ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಪರೀಕ್ಷೆಯಲ್ಲಿ ‘ನೆಗೆಟಿವ್‌’: ಪಾಕ್‌ ತಂಡದ 6 ಕ್ರಿಕೆಟಿಗರು ಇಂಗ್ಲೆಂಡ್‌ಗೆ

Last Updated 30 ಜೂನ್ 2020, 10:23 IST
ಅಕ್ಷರ ಗಾತ್ರ

ಕರಾಚಿ: ಸತತ ಎರಡು ಕೋವಿಡ್‌–19 ಪರೀಕ್ಷೆಗಳಲ್ಲಿ ‘ನೆಗೆಟಿವ್‌’ ಫಲಿತಾಂಶ ಬಂದಿರುವ ಕಾರಣ ಪಾಕಿಸ್ತಾನದ ಆರು ಕ್ರಿಕೆಟಿಗರಿಗೆ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲು ಅನುಮತಿ ನೀಡಲಾಗಿದೆ.

‘ಮೊಹಮ್ಮದ್‌ ಹಫೀಜ್‌, ವಹಾಬ್‌ ರಿಯಾಜ್‌, ಮೊಹಮ್ಮದ್‌ ಹಸ್ನೇನ್‌, ಶಾದಾಬ್‌ ಖಾನ್‌, ಮೊಹಮ್ಮದ್‌ ರಿಜ್ವಾನ್‌ ಮತ್ತು ಫಖರ್‌ ಜಮಾನ್‌ ಅವರು ಇಂಗ್ಲೆಂಡ್‌ಗೆ ಪಯಣಿಸಲಿದ್ದಾರೆ’ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿಯು (ಪಿಸಿಬಿ) ಮಂಗಳವಾರ ತಿಳಿಸಿದೆ.

ಇಂಗ್ಲೆಂಡ್‌ ಪ್ರವಾಸಕ್ಕೆ ಆಯ್ಕೆಯಾಗಿದ್ದ 10 ಮಂದಿ ಕ್ರಿಕೆಟಿಗರಿಗೆ ಕೋವಿಡ್‌–19 ಇರುವುದು ದೃಢಪಟ್ಟಿತ್ತು. ಈ ಪಟ್ಟಿಯಲ್ಲಿ ಹಫೀಜ್‌, ವಹಾಬ್‌, ಹಸ್ನೇನ್‌, ಶಾದಾಬ್‌, ರಿಜ್ವಾನ್‌ ಮತ್ತು ಜಮಾನ್‌ ಅವರೂ ಇದ್ದರು. ಹೀಗಾಗಿಯೇ ಇವರನ್ನು ಬಿಟ್ಟು 20 ಸದಸ್ಯರ ತಂಡವು ಹೋದ ಭಾನುವಾರ ಆಂಗ್ಲರ ನಾಡಿಗೆ ಪ್ರಯಾಣ ಕೈಗೊಂಡಿತ್ತು.

‘ಇದೇ ತಿಂಗಳ 26 ಮತ್ತು 29ರಂದು ಹತ್ತು ಮಂದಿಯನ್ನೂ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ಆರು ಜನರಿಗೆ ಕೊರೊನಾ ಸೋಂಕು ತಗುಲಿಲ್ಲ ಎಂಬುದು ಖಾತರಿಯಾಗಿದೆ. ಇಮ್ರಾನ್‌ ಖಾನ್‌, ಖಾಸಿಫ್‌ ಭಟ್ಟಿ, ಹೈದರ್ ಅಲಿ ಮತ್ತು ಹ್ಯಾರಿಸ್‌ ರೌಫ್‌ ಅವರಿಗೆ ಕೋವಿಡ್‌ ಇರುವುದು ಎರಡು ಪರೀಕ್ಷೆಗಳಿಂದಲೂ ದೃಢಪಟ್ಟಿದೆ. ಈ ನಾಲ್ಕು ಮಂದಿಯನ್ನು ಇಂಗ್ಲೆಂಡ್‌ಗೆ ಕಳುಹಿಸುವುದಿಲ್ಲ’ ಎಂದು ಪಿಸಿಬಿ ಹೇಳಿದೆ.

ಪಾಕ್‌ ತಂಡವು ಇಂಗ್ಲೆಂಡ್‌ ಪ್ರವಾಸದ ವೇಳೆ ತಲಾ ಮೂರು ಪಂದ್ಯಗಳ ಟೆಸ್ಟ್‌ ಹಾಗೂ ಟ್ವೆಂಟಿ–20 ಕ್ರಿಕೆಟ್‌ ಸರಣಿಗಳನ್ನು ಆಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT