ಭಾನುವಾರ, ಏಪ್ರಿಲ್ 5, 2020
19 °C

IND vs SA ಕ್ರಿಕೆಟ್ ಸರಣಿಗೆ ಕೋವಿಡ್ ಭೀತಿ: ಮಾಸ್ಕ್ ಧರಿಸಿದ ಯಜುವೇಂದ್ರ ಚಾಹಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧರ್ಮಶಾಲಾ: ಟೀಂ ಇಂಡಿಯಾದ ಪ್ರಮುಖ ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ ಅವರು ಕೋವಿಡ್‌–19 ವೈರಸ್‌ ಭೀತಿಯಿಂದಾಗಿ ಮಾಸ್ಕ್‌ ಧರಿಸಿರುವ ಚಿತ್ರವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯು ಇದೇ 12ರಿಂದ ಆರಂಭವಾಗಲಿದ್ದು, ಮೊದಲ ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದೆ. ವಿರಾಟ್‌ ಕೊಹ್ಲಿ ನೇತೃತ್ವದ ಭಾರತ ತಂಡವು ಈ ಟೂರ್ನಿ ಸಲುವಾಗಿ ಇಂದು ಧರ್ಮಶಾಲಾಗೆ ತೆರಳಿದೆ. ತಡವಾಗಿ ತಂಡ ಕೂಡಿಕೊಂಡಿರುವ ಚಾಹಲ್‌, ದೆಹಲಿಯಿಂದ ತೆರಳುವ ಮುನ್ನ ವಿಮಾನನಿಲ್ದಾಣದಲ್ಲಿ ತೆಗೆದುಕೊಂಡಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

ದಕ್ಷಿಣ ಆಫ್ರಿಕಾ ತಂಡ ಸೋಮವಾರವೇ ಇಲ್ಲಿಗೆ ಆಗಮಿಸಿದೆ.

ಮುನ್ನಚ್ಚರಿಕೆ
ಕೋವಿಡ್‌–19 ವೈರಸ್‌ ಸೋಂಕು ಪ್ರಪಂಚದಾದ್ಯಂತ ಆರೋಗ್ಯ ಭೀತಿ ಉಂಟುಮಾಡಿದೆ. ಸದ್ಯ ಭಾರತದಲ್ಲಿ 44 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ಹೀಗಾಗಿ ಉಭಯ ಆಟಗಾರರು ಮುನ್ನೆಚ್ಚರಿಕೆಯಾಗಿ ಸುರಕ್ಷತಾ ಕ್ರಮಗಳನ್ನು ಅನುಸರಿಸಲಿದ್ದಾರೆ.

ಅಭಿಮಾನಿಗಳೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದು, ಹಸ್ತಲಾಘವ ನೀಡುವುದಕ್ಕೆ ಕಡಿವಾಣ ಹಾಕಲಿದ್ದಾರೆ. ‘ಭಾರತದಲ್ಲಿ ಇದ್ದಷ್ಟು ದಿನ ನಮ್ಮ ಆಟಗಾರರು ಯಾರಿಗೂ ಹಸ್ತಲಾಘವ ನೀಡುವುದಿಲ್ಲ. ಈಗ ಎಲ್ಲೆಡೆಯೂ ಕೋವಿಡ್‌–19 ವೈರಸ್‌ ಹರಡುತ್ತಿದೆ. ಕೋವಿಡ್‌ ಸೋಂಕು ನಮ್ಮ ಆಟಗಾರರಿಗೂ ತಗಲುವ ಅಪಾಯವಿದೆ. ಆಟಗಾರರ ಸುರಕ್ಷತೆ ಬಹಳ ಮುಖ್ಯ.’ ಎಂದು ದಕ್ಷಿಣ ಆಫ್ರಿಕಾ ತಂಡದ  ಮುಖ್ಯ ಕೋಚ್‌ ಮಾರ್ಕ್‌ ಬೌಷರ್‌ ತಿಳಿಸಿದ್ದಾರೆ.

ಭಾರತ ತಂಡ: ವಿರಾಟ್‌ ಕೊಹ್ಲಿ (ನಾಯಕ), ಶಿಖರ್‌ ಧವನ್‌, ಪೃಥ್ವಿ ಶಾ, ಕೆ.ಎಲ್‌.ರಾಹುಲ್‌, ಮನೀಷ್‌ ಪಾಂಡೆ, ಶ್ರೇಯಸ್‌ ಅಯ್ಯರ್‌, ರಿಷಭ್‌ ಪಂತ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್‌ ಕುಮಾರ್‌, ಯಜುವೇಂದ್ರ ಚಾಹಲ್‌, ಜಸ್‌ಪ್ರೀತ್‌ ಬೂಮ್ರಾ, ನವದೀಪ್‌ ಶೈನಿ, ಕುಲದೀಪ್ ಯಾದವ್‌, ಶುಭಮನ್‌ ಗಿಲ್‌

ದಕ್ಷಿಣ ಆಫ್ರಿಕಾ ತಂಡ: ಕ್ವಿಂಟನ್‌ ಡಿ ಕಾಕ್‌ (ನಾಯಕ ಮತ್ತು ವಿಕೆಟ್‌ ಕೀಪರ್‌), ತೆಂಬಾ ಬವುಮಾ, ವ್ಯಾನ್‌ ಡರ್‌ ಡುಸನ್‌, ಫಾಫ್‌ ಡು ಪ್ಲೆಸಿ, ಕೈಲ್‌ ವೆರ‍್ರಿನ್‌, ಹೆನ್ರಿಕ್‌ ಕ್ಲಾಸೆನ್‌, ಡೇವಿಡ್‌ ಮಿಲ್ಲರ್‌, ಜಾನ್‌ ಜಾನ್‌ ಸ್ಮಟ್ಸ್‌, ಆ್ಯಂಡಿಲೆ ಪಿಶುವಾಯೊ, ಲುಂಗಿ ಗಿಡಿ, ಲುಥೊ ಸಿಪಾಮ್ಲಾ, ಬ್ಯೂರನ್‌ ಹೆನ್ರಿಕ್ಸ್‌, ಎನ್ರಿಚ್‌ ನೋರ್ಟ್ಜೆ, ಜಾರ್ಜ್‌ ಲಿಂಡ್‌, ಕೇಶವ್‌ ಮಹಾರಾಜ್‌ ಹಾಗೂ ಜನ್ನೆಮನ್‌ ಮಲಾನ್‌.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು