ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿಗೆ ಶತಕದ ಬರ: 19 ಇನಿಂಗ್ಸ್‌ ಮುಗಿದರೂ ಮೂರಂಕಿ ಮುಟ್ಟದ ನಂ.1 ಬ್ಯಾಟ್ಸ್‌ಮನ್

Last Updated 22 ಫೆಬ್ರುವರಿ 2020, 9:53 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್‌:ಟೆಸ್ಟ್‌ ಹಾಗೂ ಏಕದಿನ ಮಾದರಿಯ ಬ್ಯಾಟ್ಸ್‌ಮನ್‌ಗಳರ‍್ಯಾಂಕಿಂಗ್‌ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ, ಸದ್ಯ ಶತಕದ ಬರ ಅನುಭವಿಸುತ್ತಿದ್ದಾರೆ. ಸರಾಸರಿ ಪ್ರತಿ 6.5 ಇನಿಂಗ್ಸ್‌ಗೊಂದರಂತೆಶತಕ ಗಳಿಸಿದ ದಾಖಲೆ ಹೊಂದಿರುವ ಕೊಹ್ಲಿ,ಮೂರೂ ಮಾದರಿಯಲ್ಲಿ ಆಡಿರುವ ಕಳೆದ 19 ಇನಿಂಗ್ಸ್‌ಗಳಲ್ಲಿ ಒಮ್ಮೆಯೂ ಮೂರಂಕಿ ಮುಟ್ಟಿಲ್ಲ.

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವೇಗವಾಗಿ 70 ಶತಕ ಸಿಡಿಸಿದ ಬ್ಯಾಟ್ಸ್‌ಮನ್‌ ಎನಿಸಿರುವ ವಿರಾಟ್‌, ಕೊನೆಯ ಸಲ ಶತಕ ಗಳಿಸಿದ್ದು ಬಾಂಗ್ಲಾದೇಶ ವಿರುದ್ಧ. 2019ರ ನವೆಂಬರ್‌ನಲ್ಲಿ ಕೋಲ್ಕತ್ತದಲ್ಲಿ ನಡೆದ ಹಗಲು–ರಾತ್ರಿ ಟೆಸ್ಟ್‌ ಪಂದ್ಯದಲ್ಲಿ 136 ರನ್‌ ಗಳಿಸಿ ಮಿಂಚಿದ್ದೇ ಕೊನೆ. ಅದಾದ ಬಳಿಕ ಅವರು ನೂರರ ಸಂಭ್ರಮ ಆಚರಿಸಿಲ್ಲ.

ಎಲ್ಲ ಮಾದರಿಯಲ್ಲೂ ಪ್ರಭುತ್ವ ಸ್ಥಾಪಿಸಿರುವ ವಿರಾಟ್‌ ಕೊಹ್ಲಿ ತಮ್ಮ 11 ವರ್ಷಗಳ ಕ್ರಿಕೆಟ್‌ ಬದುಕಿನಲ್ಲಿ ಈ ರೀತಿ ದೀರ್ಘಕಾಲದವರೆಗೆ ಶತಕ ಗಳಿಸಲು ಪರದಾಡುತ್ತಿರುವುದು ಇದು ಮೂರನೇ ಸಲ.

ಈ ಹಿಂದೆ 2011ರ ಫೆಬ್ರುವರಿಯಿಂದ ಸೆಪ್ಟೆಂಬರ್‌ವರೆಗೆ ಸತತವಾಗಿ 24 ಇನಿಂಗ್ಸ್‌ಗಳನ್ನು ಆಡಿದ್ದರೂ ಒಮ್ಮೆಯೂಮೂರಂಕಿ ಮುಟ್ಟಿರಲಿಲ್ಲ. ಈ ವೇಳೆ ಅವರು 17 ಏಕದಿನ ಇನಿಂಗ್ಸ್ ಮತ್ತು 7 ಟೆಸ್ಟ್‌ ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿದ್ದರು.ಅದಾದ ಮೂರು ವರ್ಷಗಳ ಬಳಿಕ 2014ರಲ್ಲಿ ಮತ್ತೆ ಶತಕದ ಬರ ಅನುಭವಿಸಿದ್ದಕೊಹ್ಲಿ, ಫೆಬ್ರುವರಿ–ಅಕ್ಟೋಬರ್‌ ಅವಧಿಯಲ್ಲಿ10 ಟೆಸ್ಟ್‌, 8 ಏಕದಿನ ಮತ್ತು 7 ಟಿ20 ಸೇರಿ ಬರೋಬ್ಬರಿ 25 ಇನಿಂಗ್ಸ್‌ ಆಡಿದ್ದರೂ ಶತಕ ಗಳಿಸಿರಲಿಲ್ಲ.

ಸದ್ಯ ಕೊಹ್ಲಿ ಕಳೆದ 19 ಇನಿಂಗ್ಸ್‌ಗಳಿಂದ6 ಅರ್ಧಶತಕ ಗಳಿಸಿದ್ದಾರೆ. 2011ರಲ್ಲೂ ಇಷ್ಟೇ ಅರ್ಧಶತಕ ಬಾರಿಸಿದ್ದರು. ಆದರೆ, 2014ರಲ್ಲಿ ಕೇವಲ 4 ಬಾರಿ ಮಾತ್ರವೇ 50ಕ್ಕಿಂತ ಹೆಚ್ಚು ರನ್‌ ಗಳಿಸಿದ್ದರು.

ನ್ಯೂಜಿಲೆಂಡ್‌ ಸರಣಿ: 8 ಇನಿಂಗ್ಸ್‌ 182 ರನ್
ಸದ್ಯ ನೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ಪರ 4 ಟಿ20, 3 ಏಕದಿನ ಹಾಗೂ 1 ಟೆಸ್ಟ್‌ ಸೇರಿ ಎಂಟು ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಮಾಡಿರುವ ಕೊಹ್ಲಿ ಕೇವಲ182ರನ್‌ (ಕ್ರಮವಾಗಿ45, 11, 38, 11, 51, 15, 9, 2 ರನ್‌ )ಗಳಿಸಿದ್ದಾರೆ. ಇದರಲ್ಲಿ ಒಮ್ಮೆ ಮಾತ್ರವೇ ಅರ್ಧಶತಕದ ಗಡಿದಾಟಿದ್ದಾರೆ.

ಏಕದಿನ ಪಾಯಿಂಟ್ಸ್‌ಗೆ ಕುತ್ತು; ಟಿ20 ರ‍್ಯಾಂಕಿಂಗ್‌ ಕುಸಿತ
ಏಕದಿನ ಕ್ರಿಕೆಟ್‌ನ ನಂ.1 ರ‍್ಯಾಂಕ್‌ನಲ್ಲಿರುವಕೊಹ್ಲಿ, ಕಿವೀಸ್‌ ವಿರುದ್ಧದ ಮೂರು ಏಕದಿನ ಪಂದ್ಯಗಳಿಂದ ಕೇವಲ 75 ರನ್‌ ಗಳಿಸಿದ್ದರು. ಹೀಗಾಗಿ ಅವರು 17 ಪಾಯಿಂಟ್ಸ್‌ ಕಳೆದುಕೊಂಡಿದ್ದರು. ಕಿವೀಸ್‌ ಸರಣಿಗೂ ಮುನ್ನ ಕೊಹ್ಲಿ ಖಾತೆಯಲ್ಲಿ886 ಪಾಯಿಂಟ್ಸ್‌ ಇದ್ದವು. ಇದೀಗ 869 ಪಾಯಿಂಟ್ಸ್‌ ಇವೆ.

ಆದಾಗ್ಯೂ ಕೊಹ್ಲಿಯೇ ಅಗ್ರಸ್ಥಾನದಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿರುವ ರೋಹಿತ್‌ ಶರ್ಮಾ (855) ಅವರಿಗಿಂತ 14 ಪಾಯಿಂಟ್ಸ್‌ ಮುಂದಿದ್ದಾರೆ.ಆದರೆ,ಟಿ20ಯಲ್ಲಿ10ನೇ ಸ್ಥಾನಕ್ಕೆ ಕುಸಿದಿದ್ದಾರೆ. ಕಿವೀಸ್‌ ವಿರುದ್ಧದ ಸರಣಿಗೂ ಮುನ್ನ 9ನೇ ಸ್ಥಾನದಲ್ಲಿದ್ದರು. ಕೇನ್‌ ವಿಲಿಯಮ್ಸನ್‌ ಪಡೆ ವಿರುದ್ಧನಾಲ್ಕು ಇನಿಂಗ್ಸ್‌ಗಳಲ್ಲಿ ಆಡಿದ್ದ ಕೊಹ್ಲಿ ಕೇವಲ105 ರನ್‌ ಗಳಿಸಿದ್ದರು. ಹೀಗಾಗಿರ‍್ಯಾಂಕಿಂಗ್‌ನಲ್ಲಿ ಒಂದು ಸ್ಥಾನ ಕಳೆದುಕೊಳ್ಳಬೇಕಾಗಿತ್ತು.

ಟೆಸ್ಟ್‌ನ ಅಗ್ರಸ್ಥಾನವೂ ಅಭದ್ರ
ಸದ್ಯ ನಡೆಯುತ್ತಿರುವ ಕಿವೀಸ್‌ ವಿರುದ್ಧದ ಮೊದಲಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿಕೇವಲ 2 ರನ್‌ ಗಳಿಸಿ ಔಟಾಗಿದ್ದಾರೆ.

ಸದ್ಯ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅಗ್ರಸ್ಥಾನದಲ್ಲಿರುವಕೊಹ್ಲಿ ಖಾತೆಯಲ್ಲಿ 928 ಪಾಯಿಂಟ್ಸ್‌ಗಳಿವೆ. ಎರಡನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಆಟಗಾರ ಸ್ಟೀವ್‌ ಸ್ಮಿತ್‌ ಅವರ ಬಳಿ 911 ಅಂಕಗಳಿವೆ. ಒಂದುವೇಳೆ ಮುಂದಿನ ಇನಿಂಗ್ಸ್‌ಗಳಲ್ಲಿ ಕೊಹ್ಲಿಲಯ ಕಂಡುಕೊಳ್ಳದಿದ್ದರೆ, ಟೆಸ್ಟ್‌ ಕ್ರಿಕೆಟ್‌ನಲ್ಲಿನ ಅಗ್ರಸ್ಥಾನ ಕಳೆದುಕೊಳ್ಳಬೇಕಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT