ಭಾನುವಾರ, ಮಾರ್ಚ್ 26, 2023
24 °C

ಭಾರತ ಅತ್ಯುತ್ತಮ ತಂಡ; ಪಾಕಿಸ್ತಾನದ ಮಾಜಿ ವೇಗಿ ಮೊಹಮ್ಮದ್ ಅಮೀರ್ ಬೆಂಬಲ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ಈಗಲೂ ಭಾರತ ಅತ್ಯುತ್ತಮ ತಂಡ ಎಂದು ನಾನು ನಂಬುತ್ತೇನೆ ಎಂದು ಪಾಕಿಸ್ತಾನದ ಮಾಜಿ ವೇಗದ ಬೌಲರ್ ಮೊಹಮ್ಮದ್ ಅಮೀರ್ ಬೆಂಬಲ ಸೂಚಿಸಿದ್ದಾರೆ.

ಭಾರತದ ಮಾಜಿ ಕ್ರಿಕೆಟಿಗ ಹರಭಜನ್ ಸಿಂಗ್ ಅವರೊಂದಿಗಿನ ಟ್ವಿಟರ್ ವಾಗ್ವಾದದ ಬಳಿಕ ಅಮೀರ್ ಅವರಿಂದ ಇಂತಹದೊಂದು ಹೇಳಿಕೆ ಮೂಡಿ ಬಂದಿರುವುದು ಗಮನಾರ್ಹವೆನಿಸುತ್ತದೆ.

ಇದನ್ನೂ ಓದಿ: 

 

 

 

'ಈಗಲೂ ಭಾರತ ಅತ್ಯುತ್ತಮ ತಂಡ ಎಂದು ನಾನು ನಂಬುತ್ತೇನೆ. ಇದು ಒಳ್ಳೆಯ ಅಥವಾ ಕೆಟ್ಟ ಸಮಯವನ್ನು ಹಾದು ಹೋಗುವ ವಿಷಯವಾಗಿದೆ. ಆದರೆ ಆಟಗಾರರು ಹಾಗೂ ಅವರ ಕುಟುಂಬವನ್ನು ನಿಂದಿಸುವುದು ನಾಚಿಕೆಗೇಡಿನ ವಿಷಯವಾಗಿದ್ದು, ಅಂತಿಮವಾಗಿ ಇದು ಕ್ರಿಕೆಟ್ ಆಟ ಎಂಬುದನ್ನು ಮರೆಯಬೇಡಿ' ಎಂದು ಹೇಳಿದ್ದಾರೆ.

 

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸತತ ಎರಡನೇ ಸೋಲಿನ ಮುಖಭಂಗಕ್ಕೊಳಗಾಗಿದೆ. ಇದರಿಂದಾಗಿ ಸೆಮಿಫೈನಲ್ ಹಾದಿ ಕಠಿಣವೆನಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು