ಜೋಹಾನ್ಸ್‌ಬರ್ಗ್: ಪರಿಣಾಮಕಾರಿ ದಾಳಿ ಸಂಘಟಿಸಿದ ಬೌಲರ್‌ಗಳು ದಕ್ಷಿಣ ಆಫ್ರಿಕಾ ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟರು.
ವಾಂಡರರ್ಸ್ ಕ್ರೀಡಾಂಗಣದಲ್ಲಿ ಶನಿವಾರ ಕೊನೆಗೊಂಡ ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ತಂಡವು 284 ರನ್‌ಗಳಿಂದ ಗೆದ್ದಿತು. ಇದರೊಂದಿಗೆ ಎರಡು ಪಂದ್ಯಗಳ ಸರಣಿಯನ್ನು ಕ್ಲೀನ್‌ಸ್ವೀಪ್ ಮಾಡಿತು.
ಪಂದ್ಯದ ನಾಲ್ಕನೇ ದಿನವಾದ ಶನಿವಾರ ಪ್ರವಾಸಿ ವೆಸ್ಟ್ ಇಂಡೀಸ್ 391 ರನ್‌ಗಳ ಗೆಲುವಿನ ಗುರಿ ಪಡೆದಿತ್ತು.
ಕಗಿಸೊ ರಬಾಡ (19ಕ್ಕೆ 2), ಸೈಮನ್ ಹರ್ಮರ್ (45ಕ್ಕೆ 3), ಕೇಶವ್ ಮಹಾರಾಜ್ (4ಕ್ಕೆ 3), ಗೆರಾಲ್ಡ್ ಕೊಯಟ್‌ಜಿ (37ಕ್ಕೆ 3) ಅವರನ್ನೊಳಗೊಂಡ ಆಫ್ರಿಕಾ ಬೌಲಿಂಗ್ ಪಡೆ ಎದುರಾಳಿ ಬ್ಯಾಟರ್‌ಗಳನ್ನು 106 ರನ್‌ಗಳಿಗೆ ನಿಯಂತ್ರಿಸಿದರು. ವೆಸ್ಟ್ ಇಂಡೀಸ್ ಪರ ಜೋಷುವಾ ಗಳಿಸಿದ 34 ರನ್‌ಗಳೇ ಗರಿಷ್ಠ ಸ್ಕೋರ್ ಎನಿಸಿತು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ದಕ್ಷಿಣ ಆಫ್ರಿಕಾ: 92.2 ಓವರ್‌ಗಳಲ್ಲಿ 320. ವೆಸ್ಟ್ ಇಂಡೀಸ್: 79.3 ಓವರ್‌ಗಳಲ್ಲಿ 251. ಎರಡನೇ ಇನಿಂಗ್ಸ್: ದಕ್ಷಿಣ ಆಫ್ರಿಕಾ: 100.4 ಓವರ್‌ಗಳಲ್ಲಿ 321 (ಏಡನ್ ಮರ್ಕರಂ 18, ತೆಂಬಾ ಬವುಮಾ 172, ವಿಯಾನ್ ಮುಲ್ದರ್ 42; ಅಲ್ಜರಿ ಜೋಸೆಫ್ 49ಕ್ಕೆ 2, ಜೇಸನ್ ಹೋಲ್ಡರ್ 48ಕ್ಕೆ 3, ಕೈಲ್ ಮೇಯರ್ಸ್ 46ಕ್ಕೆ 3). ವೆಸ್ಟ್ ಇಂಡೀಸ್: 35.1 ಓವರ್‌ಗಳಲ್ಲಿ 106 (ಜೋಷುವಾ ಡಿಸಿಲ್ವಾ 34, ಜೇಸನ್ ಹೋಲ್ಡರ್ 19; ಕಗಿಸೊ ರಬಾಡ 19ಕ್ಕೆ 2, ಸೈಮನ್ ಹರ್ಮರ್ 45ಕ್ಕೆ 3, ಕೇಶವ್ ಮಹಾರಾಜ್ 4ಕ್ಕೆ 3, ಗೆರಾಲ್ಡ್ ಕೊಯಟ್‌ಜಿ 37ಕ್ಕೆ 3). ಫಲಿತಾಂಶ: ದಕ್ಷಿಣ ಆಫ್ರಿಕಾಕ್ಕೆ 284 ರನ್‌ಗಳ ಜಯ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.