ಶನಿವಾರ, ಅಕ್ಟೋಬರ್ 16, 2021
29 °C

ಟಿ20 ವಿಶ್ವಕಪ್ ವಿಜೇತರಿಗೆ ₹12 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಿ20 ವಿಶ್ವಕಪ್

ದುಬೈ: ಇದೇ ತಿಂಗಳು ನಡೆಯಲಿರುವ ಟಿ20 ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ವಿಜೇತರಿಗೆ ₹ 12 ಕೋಟಿ ನಗದು ಬಹುಮಾನ ಒಲಿಯಲಿದೆ.

ರನ್ನರ್ಸ್ ಅಪ್ ತಂಡವು ಸುಮಾರು ಆರು ಕೋಟಿ ರೂಪಾಯಿ ಪಡೆಯಲಿದೆ. ಇದೇ 17 ರಿಂದ ನವೆಂಬರ್‌ 14ರವರೆಗೆ ಯುಎಇ ಮತ್ತು ಒಮನ್‌ನಲ್ಲಿ ನಡೆಯುವ ವಿಶ್ವಕಪ್‌ ಟೂರ್ನಿಗೆ ಭಾರತವು ಆತಿಥ್ಯ ವಹಿಸುತ್ತಿದೆ. 

ಐಸಿಸಿಯು ಒಟ್ಟು ಬಹುಮಾನ ಮೊತ್ತವನ್ನು ₹ 42 ಕೋಟಿ ನಿಗದಿಪಡಿಸಿದೆ. ಸೆಮಿಫೈನಲ್‌ಗಳಲ್ಲಿ ಸೋತ ತಂಡಗಳೂ ತಲಾ ಮೂರು ಕೋಟಿ ರೂಪಾಯಿ ಪಡೆಯಲಿವೆ. ಪ್ರತಿಯೊಂದು ಹಂತದಲ್ಲಿಯೂ ನಗದು ಪುರಸ್ಕಾರಗಳು ತಂಡಗಳಿಗೆ ಸಿಗಲಿವೆ.

ಸೆಮಿಫೈನಲ್ ಪ್ರವೇಶಿಸುವುದನ್ನು ತಪ್ಪಿಸಿಕೊಂಡ ತಂಡಗಳಿಗೆ ₹53 ಲಕ್ಷ, ಮೊದಲ ಸುತ್ತಿನಲ್ಲಿ ಸೋತ ತಂಡಗಳಿಗೆ ₹ 30 ಲಕ್ಷ ನೀಡಲಾಗುವುದು ಎಂದು  ಐಸಿಸಿಯು ಭಾನುವಾರ ತಿಳಿಸಿದೆ.

ಇದನ್ನೂ ಓದಿ:

2016ರ ಟೂರ್ನಿಯ ಮಾದರಿಯಲ್ಲಿ ಸೂಪರ್ 12ರಲ್ಲಿ ಜಯಿಸುವ ತಂಡಗಳಿಗೆ ಬೋನಸ್‌ ಕೂಡ ಇರಲಿದೆ. 

ಪಾನೀಯ ವಿರಾಮ

ಟಿ20 ಪಂದ್ಯದ ಇನಿಂಗ್ಸ್‌ವೊಂದರಲ್ಲಿ ಇನ್ನು ಮುಂದೆ ಇನಿಂಗ್ಸ್‌ನಲ್ಲಿ ಎರಡು ಪಾನೀಯ ವಿರಾಮಗಳು ಇರಲಿವೆ. ಪ್ರತಿಯೊಂದು ವಿರಾಮದ ಅವಧಿಯು  ಎರಡೂವರೆ ನಿಮಿಷ ಇರಲಿದೆ. ಪ್ರತಿ ಇನಿಂಗ್ಸ್‌ನ ಮಧ್ಯಂತರದಲ್ಲಿ ಈ ವಿರಾಮ ಪಡೆಯಬಹುದು.

ಈ ಮೊದಲು ಇನಿಂಗ್ಸ್‌ಗೆ ಒಂದು ವಿರಾಮ ಮಾತ್ರ ಇತ್ತು. ಇದೀಗ ಅಧಿಕೃತ ಪ್ರಸಾರಕರಿಗೆ ಜಾಹೀರಾತು ಆದಾಯ ಹೆಚ್ಚಿಸಲು ಹೊಸ ನಿಯಮ ಅನುಕೂಲವಾಗಲಿದೆ ಎನ್ನಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು