ಗುರುವಾರ , ಸೆಪ್ಟೆಂಬರ್ 24, 2020
24 °C

ಐಪಿಎಲ್ ಟೈಟಲ್ ಪ್ರಾಯೋಜಕತ್ವ: ಟಾಟಾ ಆಸಕ್ತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಟೈಟಲ್ ಪ್ರಾಯೋಜಕತ್ವ ಪಡೆಯುವ ಸ್ಪರ್ಧೆಗೆ ಟಾಟಾ ಸಮೂಹವೂ ಧುಮುಕಿದೆ.

ಈ ವರ್ಷ ಯುನೈಟೆಡ್‌ ಅ ರಬ್‌ ಎಮಿರೇಟ್ಸ್‌ನಲ್ಲಿ (ಯುಎಇ) ನಡೆಯಲಿರುವ 13ನೇ ಆವೃತ್ತಿಯ ಐಪಿಎಲ್‌ ಟೂರ್ನಿಯ ಪ್ರಾಯೋಜಕತ್ವದಿಂದ ಚೀನಾ ಮೂಲದ ವಿವೊ ಮೊಬೈಲ್ ಕಂಪೆನಿಯು ಹಿಂದೆ ಸರಿದಿದೆ.

ಇದರಿಂದಾಗಿ ಹೊಸ ಪ್ರಾಯೋಜಕರಿಗಾಗಿ ಬಿಸಿಸಿಯ ಬಿಡ್ ಪ್ರಕ್ರಿಯೆ ನಡೆಸಲಿದೆ. ಈಗಾಗಲೇ ಪತಂಜಲಿ, ಜಿಯೊ ಕಮ್ಯುನಿಕೇಷನ್ಸ್‌, ಅನ್‌ಅಕಾಡೆಮಿ ಮತ್ತು ಡ್ರೀಮ್ ಇಲೆವನ್ ಬಿಡ್‌ ಅರ್ಜಿ ಸಲ್ಲಿಸಿವೆ ಎಂದು ತಿಳಿದು ಬಂದಿದೆ.

‘ಟಾಟಾ ಸಮೂಹವು ಪ್ರಾಯೋಜಕತ್ವಕ್ಕಾಗಿ ಆಸಕ್ತಿ ತೋರಿಸಿದೆ. ಐಪಿಎಲ್ ಟೈಟಲ್ ಹಕ್ಕುಗಳನ್ನು ಖರೀದಿಸಲು ಅರ್ಜಿ ಸಲ್ಲಿಸಿದೆ’ ಎಂದು ವಕ್ತಾರರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು