ಕೊಲಂಬೊ: ಕೋವಿಡ್ ಸಾಂಕ್ರಾಮಿಕ ರೋಗದ ಭೀತಿ ಹಿನ್ನೆಲೆಯಲ್ಲಿ ಭಾರತದ ವಿರುದ್ಧದ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಗಾಗಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಆಟಗಾರರ ಎರಡು ಗುಂಪುಗಳನ್ನು ಬಯೋ ಬಬಲ್‌ನಲ್ಲಿ ಇರಿಸಿದೆ.

ಆಟಗಾರರ ಒಂದು ಗುಂಪನ್ನು ಕೊಲಂಬೊದಲ್ಲಿ ಹಾಗೂ ಇನ್ನೊಂದು ಗುಂಪನ್ನು ಡಂಬುಲಾದಲ್ಲಿ ಇರಿಸಲಾಗಿದೆ.

ಓದಿ:ಶ್ರೀಲಂಕಾ – ಭಾರತ ಕ್ರಿಕೆಟ್ ಸರಣಿಗೆ ಕೋವಿಡ್ ಕರಿ ನೆರಳು

‘ಇಎಸ್‌ಪಿಎನ್ ಕ್ರಿಕ್‌ಇನ್ಫೊ’ ಮಾಹಿತಿ ಪ್ರಕಾರ, ಈ ಎರಡು ಗುಂಪುಗಳ ಆಟಗಾರರು ಜುಲೈ 13ರಿಂದ ಭಾರತದ ವಿರುದ್ಧ ನಡೆಯಲಿರುವ ಏಕದಿನ ಕ್ರಿಕೆಟ್ ಸರಣಿಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.

ಶ್ರೀಲಂಕಾ ತಂಡದ ಡೇಟಾ ಅನಾಲಿಸ್ಟ್ ಜಿ.ಟಿ. ನಿರೋಶನ್‌ಗೆ ಕೋವಿಡ್ ಸೋಂಕು ತಗುಲಿರುವುದು ಶುಕ್ರವಾರ ದೃಢಪಟ್ಟಿದೆ. ಇದಕ್ಕೂ ಮುನ್ನ ತಂಡದ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲವರ್ ಅವರಿಗೆ ಕೋವಿಡ್ ದೃಢಪಟ್ಟಿತ್ತು.

ಓದಿ:ಇಂಗ್ಲೆಂಡ್ ಏಕದಿನ ಕ್ರಿಕೆಟ್ ತಂಡದ 7 ಸದಸ್ಯರಿಗೆ ಕೋವಿಡ್

ವರದಿಯೊಂದರ ಪ್ರಕಾರ, ಈ ಇಬ್ಬರೂ ಸಿಬ್ಬಂದಿಯಲ್ಲಿ ಕೊರೊನಾ ವೈರಸ್‌ನ ‘ಡೆಲ್ಟಾ ರೂಪಾಂತರ’ ಪತ್ತೆಯಾಗಿದೆ ಎನ್ನಲಾಗಿದೆ. ತಂಡದ ಇತರ ಎಲ್ಲ ಆಟಗಾರರು ಕ್ವಾರಂಟೈನ್‌ನಲ್ಲಿ ಇದ್ದು ಅವರೆಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.