ಜೋಹಾನ್ಸ್‌ಬರ್ಗ್: ಅಲ್ಪಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ದಕ್ಷಿಣ ಆಫ್ರಿಕಾ ತಂಡಕ್ಕೆ ನಾಯಕ ತೆಂಬಾ ಬವುಮಾ ಆಸರೆಯಾದರು.
ಅವರ ಶತಕದ (ಬ್ಯಾಟಿಂಗ್ 171, 275 ಎಸೆತ, 4X20) ಬಲದಿಂದ ಆತಿಥೇಯ ತಂಡವು ವೆಸ್ಟ್ ಇಂಡೀಸ್ ಎದುರಿನ ಎರಡನೇ ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ 7 ವಿಕೆಟ್‌ಗೆ 287 ರನ್ ಗಳಿಸಿದೆ.
ಮೂರನೇ ದಿನದಾಟದ ಅಂತ್ಯಕ್ಕೆ ಬವುಮಾ ಬಳಗ ಒಟ್ಟು 356 ರನ್‌ಗಳ ಮುನ್ನಡೆ ಸಾಧಿಸಿದೆ.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ದಕ್ಷಿಣ ಆಫ್ರಿಕಾ: 92.2 ಓವರ್‌ಗಳಲ್ಲಿ 320. ವೆಸ್ಟ್ ಇಂಡೀಸ್: 79.3 ಓವರ್‌ಗಳಲ್ಲಿ 251. ಎರಡನೇ ಇನಿಂಗ್ಸ್: ದಕ್ಷಿಣ ಆಫ್ರಿಕಾ: 93 ಓವರ್‌ಗಳಲ್ಲಿ 7 ವಿಕೆಟ್‌ಗೆ 287 (ಏಡನ್ ಮರ್ಕರಂ 18, ತೆಂಬಾ ಬವುಮಾ ಬ್ಯಾಟಿಂಗ್ 171, ವಿಯಾನ್ ಮುಲ್ದರ್ 42, ಸೈಮನ್ ಹರ್ಮರ್ 19, ಕೇಶವ್ ಮಹಾರಾಜ್ ಬ್ಯಾಟಿಂಗ್ 3; ಅಲ್ಜರಿ ಜೋಸೆಫ್ 49ಕ್ಕೆ 2, ಕೈಲ್ ಮೇಯರ್ಸ್ 25ಕ್ಕೆ 2).
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.