ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತ-ಪಾಕ್ ಪಂದ್ಯದ ಟಿಕೆಟ್ ಕೇಳಿದ ಅಭಿಮಾನಿಗೆ ಶಾಹೀನ್ ಕೊಟ್ಟ ರಿಯಾಕ್ಷನ್ ನೋಡಿ!

Published : 22 ಅಕ್ಟೋಬರ್ 2021, 12:16 IST
ಫಾಲೋ ಮಾಡಿ
Comments

ದುಬೈ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯವು ಅಕ್ಟೋಬರ್ 24 ಭಾನುವಾರ ದುಬೈಯಲ್ಲಿ ನಡೆಯಲಿದೆ.

ಇದರಂತೆ ಎರಡೂ ದೇಶಗಳ ಕ್ರಿಕೆಟ್ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮನೆ ಮಾಡಿದೆ. ಟಿಕೆ‌ಟ್‌ಗಳಿಗೂ ಭಾರಿ ಬೇಡಿಕೆ ಕಂಡುಬಂದಿದೆ.

ಈ ನಡುವೆ ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದ ಟಿಕೆಟ್ ಕೇಳಿದ ಅಭಿಮಾನಿಗೆ ಪಾಕ್ ಬೌಲರ್ ಶಾಹೀನ್ ಅಫ್ರಿದಿ ವಿಭಿನ್ನ ರೀತಿಯಲ್ಲಿ ರಿಯಾಕ್ಷನ್ ಕೊಟ್ಟಿದ್ದಾರೆ.

ಅಭ್ಯಾಸದ ಬಳಿಕ ತೆರಳುತ್ತಿದ್ದ ಶಾಹೀನ್‌ಗೆ ಅಭಿಮಾನಿಯಿಂದ ಪ್ರಶ್ನೆ ಎದುರಾಗಿತ್ತು. 'ಭಾರತ ಹಾಗೂ ಪಾಕಿಸ್ತಾನ ನಡುವಣ ಪಂದ್ಯದ ಟಿಕೆಟ್ ನಿಮ್ಮ ಬಳಿ ಇದೆಯೇ ?' ಎಂದು ಕೇಳಿದರು.

ತಂಪು ಪಾನೀಯ ಸೇವಿಸುತ್ತಾ ಸಾಗುತ್ತಿದ್ದ ಶಾಹೀನ್, ತಕ್ಷಣ ಜೇಬಿಗೆ ಕೈ ಹಾಕಿ 'ಅಯ್ಯೋ ಇಲ್ಲ' ಎಂಬಂತೆ ಪ್ರತಿಕ್ರಿಯಿಸಿದರು. ಇದು ನೆರೆದಿದ್ದವರಲ್ಲಿ ನಗು ಬೀರಿತು.

21 ವರ್ಷದ ಶಾಹೀನ್, ವಿಶ್ವಕಪ್‌ನಲ್ಲಿ ಪಾಕ್ ನಿರ್ವಹಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆಯಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT