ನವಿ ಮುಂಬೈ: ‘ದೈವಬಲ....’ ಎಂಬ ಪದ ಶಫಾಲಿ ವರ್ಮಾ ಅವರಿಗೆ ಸರಿಯಾಗಿ ಒಪ್ಪುತ್ತದೆ. ಅವರು ಸೆಮಿಫೈನಲ್ ಪಂದ್ಯಕ್ಕೆ ಮೊದಲು ತಂಡದಲ್ಲೇ ಇರಲಿಲ್ಲ. ಗಾಯಾಳಾದ ಆರಂಭ ಆಟಗಾರ್ತಿ ಪ್ರತೀಕಾ ರಾವಲ್ ಅವರ ಬದಲು ಸ್ಥಾನ ಪಡೆದ ಶಫಾಲಿ ಈಗ ಭಾರತ ತಂಡದ ವಿಶ್ವಕಪ್ ಫೈನಲ್ ಪಂದ್ಯದ ಗೆಲುವಿನಲ್ಲಿ ಅಚ್ಚಳಿಯದ ಛಾಪು ಮೂಡಿಸಿದ್ದಾರೆ.

ಆಯ್ಕೆ ಸಮಿತಿ ಅಧ್ಯಕ್ಷೆ ನೀತು ಡೇವಿಡ್ ಅವರು ಆಗಸ್ಟ್ನಲ್ಲಿ ಪತ್ರಿಕಾಗೋಷ್ಠಿಯ ವೇಳೆ ಶಫಾಲಿ ಅವರನ್ನು ವಿಶ್ವಕಪ್ ತಂಡದಿಂದ ಹೊರಗಿಟ್ಟಿರುವುದನ್ನು ಖಚಿತಪಡಿಸಿ, ‘ಅವರು ಮುಂದೊಮ್ಮೆ ಭಾರತ ತಂಡಕ್ಕೆ ಆಡುವ ಅವಕಾಶ ಪಡೆಯುತ್ತಾರೆ’ ಎಂದು ‘ಭರವಸೆ’ ನೀಡಿದ್ದರು. 21 ವರ್ಷ ವಯಸ್ಸಿನ ಶಫಾಲಿ ಈ ಹಿಂದೆ ಎರಡೂ ಮಾದರಿಗಳ ವಿಶ್ವಕಪ್ನಲ್ಲಿ ಒಟ್ಟು ಐದು ಪಂದ್ಯಗಳನ್ನು ಆಡಿದ್ದರು.

ಏಕದಿನ ಪಂದ್ಯಗಳಲ್ಲಿ ಶಫಾಲಿ ತಮಗೆ ದೊರೆತ ಅವಕಾಶಗಳಲ್ಲಿ ಏರಿಳಿತ ಕಂಡಿದ್ದರು. ಸತತವಾಗಿ ವಿಫಲರಾದ ಬಳಿಕ ನಂತರ ಅವರನ್ನು ತಂಡದಿಂದ ಹೊರಗಿಡಲಾಯಿತು. ಆರಂಭ ಆಟಗಾರ್ತಿ ಪ್ರತೀಕಾ ರಾವಲ್ ಸ್ಫೂರ್ತಿಯುತ ಪ್ರದರ್ಶನ ನೀಡತೊಡಗಿದ ನಂತರ ಶಫಾಲಿಗೆ ಮರಳಿ ಸ್ಥಾನ ಪಡೆಯುವ ಸಾಧ್ಯತೆಯೂ ದೂರವಾಯಿತು. ಆದರೆ ಲಯದಲ್ಲಿದ್ದ ಪ್ರತೀಕಾ ದುರದೃಷ್ಟವಶಾತ್ ಗಾಯಾಳಾದರು. ಈ ಸಂದರ್ಭದಲ್ಲಿ ಸೂರತ್ನಲ್ಲಿ ಸೀನಿಯರ್ ರಾಷ್ಟ್ರೀಯ ಮಹಿಳಾ ಟಿ20 ಟೂರ್ನಿಯಲ್ಲಿ ಆಡುತ್ತಿದ್ದ ಶಫಾಲಿ ಅವರಿಗೆ ಅದೃಷ್ಟದ ಬಾಗಿಲು ದೊರೆಯಿತು.

ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ ಪಂದ್ಯಕ್ಕೆ ತಯಾರಿ ನಡೆಸಲು ಶಫಾಲಿ ಬಳಿ ಬಳಿ ಹೆಚ್ಚು ಸಮಯವೂ ಇರಲಿಲ್ಲ.

‘ಕ್ರೀಡಾಪಟುವಾಗಿ ಪ್ರತೀಕಾ ಅವರಿಗೆ ಹೀಗಾಗಬಾರದಿತ್ತು. ಯಾವುದೇ ಕ್ರೀಡಾಪಟುವಿಗೆ ಹೀಗೆ ಆಗಲಿ ಎಂದು ಯಾರೂ ಬಯಸುವುದೂ ಇಲ್ಲ. ಆದರೆ ಏನೊ ಒಳ್ಳೆಯದನ್ನು ಮಾಡಲು ದೇವರು ನನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ’ ಎಂದು ಶಫಾಲಿ ಸೆಮಿಫೈನಲ್ಗೆ ಮೊದಲು ಮಾಧ್ಯಮದರಿಗೆ ತಿಳಿಸಿದ್ದರು.

ಪುನರಾಗಮನದ ಮೊದಲ ಯತ್ನದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅವರು ಎದುರಿಸಿದ್ದು ಐದೇ ಎಸೆತಗಳನ್ನು. ಆದರೆ ಫೈನಲ್ನಲ್ಲಿ ಹಲವು ವರ್ಷಗಳ ಅನುಭವಿಯಂತೆ ಆಟವಾಡಿದರು. ಆಕರ್ಷಕ ಹೊಡೆತಗಳಿದ್ದ 87 ರನ್ ಬಾರಿಸಿ, ತಂಡ ದೊಡ್ಡ ಮೊತ್ತ ದಾಖಲಿಸುವುದಕ್ಕೆ ಅಡಿಪಾಯ ಹಾಕಿಕೊಟ್ಟರು. ಆದರೆ ಬೌಲಿಂಗ್ನಲ್ಲಿ ಅವರು ಛಾಪು ಮೂಡಿಸಬಹುದೆಂದು ಯಾರೂ ಯೋಚಿಸಿರಲಿಲ್ಲ– ಆಪ್ತೇಷ್ಟರನ್ನು ಹೊರತುಪಡಿಸಿ. ಭಾನುವಾರದ ಫೈನಲ್ಗಿಂತ ಮೊದಲು 30 ಏಕದಿನ ಪಂದ್ಯಗಳಲ್ಲಿ ಅವರು ಬೌಲಿಂಗ್ ಮಾಡಿದ್ದು ಐದೇ ಬಾರಿ. ಅದೂ ಸಾಂದರ್ಭಿಕ ಬೌಲರ್ ಆಗಿ.

‘ಶಫಾಲಿ ತಂಡಕ್ಕೆ ಬಂದಾಗ, ಅವಳು ದೇಶಿ ಕ್ರಿಕೆಟ್ನಲ್ಲಿ ಸಾಕಷ್ಟು ಬೌಲಿಂಗ್ ಮಾಡುವುದನ್ನು ಗಮನಿಸಿದ್ದೆವು. ಸರ್ (ಕೋಚ್) ಮತ್ತು ನಾನು ಈ ಬಗ್ಗೆ ಅವಳ ಜೊತೆ ಮಾತನಾಡಿದೆವು. ‘ನಾನು 10 ಓವರ್ ಬೇಕಾದರೂ ಮಾಡುವೆ’ ಎಂದು ಶಫಾಲಿ ಹೇಳಿದಳು. ಅದು ಅವಳ ವಿಶ್ವಾಸ ತೋರಿಸಿತು’ ಎಂದು ಹರ್ಮನ್ಪ್ರೀತ್ ಪಂದ್ಯದ ನಂತರ ತಿಳಿಸಿದ್ದಾರೆ.

ಫೈನಲ್ನಲ್ಲಿ ಲಾರಾ ವೋಲ್ವಾರ್ಟ್ ಮತ್ತು ಸುನೆ ಲಸ್ ನಡುವಣ ನಾಲ್ಕನೇ ವಿಕೆಟ್ಗೆ 52 ರನ್ ಸೇರಿಸಿ ದಕ್ಷಿಣ ಆಫ್ರಿಕಾ ತಂಡಕ್ಕೆ ಚೇತರಿಕೆ ನೀಡಿದ್ದರು. ‘ಈ ಜೊತೆಯಾಟ ಬೆಳೆದಾಗ, ಶಫಾಲಿ ಅವರಿಗೆ ಬೌಲಿಂಗ್ ನೀಡೋಣ. ಏನಾಗುತ್ತದೆಯೋ ನೋಡೋಣ ಎಂದು ಎಂಬ ಯೋಚನೆ ಮೂಡಿತು. ಅದು ಮನದ ಮಾತಾಗಿತ್ತು. ಪೆವಿಲಿಯನ್ಗೆ ಮರಳಿದ ನಂತರ ನಾನು ಮನಸ್ಸಿಗೆ ಹೊಳೆದಿದ್ದನ್ನು ಪ್ರಯತ್ನಿಸಬೇಕಿತ್ತು ಎಂದು ಪಶ್ಚಾತ್ತಾಪ ಪಡಬಾರದೆಂದುಕೊಂಡೆ. ಅವಳಿಗೆ ಚೆಂಡು ನೀಡಿದಾಗ ಸತತ ಓವರುಗಳಲ್ಲಿ ವಿಕೆಟ್ ಪಡೆದಳು. ಅದೇ ಪಂದ್ಯಕ್ಕೆ ತಿರುವು ನೀಡಿತು’ ಎಂದು ಹರ್ಮನ್ಪ್ರೀತ್ ವಿವರಿಸಿದರು.

ಫೈನಲ್ನಲ್ಲಿ ಅರ್ಧ ಶತಕ ಬಾರಿಸಿದ ಅತಿ ಕಿರಿಯ ಆಟಗಾರ್ತಿ ಎಂಬ ಶ್ರೇಯವೂ ಅವರದಾಯಿತು.

‘ಮಹಿಳಾ ಟಿ20 ಟ್ರೋಫಿಯಲ್ಲಿ ಶಫಾಲಿ ಅವರ ಪ್ರಗತಿಯನ್ನು ಗಮನಿಸುತ್ತ ಇದ್ದೆ. ಅವಳು ತನ್ನ ಪಾಲಿನ ಎಲ್ಲ ನಾಲ್ಕೂ ಓವರುಗಳನ್ನು ಮಾಡುತ್ತಿದ್ದಳೂ. ಇದು ಆರನೇ ಬೌಲರ್ ಕುರಿತಾದ ಚರ್ಚೆಗೆ ಕೊನೆಹಾಡಲು ನೆರವಾಯಿತು’ ಎಂದು ಕೋಚ್ ಅಮೋಲ್ ಮಜುಂದಾರ್ ತಿಳಿಸಿದರು.

‘ಶಫಾಲಿ ಅವರು ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವರೇ ಅಥವಾ ಸ್ಮೃತಿ ಪ್ರತೀಕಾ ಚೇತರಿಸಿ ಮರಳಿದಾಗ ಅವರಿಗಾಗಿ ಸ್ಥಾನ ತೆರವು ಮಾಡುವರೇ ಎಂಬುದನ್ನು ಕಾಲವೇ ಹೇಳಲಿದೆ. ಆದರೆ ಸದ್ಯ 21 ವರ್ಷದ ಈ ತಾರೆ ಯಶಸ್ಸನ್ನು ಸವಿಯುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.