ನವದೆಹಲಿ: ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡ ಭಾಗವಹಿಸುವ ಕುರಿತು ಬಿಸಿಸಿಐನ ನಿಲುವನ್ನು ವಿದೇಶಾಂಗ ಸಚಿವಾಲಯ (ಎಂಇಎ) ಮತ್ತೊಮ್ಮೆ ಸ್ಪಷ್ಟಪಡಿಸಿದೆ.

'ಚಾಂಪಿಯನ್ಸ್ ಟ್ರೋಫಿ ಸಂಬಂಧ ಬಿಸಿಸಿಐ ಹೇಳಿಕೆ ಬಿಡುಗಡೆ ಮಾಡಿದೆ. ಭದ್ರತೆಯ ಕಳವಳವಿರುವ ಬಗ್ಗೆ ತಿಳಿಸಿದೆ. ಆದ್ದರಿಂದ, ಭಾರತ ತಂಡವು ಅಲ್ಲಿಗೆ (ಪಾಕಿಸ್ತಾನಕ್ಕೆ) ಹೋಗುವುದು ಅಸಂಭವ' ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ಟೂರ್ನಿಯು 2025ರ ಫೆಬ್ರುವರಿಯಲ್ಲಿ ಆರಂಭವಾಗಲಿದೆ. ವೇಳಾಪಟ್ಟಿ ಸಿದ್ಧತೆ ಸಂಬಂಧ ಐಸಿಸಿ ಮಂಡಳಿಯ ಸಭೆ ಇಂದು ನಡೆಯಲಿದೆ.

ಪಾಕಿಸ್ತಾನಕ್ಕೆ ತೆರಳಲು ಭಾರತ ತಂಡ ನಿರಾಕರಿಸಿರುವುದರಿಂದ ಪಂದ್ಯಾವಳಿ ವಿಳಂಬವಾಗಿದೆ. 2008ರ ಮುಂಬೈ ಭಯೋತ್ಪಾದನಾ ದಾಳಿಯ ನಂತರ ಭಾರತ, ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿಲ್ಲ.

ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ ನಡೆಸಬೇಕು ಎಂದು ಟೀಂ ಇಂಡಿಯಾ ಬೇಡಿಕೆ ಇಟ್ಟಿದೆ. ಆದರೆ, ಅದಕ್ಕೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಸಮ್ಮತಿಸಿಲ್ಲ.
.ಚಾಂಪಿಯನ್ಸ್ ಟ್ರೋಫಿ: ಹೈಬ್ರಿಡ್ ಮಾದರಿಗೆ ಸಿದ್ಧವಿಲ್ಲ; ಪಿಸಿಬಿ .ಚಾಂಪಿಯನ್ಸ್ ಟ್ರೋಫಿ: 29ರಂದು ಐಸಿಸಿ ಸಭೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.