ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೋನಿ ಜನಪ್ರಿಯತೆ ಸಚಿನ್, ಕೋಹ್ಲಿಗಿಂತಲೂ ಹೆಚ್ಚು: ಗವಾಸ್ಕರ್

Last Updated 21 ಸೆಪ್ಟೆಂಬರ್ 2020, 10:53 IST
ಅಕ್ಷರ ಗಾತ್ರ

ದುಬೈ:ಭಾರತದಲ್ಲಿ ಮಹೇಂದ್ರ ಸಿಂಗ್‌ ಧೋನಿ ಅವರ ಜನಪ್ರಿಯತೆಯು ‘ಅಭಿಮಾನದ ಮಟ್ಟವನ್ನು ಮೀರಿದೆ’. ಅದನ್ನು ದಿಗ್ಗಜ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಹಾಗೂ ವಿರಾಟ್‌ ಕೊಹ್ಲಿ ಅವರೂ ಆನಂದಿಸುತ್ತಾರೆ ಎಂದು ಮಾಜಿ ಕ್ರಿಕೆಟಿಗ ಸುನೀಲ್‌ ಗವಾಸ್ಕರ್‌ ಅಭಿಪ್ರಾಯಪಟ್ಟಿದ್ದಾರೆ.

ಭಾರತಕ್ಕೆ 2007ರಲ್ಲಿ ಟಿ20 ವಿಶ್ವಕಪ್‌ ಹಾಗೂ 2011ರಲ್ಲಿ ಏಕದಿನ ವಿಶ್ವಕಪ್‌ ಗೆದ್ದುಕೊಟ್ಟ ನಾಯಕ ಎನಿಸಿರುವ ಧೋನಿ ಇತ್ತೀಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. 2013ರಲ್ಲಿ ಚಾಂಪಿಯನ್ಸ್‌ ಟ್ರೋಫಿಯನ್ನೂ ಗೆದಿದ್ದರುವ ಅವರು ಐಸಿಸಿಯ ಮೂರು ಪ್ರಮುಖ ಪ್ರಶಸ್ತಿಗಳನ್ನು ಗೆದ್ದ ವಿಶ್ವದ ಏಕೈಕ ನಾಯಕ ಎಂಬ ಶ್ರೇಯಕ್ಕೂ ಭಾಜನರಾಗಿದ್ದಾರೆ. ಮೈದಾನದಲ್ಲಿ ತೆಗೆದುಕೊಳ್ಳುವ ಅಚ್ಚರಿಯ ನಿರ್ಧಾರಗಳು ಮತ್ತು ತೋರುವ ಪ್ರದರ್ಶನದಿಂದಾಗಿ ಅವರಿಗೆ ವಿಶ್ವದಾದ್ಯಂತ ಕೋಟ್ಯಂತರ ಅಭಿಮಾನಿಗಳಿದ್ದಾರೆ.

2019ರಲ್ಲಿ ನಡೆದ ಏಕದಿನ ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಧೋನಿ ಕೊನೆಯ ಸಲ ಭಾರತ ತಂಡದ ಪರ ಆಡಿದ್ದರು. ಆ ಪಂದ್ಯದಲ್ಲಿ ಆ ಟೀಂ ಇಂಡಿಯಾ ನ್ಯೂಜಿಲೆಂಡ್‌ ವಿರುದ್ಧ ಕೇವಲ 15ರನ್‌ ಅಂತರದ ಸೋಲು ಕಂಡಿತ್ತು. ಅದಾದ ಬಳಿಕ ತಂಡದಿಂದ ದೂರ ಉಳಿದಿದ್ದ ಧೋನಿ ಕಳೆದ ತಿಂಗಳು ವಿದಾಯ ಘೋಷಿಸಿದ್ದರು.ಸದ್ಯ ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್‌ ಟೂರ್ನಿಯಲ್ಲಿ ಅವರು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಐಪಿಎಲ್‌–2020 ಟೂರ್ನಿಯ ವೀಕ್ಷಕ ವಿವರಣೆಗಾರರಾಗಿರುವ ಗವಾಸ್ಕರ್‌, ‘ಅಷ್ಟಾಗಿ ಕ್ರಿಕೆಟ್ ಸಂಸ್ಕೃತಿಯನ್ನು ಹೊಂದಿರದ ರಾಂಚಿಯಿಂದ ಬಂದ ಧೋನಿಯನ್ನು ಇಡೀ ದೇಶ ಪ್ರೀತಿಸುತ್ತದೆ.ಸಚಿನ್‌ ತೆಂಡೂಲ್ಕರ್‌ ಅವರಿಗೆ ಮುಂಬೈ ಮತ್ತು ಕೋಲ್ಕತಾ ನಗರಗಳಿವೆ. ಕೊಹ್ಲಿಗೆ ದೆಹಲಿ ಮತ್ತು ಬೆಂಗಳೂರು ಇವೆ. ಆದರೆ, ನೀವು ಧೋನಿಯ ಬಗ್ಗೆ ಮಾತನಾಡುವಾಗ ಇಡೀ ಭಾರತವೇ ಇದೆ’ ಎಂದು ತಿಳಿಸಿದ್ದಾರೆ.

ಸೆಪ್ಟೆಂಬರ್ 19ರಂದು ಆರಂಭವಾಗಿರುವಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್‌ಕಿಂಗ್ಸ್‌ ಮತ್ತು ಮುಂಬೈ ಇಂಡಿಯನ್ಸ್‌ ಕಣಕ್ಕಿಳಿದಿದ್ದವು. ಪಂದ್ಯವನ್ನು ಧೋನಿ ಪಡೆ 5 ವಿಕೆಟ್‌ ಅಂತರದಿಂದ ಗೆದ್ದು ಬೀಗಿತ್ತು. ಟಾಸ್‌ ವೇಳೆ ಮಾತನಾಡಿದ್ದ ಧೋನಿ, ಲಾಕ್‌ಡೌನ್‌ ವೇಳೆ ಫಿಟ್‌ನೆಸ್‌ನತ್ತ ಗಮನಹರಿಸಿದ್ದಾಗಿ ಹೇಳಿದ್ದರು.

ಈ ಟೂರ್ನಿಯಲ್ಲಿ ಭಾಗವಹಿಸುವ ಆಟಗಾರರ 6 ದಿನಗಳ ಕಾಲ ಪ್ರತ್ಯೇಕವಾಸದಲ್ಲಿರಬೇಕಾಗಿದೆ. ಈ ಬಗ್ಗೆ ಮಾತನಾಡಿದ್ದ ಧೋನಿ, ‘ಐದು ತಿಂಗಳು ಕುಟುಂಬದೊಂದಿಗೆ ಕಾಲ ಕಳೆದ ಬಳಿಕ ಆರು ದಿನ ಪ್ರತ್ಯೇಕವಾಸದಲ್ಲಿರುವುದು ಕಠಿಣ ಸಮಯವಾಗಿತ್ತು’ ಎಂದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT