ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟಾಪ್ ಕ್ಲಾಕ್ ನಿಯಮ: ವೆಸ್ಟ್‌ಇಂಡೀಸ್–ಇಂಗ್ಲೆಂಡ್ ನಡುವಿನ ಪಂದ್ಯದಲ್ಲಿ ಪ್ರಯೋಗ

Published 11 ಡಿಸೆಂಬರ್ 2023, 12:48 IST
Last Updated 11 ಡಿಸೆಂಬರ್ 2023, 12:48 IST
ಅಕ್ಷರ ಗಾತ್ರ

ದುಬೈ: ಕ್ರಿಕೆಟ್ ಪಂದ್ಯದ ಓವರ್‌ಗಳ ನಡುವೆ ಆಟಗಾರರು ತೆಗೆದುಕೊಳ್ಳುವ ಸಮಯವನ್ನು ನಿರ್ಬಂಧಿಸುವ ‘ಸ್ಟಾಪ್ ಕ್ಲಾಕ್’ ನಿಯಮವನ್ನು ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವಿನ ವೈಟ್ ಬಾಲ್ ಕ್ರಿಕೆಟ್ ಸರಣಿಯಲ್ಲಿ ಪ್ರಾಯೋಗಿಕವಾಗಿ ಅಳವಡಿಸಲಾಗುವುದು ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ತಿಳಿಸಿದೆ.

ಬುಧವಾರ ಬಾರ್ಬಡೋಸ್‌ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಟ್ರಯಲ್ ಆರಂಭವಾಗಲಿದೆ.

ಸ್ಟಾಪ್ ಕ್ಲಾಕ್ ನಿಯಮವು ಓವರ್‌ಗಳ ನಡುವೆ ಬೌಲರ್‌ಗಳು ತೆಗೆದುಕೊಳ್ಳುವ ಸಮಯವನ್ನು ನಿರ್ಬಂಧಿಸುತ್ತದೆ. ಅಂದರೆ, ಬೌಲಿಂಗ್ ಮಾಡುತ್ತಿರುವ ತಂಡವು ತಮ್ಮ ಮುಂದಿನ ಓವರ್‌ನ ಮೊದಲ ಎಸೆತವನ್ನು ಹಿಂದಿನ ಓವರ್ ಮುಗಿದ 60 ಸೆಕೆಂಡುಗಳಲ್ಲಿ ಬೌಲ್ ಮಾಡಲು ಸಿದ್ಧವಾಗಿರಬೇಕು ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.

ಇನಿಂಗ್ಸ್‌ನಲ್ಲಿ ಮೂರು ಬಾರಿ ನಿಯಮ ಉಲ್ಲಂಘಿಸಿದರೆ ಫೀಲ್ಡಿಂಗ್ ತಂಡದ ವಿರುದ್ಧ ಐದು ರನ್‌ಗಳ ದಂಡ ವಿಧಿಸಲಾಗುತ್ತದೆ.

‘ನಾವು ಅಂತರರಾಷ್ಟ್ರೀಯ ಕ್ರಿಕೆಟ್‌ ಆಟದ ವೇಗವನ್ನು ಹೆಚ್ಚಿಸುವ ಮಾರ್ಗಗಳನ್ನು ನಿರಂತರವಾಗಿ ಪರಿಶೀಲಿಸುತ್ತಿದ್ದೇವೆ’ ಎಂದು ಐಸಿಸಿ ಹೇಳಿದೆ.

ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಸ್ಟಾಪ್ ಕ್ಲಾಕ್ ಪ್ರಯೋಗವು 2022ರಲ್ಲಿ ಹೊಸ ಆಟದ ನಿಯಮಗಳನ್ನು ಪರಿಚಯಿಸಿದ್ದರ ಭಾಗವಾಗಿದೆ. ಸ್ಟಾಪ್ ಕ್ಲಾಕ್ ಪ್ರಯೋಗದ ಫಲಿತಾಂಶಗಳನ್ನು ಪ್ರಾಯೋಗಿಕ ಅವಧಿಯ ಕೊನೆಯಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ ಎಂದು ಐಸಿಸಿಯ ಜನರಲ್ ಮ್ಯಾನೇಜರ್ ವಾಸಿಂ ಖಾನ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT