆರಿ 34. ದೀಪ್ತಿ ಶರ್ಮಾ 22ಕ್ಕೆ2) ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 6 ವಿಕೆಟ್‌ಗಳ ಜಯ. ಪಂದ್ಯದ ಆಟಗಾರ್ತಿ: ಕಿಮ್ ಗಾರ್ಥ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.