ಗುರುವಾರ , ಆಗಸ್ಟ್ 22, 2019
27 °C

ರಾಜಸ್ಥಾನ ರಾಯಲ್ಸ್‌ ನಾಯಕತ್ವದಿಂದ ರಹಾನೆ ಔಟ್‌: ಸ್ಟೀವ್‌ ಸ್ಮಿತ್‌ಗೆ ಜವಾಬ್ದಾರಿ

Published:
Updated:

ಜೈಪುರ: ರಾಜಸ್ಥಾನ ರಾಯಲ್ಸ್‌ ಐಪಿಎಲ್‌ ತಂಡವು ಅಜಿಂಕ್ಯಾ ರಹಾನೆ ಅವರನ್ನು ತಂಡದ ನಾಯಕತ್ವದಿಂದ ಕೆಳಗಿಳಿಸಿ ಆಸ್ಟ್ರೇಲಿಯಾ ಕ್ರಿಕೆಟ್‌ ತಂಡದ ನಾಯಕ ಸ್ಟೀವ್‌ ಸ್ಮಿತ್‌ ಅವರನ್ನು ದಿಢೀರನೇ ನಾಯಕನನ್ನಾಗಿ ಮಾಡಿದೆ. 

ಇನ್ನುಳಿದ ಎಲ್ಲ ಪಂದ್ಯಗಳನ್ನೂ ಸ್ಟೀವ್‌ ಸ್ಮಿತ್‌ ಅವರೇ ಮುನ್ನಡೆಸುವುದಾಗಿ ರಾಜಸ್ಥಾನ ರಾಯಲ್ಸ್‌ ತಂಡ ಪ್ರಕಟಿಸಿದೆ.  ಪ್ರಸಕ್ತ ಐಪಿಎಲ್‌ ಆವೃತ್ತಿಯಲ್ಲಿ ರಾಜಸ್ಥಾನ ರಾಯಲ್ಸ್‌ ತಂಡವು ಅಜಿಂಕ್ಯಾ ರಹಾನೆ ನಾಯಕತ್ವದಲ್ಲಿ ಈ ವರೆಗೆ 8 ಪಂದ್ಯಗಳನ್ನಾಡಿದ್ದು, ಕೇವಲ ಎರಡರಲ್ಲಿ ಮಾತ್ರ ಗೆದ್ದಿದೆ. ಈ ವರೆಗೆ ಸೋಲಿನ ಯಾನ ಮಾಡಿರುವ ತಂಡ ಏ.20ರಂದು 9ನೇ ಹಾಗೂ ನಿರ್ಣಾಯಕ ಪಂದ್ಯವನ್ನಾಡುತ್ತಿದೆ. ಅದು ಮಾಡು ಇಲ್ಲವೇ ಮಡಿ ಎಂಬಂತಾಗಿದ್ದು, ಗೆಲ್ಲಲೇ ಬೇಕಾದ ಅನಿರ್ವಾರ್ಯತೆಯಲ್ಲಿದೆ. ಈ ಹಿನ್ನೆಲೆಯಲ್ಲಿ ತಂಡದ ಮಾಲೀಕರು ರಹಾನೆ ಅವರನ್ನು ಬದಿಗೊತ್ತಿ ಸ್ಮಿತ್‌ಗೆ ಜವಾಬ್ದಾರಿ ಹೊರಿಸಿ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.    

ಈ ಬಗ್ಗೆ ಮಾತನಾಡಿರುವ ರಾಜಸ್ಥಾನ ರಾಯಲ್ಸ್‌ ತಂಡದ ಮುಖ್ಯಸ್ಥ ಝುಬಿನ್‌ ಬರುಚಾ, ‘ಕ್ರಿಕೆಟ್‌ನ ಎಲ್ಲ ಪ್ರಕಾರಗಳಲ್ಲಿಯೂ ಸ್ಟೀವ್ ಸ್ಮಿತ್‌ ಅವರು ಜಗತ್ತಿನ ಅತ್ಯಂತ ಯಶಸ್ವಿ ಮತ್ತು ಪ್ರಯೋಗಶೀಲ ಕ್ಯಾಪ್ಟನ್‌ ಎನಿಸಿಕೊಂಡಿದ್ದಾರೆ. ಅವರು ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಾರೆ ಎಂಬ ನಂಬಿಕೆ ನಮಗಿದೆ,’ ಎಂದು ಅವರು ಹೇಳಿದ್ದಾರೆ. 

Post Comments (+)