ಗುರುವಾರ , ಸೆಪ್ಟೆಂಬರ್ 24, 2020
19 °C

ಶೋಯಬ್‌ ಮಲಿಕ್‌ಗೆ ಎರಡು ಬಾರಿ ಕೋವಿಡ್‌ ತಪಾಸಣೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕರಾಚಿ: ಟ್ವೆಂಟಿ–20 ಕ್ರಿಕೆಟ್‌ ಪರಿಣತ ಆಟಗಾರ ಪಾಕಿಸ್ತಾನದ ಶೋಯಬ್‌ ಮಲಿಕ್‌ ಅವರು ಆಗಸ್ಟ್‌ 15ರಂದು ಇಂಗ್ಲೆಂಡ್‌ಗೆ ತೆರಳಲಿದ್ದು, ಅದಕ್ಕಿಂತಲೂ ಮುನ್ನ ಎರಡು ಬಾರಿ ಕೋವಿಡ್‌–19 ಪರೀಕ್ಷೆಗೆ ಒಳಗಾಗಬೇಕಿದೆ. ಇಂಗ್ಲೆಂಡ್‌ ವಿರುದ್ಧದ ಮೂರು ಟ್ವೆಂಟಿ–20 ಪಂದ್ಯಗಳ ಸರಣಿಗಾಗಿ ಅವರು ಸೌತಾಂಪ್ಟನ್‌ನಲ್ಲಿರುವ ತಮ್ಮ ತಂಡವನ್ನು ಸೇರಿಕೊಳ್ಳಲಿದ್ದಾರೆ.

‘ಕೋವಿಡ್‌ ತಡೆ ನಿಯಮಗಳನ್ವಯ ಎರಡು ಬಾರಿ ಪರೀಕ್ಷೆಗೆ ಒಳಗಾಗಿ, ಸೋಂಕು ಇಲ್ಲ ಎಂದಾದ ಬಳಿಕ ಶೋಯಬ್‌ ಮಲಿಕ್‌ ಅವರು ಆಗಸ್ಟ್‌ 15ರಂದು ಸೌತಾಂಪ್ಟನ್‌ಗೆ ತೆರಳಲಿದ್ದಾರೆ‘ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಹೇಳಿದೆ.

ಇಂಗ್ಲೆಂಡ್‌ ಮತ್ತು ಪಾಕ್‌ ತಂಡಗಳು ಸದ್ಯ ಟೆಸ್ಟ್‌ ಸರಣಿಯನ್ನು ಆಡುತ್ತಿವೆ. ಈ ಸರಣಿಯ ನಂತರ ಮ್ಯಾಂಚೆಸ್ಟರ್‌ನಲ್ಲಿ ಮೂರು ಟಿ20 ಪಂದ್ಯಗಳು ಕ್ರಮವಾಗಿ ಆಗಸ್ಟ್‌ 28, 30 ಹಾಗೂ ಸೆಪ್ಟೆಂಬರ್‌ 1ರಂದು ಜೀವ ಸುರಕ್ಷಾ (ಬಯೋ ಸೆಕ್ಯೂರ್)‌ ವಾತಾವರಣದಲ್ಲಿ ನಿಗದಿಯಾಗಿವೆ.

ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಅವರನ್ನು ಶೋಯಬ್‌ ವರಿಸಿದ್ದು, ಈ ದಂಪತಿಗೆ ಇಜಾನ್‌ ಹೆಸರಿನ ಒಂದು ವರ್ಷದ ಪುತ್ರನಿದ್ದಾನೆ. ಕೋವಿಡ್‌ನಿಂದ ವಿಧಿಸಿದ್ದ ಪ್ರಯಾಣ ನಿರ್ಬಂಧದ ಹಿನ್ನೆಲೆಯಲ್ಲಿ ಶೋಯಬ್‌ ಅವರಿಗೆ ಈ ವರ್ಷದ ಆರಂಭದಿಂದ ತನ್ನ ಕುಟುಂಬವನ್ನು ಭೇಟಿ ಮಾಡುವ ಅವಕಾಶ ಲಭಿಸಿರಲಿಲ್ಲ.

ಸದ್ಯ ಶೋಯಬ್‌ ಅವರಿಗೆ ಯುಎಇನಲ್ಲಿ ಕೆಲಕಾಲ ಕುಟುಂಬದೊಂದಿಗೆ ಸಮಯ ಕಳೆಯಲು ಪಿಸಿಬಿ ಅನುಮತಿ ನೀಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು