ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಟಿ20 | ಭಾರತದ 16 ವರ್ಷದ ಆಟಗಾರ್ತಿ ಶಫಾಲಿಯದ್ದೇ ಗರಿಷ್ಠ ಸ್ಟ್ರೈಕ್ ರೇಟ್

Last Updated 28 ಫೆಬ್ರುವರಿ 2020, 7:26 IST
ಅಕ್ಷರ ಗಾತ್ರ

ಮೆಲ್ಬೋರ್ನ್‌:ಭಾರತ ಮಹಿಳಾ ಕ್ರಿಕೆಟ್‌ ತಂಡದ ಸ್ಫೋಟಕ ಆಟಗಾರ್ತಿ ಶಫಾಲಿ ವರ್ಮಾ ಮಹಿಳೆಯರ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸ್ಟ್ರೈಕ್‌ ರೇಟ್‌ನಲ್ಲಿ ರನ್‌ ಗಳಿಸುವಬ್ಯಾಟ್ಸ್‌ವುಮನ್‌ ಎನಿಸಿದ್ದಾರೆ.

ಆರಂಭಿಕ ಆಟಗಾರ್ತಿಯಾಗಿರುವ 16 ವರ್ಷ ಶಫಾಲಿ, ಚುಟುಕು ಕ್ರಿಕೆಟ್‌ನಲ್ಲಿ ಆಡಿರುವ17 ಪಂದ್ಯಗಳಿಂದ 147.97ರ ಸ್ಟ್ರೈಕ್ ರೇಟ್‌ನಲ್ಲಿ438 ರನ್‌ ಗಳಿಸಿದ್ದಾರೆ.ಇದಕ್ಕೆ ಸಂಬಂಧಿಸಿದಂತೆ ಮಹಿಳಾ ಟಿ20 ವಿಶ್ವಕಪ್‌ನ ಅಧಿಕೃತ ಟ್ವಿಟರ್‌ ಪುಟದಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

‘ಮಹಿಳಾ ಟಿ20ಯಲ್ಲಿ ಗರಿಷ್ಠ ಸ್ಟ್ರೈಕ್‌ರೇಟ್‌ (ಕನಿಷ್ಠ 200 ರನ್‌)
1. ಶಫಾಲಿ ವರ್ಮಾ – 147.97ರ ಸ್ಟ್ರೈಕ್‌ರೇಟ್‌ನಲ್ಲಿ 438ರನ್‌
2. ಕ್ಲೋಯಿ ಟ್ರಯಾನ್‌– 138.31ರ ಸ್ಟ್ರೈಕ್‌ರೇಟ್‌ನಲ್ಲಿ 722ರನ್‌
3. ಅಲೆಸ್ಯಾ ಹೀಲಿ – 129.66ರ ಸ್ಟ್ರೈಕ್‌ರೇಟ್‌ನಲ್ಲಿ 1875ರನ್‌
ಈ ಪಟ್ಟಿಯಲ್ಲಿ 16 ವರ್ಷದ ಆಟಗಾರ್ತಿ ಅಗ್ರಸ್ಥಾನದಲ್ಲಿದ್ದಾರೆ’ ಎಂದು ಉಲ್ಲೇಖಿಸಿದೆ.

ಸದ್ಯ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಚುಟುಕು ವಿಶ್ವಕಪ್‌ನ ಗುಂಪು ಹಂತದಲ್ಲಿ ಆಡಿರುವ ಮೂರೂ ಪಂದ್ಯಗಳನ್ನು ಗೆದ್ದುಕೊಂಡಿರುವ ಭಾರತ ಸೆಮಿಫೈನಲ್‌ ತಲುಪಿದೆ. ಈ ಟೂರ್ನಿಯಲ್ಲಿ 187.34ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿರುವ ಶಫಾಲಿ, 114 ರನ್‌ ಗಳಿಸಿದ್ದಾರೆ. ಅವರು ಆಸ್ಟ್ರೇಲಿಯಾ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್‌ ವಿರುದ್ಧ ಕ್ರಮವಾಗಿ 29ರನ್‌, 39 ರನ್‌ ಮತ್ತು 46 ರನ್‌ ಬಾರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT