ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಪರೀಕ್ಷೆ ಪೂರ್ಣಗೊಳಿಸಿದ ಸ್ಮಿತ್‌, ಅರ್ಚರ್‌, ಬಟ್ಲರ್‌

Last Updated 19 ಸೆಪ್ಟೆಂಬರ್ 2020, 14:34 IST
ಅಕ್ಷರ ಗಾತ್ರ

ದುಬೈ: ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸ್ಟೀವ್‌ ಸ್ಮಿತ್‌, ಸಹ ಆಟಗಾರರಾದ ಜೋಫ್ರಾ ಆರ್ಚರ್‌ ಹಾಗೂ ಜೋಸ್‌ ಬಟ್ಲರ್‌ ಅವರು ಕೋವಿಡ್–19‌ಕಡ್ಡಾಯ ಪರೀಕ್ಷೆಯನ್ನು ಪೂರ್ಣಗೊಳಿಸಿದ್ದಾರೆ. ಇದೇ 22ರಂದು ರಾಜಸ್ಥಾನ ತಂಡವು ಚೆನ್ನೈ ಸೂಪರ್ ಕಿಂಗ್ಸ್ ಎದುರು ಆಡಲಿದ್ದು, ಈ ಪಂದ್ಯಕ್ಕೆ ಲಭ್ಯವಾಗುವ ಸಾಧ್ಯತೆಯಿದೆ.

ಸೆಪ್ಟೆಂಬರ್‌ 17ರಂದು ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್‌ನ 21 ಆಟಗಾರರು ವಿಶೇಷ ವಿಮಾನದ ಮೂಲಕ ಯುಎಇಗೆ ಬಂದಿಳಿದಿದ್ದರು. ಆ ತಂಡದಲ್ಲಿ ಸ್ಮಿತ್‌, ಆರ್ಚರ್‌ ಹಾಗೂ ಬಟ್ಲರ್‌ ಇದ್ದರು.

‘ಸ್ಮಿತ್‌, ಬಟ್ಲರ್‌ ಹಾಗೂ ಆರ್ಚರ್‌ ಅವರು ಶುಕ್ರವಾರ ಕೋವಿಡ್‌ ಪರೀಕ್ಷೆಗೆ ಒಳಪಟ್ಟಿದ್ದು, ಎಲ್ಲರ ಫಲಿತಾಂಶ ನೆಗೆಟಿವ್‌ ಬಂದಿದೆ. ಅವರ ಕ್ವಾರಂಟೈನ್‌ ಅವಧಿಯನ್ನು 36 ತಾಸುಗಳಿಗೆ ಕಡಿತಗೊಳಿಸಿರುವದರಿಂದ ಆಯ್ಕೆಗೆ ಲಭ್ಯವಿದ್ದಾರೆ‘ ಎಂದು ಐಪಿಎಲ್‌ ಮೂಲಗಳು ತಿಳಿಸಿವೆ.

ಆಸ್ಟ್ರೇಲಿಯಾ ತಂಡದ ಮಾಜಿ ನಾಯಕರೂ ಆಗಿರುವ ಸ್ಮಿತ್, ಕಂಕಶನ್‌ ಸಮಸ್ಯೆಯಿಂದ ಬಳಲಿದ ಕಾರಣ ಇಂಗ್ಲೆಂಡ್‌ ವಿರುದ್ಧದ ಮೂರೂ ಏಕದಿನ ಪಂದ್ಯಗಳಲ್ಲಿ ಆಡಿರಲಿಲ್ಲ.

ರಾಜಸ್ಥಾನ ರಾಯಲ್ಸ್‌ ಆಡುವ ಮೊದಲ ಪಂದ್ಯದಲ್ಲಿ ಸ್ಮಿತ್‌ ಅಲಭ್ಯರಾದರೆ, ಬಟ್ಲರ್‌ ಅವರು ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT