ಮಂಗಳವಾರ, ಸೆಪ್ಟೆಂಬರ್ 21, 2021
28 °C

ICC T20 World Cup: ಭಾರತ ತಂಡ ಪ್ರಕಟ, ಕನ್ನಡಿಗ ಕೆ.ಎಲ್.ರಾಹುಲ್‌ಗೆ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

DH Photo

ಬೆಂಗಳೂರು: ಟಿ20 ವಿಶ್ವಕಪ್‌ಗೆ ಭಾರತ ತಂಡದ ಸದಸ್ಯರ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ. ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಟಿ20 ವಿಶ್ವಕಪ್‌ ತಂಡಕ್ಕೆ ಮಾರ್ಗದರ್ಶಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಬಿಸಿಸಿಐ ಕಾರ್ಯದರ್ಶಿ ಜೇಯ್‌ ಶಾ ತಿಳಿಸಿದ್ದಾರೆ.

ಅಕ್ಟೋಬರ್ 17ರಿಂದ ಟಿ20 ವಿಶ್ವಕಪ್ ಟೂರ್ನಿಯು ಯುಎಇ ಮತ್ತು ಓಮನ್‌ನಲ್ಲಿ ನಡೆಯಲಿದೆ. ಭಾರತವೇ ಈ ಟೂರ್ನಿಗೆ ಆತಿಥ್ಯ ವಹಿಸಲಿದೆ.

ಟೀಮ್‌ ಇಂಡಿಯಾ ಆಟಗಾರರು

ವಿರಾಟ್‌ ಕೊಹ್ಲಿ (ನಾಯಕ)
ರೋಹಿತ್‌ ಶರ್ಮಾ (ಉಪ ನಾಯಕ)
ಕೆ.ಎಲ್.ರಾಹುಲ್‌
ಸೂರ್ಯಕುಮಾರ್‌ ಯಾದವ್‌
ರಿಷಬ್‌ ಪಂತ್‌ (ವಿಕೆಟ್‌ ಕೀಪರ್‌)
ಈಶಾನ್‌ ಕಿಶನ್‌ (ವಿಕೆಟ್‌ ಕೀಪರ್‌) 
ಹಾರ್ದಿಕ್‌ ಪಾಂಡೆ
ರವೀಂದ್ರ ಜಡೇಜಾ
ರಾಹುಲ್‌ ಚಾಹರ್‌
ರವಿಚಂದ್ರನ್‌ ಅಶ್ವಿನ್‌
ಅಕ್ಷರ್‌ ಪಟೇಲ್‌
ವರುಣ್‌ ಚಕ್ರವರ್ತಿ
ಜಸ್‌ಪ್ರಿತ್‌ ಬುಮ್ರಾ
ಭುವನೇಶ್ವರ್‌ ಕುಮಾರ್‌
ಮೊಹಮ್ಮದ್‌ ಶಮಿ

ಸ್ಟಾಂಡ್‌ಬೈ ಆಟಗಾರರು
ಶ್ರೇಯಸ್‌ ಐಯ್ಯರ್‌
ಶಾರ್ದೂಲ್ ಠಾಕೂರ್
ದೀಪಕ್‌ ಚಾಹರ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು