ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕಿಸ್ತಾನ ಬ್ಯಾಟ್ಸ್‌ಮನ್‌ಗೆ ಬೌನ್ಸರ್ ಪೆಟ್ಟು: ಕಾಳಜಿ ತೋರಿದ ಭಾರತದ ವೇಗಿ

19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯ ಮೊದಲ ಸೆಮಿಫೈನಲ್‌
Last Updated 4 ಫೆಬ್ರುವರಿ 2020, 10:43 IST
ಅಕ್ಷರ ಗಾತ್ರ

ಪೊಷೆಫ್‌ಸ್ಟ್ರೂಮ್‌:19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯ ಮೊದಲ ಸೆಮಿಫೈನಲ್‌ನಲ್ಲಿಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿವೆ. ಟಾಸ್ ಗೆದ್ದು ಬ್ಯಾಟಿಂಗ್‌ ಮಾಡುತ್ತಿರುವ ಪಾಕಿಸ್ತಾನ ತಂಡ 34 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 144ರನ್‌ ಗಳಿಸಿದೆ.

ಪಾಕಿಸ್ತಾನ ತಂಡಕ್ಕೆ ಆರಂಭಿಕ ಆಘಾತ ನೀಡಿದ ಭಾರತ 34 ರನ್‌ ಆಗುವಷ್ಟರಲ್ಲಿ ಮೊದಲ ಎರಡು ವಿಕೆಟ್‌ ಪಡೆದು ಸಂಭ್ರಮಿಸಿತು. ಆದರೆ, ಮೂರನೇ ವಿಕೆಟ್‌ಗೆ ಜೊತೆಯಾದ ನಾಯಕ ರೊಹೇಲ್‌ ನಜೀರ್‌ ಮತ್ತು ಹೈದರಲ್‌ ಅಲಿ (56) 62ರನ್‌ ಕೂಡಿಸಿ ಚೇತರಿಕೆ ನೀಡಿದರು.

ಸದ್ಯ 76ಎಸೆತಗಳಲ್ಲಿ 47ರನ್‌ ಗಳಿಸಿರುವರೊಹೇಲ್‌ ಹಾಗೂ ಮೊಹಮದ್‌ ಹ್ಯಾರಿಸ್‌ (20) ಕ್ರೀಸ್‌ನಲ್ಲಿದ್ದಾರೆ. ಭಾರತ ಪರ ಸುಶಾಂತ್‌ ಮಿಶ್ರಾ, ರವಿ ಬಿಷ್ಣೋಯಿ ಹಾಗೂ ಯಶಸ್ವಿ ಜೈಸ್ವಾಲ್‌ ತಲಾ ಒಂದೊಂದು ವಿಕೆಟ್‌ ಕಬಳಿಸಿದ್ದಾರೆ.

ಕ್ರೀಡಾ ಸ್ಫೂರ್ತಿ ಮೆರೆದಭಾರತದ ವೇಗಿ
ಇನಿಂಗ್ಸ್‌ನ ಎರಡನೇ ಓವರ್‌ನಲ್ಲೇ ವಿಕೆಟ್‌ ಪಡೆದು ಸಂಭ್ರಮದ ಅಲೆಯಲ್ಲಿ ತೇಲುತ್ತಿದ್ದಸುಶಾಂತ್‌ ಮಿಶ್ರಾ, ನಾಲ್ಕನೇ ಓವರ್‌ನಲ್ಲಿಎಸೆದ ಬೌನ್ಸರ್‌ವೊಂದು ಪಾಕ್‌ ಬ್ಯಾಟ್ಸ್‌ಮನ್‌ ಹೈದರ್‌ ಅಲಿ ಅವರ ಎಡ ಭುಜಕ್ಕೆ ಅಪ್ಪಳಿಸಿತು. ಹೀಗಾಗಿ ಹೈದರ್‌ ಕುಸಿದರು. ಕೂಡಲೇ ಅವರ ಬಳಿಗೆ ತೆರಳಿದ ಸುಶಾಂತ್‌ ಅವರನ್ನು ವಿಚಾರಿಸಿಕೊಂಡರು.

ಕ್ರೀಡಾ ಸ್ಫೂರ್ತಿ ಮೆರೆದ ಸುಶಾಂತ್ ನಡೆಗೆ ಟ್ವಿಟರ್‌ನಲ್ಲಿ ಪ್ರಶಂಸೆ ವ್ಯಕ್ತವಾಗಿದೆ.

ಅಭಿಮಾನಿಯೊಬ್ಬರು ಟ್ವಿಟರ್‌ನಲ್ಲಿ, ‘ಸುಶಾಂತ್‌ ಎಸೆದ ಬೌನ್ಸರ್‌ನಿಂದಹೈದರ್‌ ಪೆಟ್ಟು ತಿಂದರು. ಕೂಡಲೆ ಅವರ ಬಳಿಗೆ ತೆರಳಿದ ಸುಶಾಂತ್‌ ಆರಾಮಾಗಿದ್ದೀಯಾ? ಎಂದು ವಿಚಾರಿಸಿದ್ದಾರೆ. ಇದು ದಿನದ ಕ್ಷಣವಾಗಿದೆ. ಸ್ಪಿರಿಟ್‌ ಆಫ್‌ ಕ್ರಿಕೆಟ್‌’ ಎಂದು ಬರೆದುಕೊಂಡಿದ್ದಾರೆ.

ಇದುವರೆಗೆ 9 ಬಾರಿ ಮುಖಾಮುಖಿ
19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಇದುವರೆಗೆ 9 ಬಾರಿ ಮುಖಾಮುಖಿಯಾಗಿವೆ. ಅದರಲ್ಲಿ ಪಾಕಿಸ್ತಾನ ಐದು ಬಾರಿ ಗೆದ್ದಿದ್ದರೆ, ಭಾರತ 4 ಸಲ ಜಯದ ನಗೆ ಬೀರಿದೆ. ಕಳೆದ ಮೂರು ವಿಶ್ವಕಪ್‌ ಟೂರ್ನಿಗಳಲ್ಲಿ ಮೇಲುಗೈ ಸಾಧಿಸಿರುವಭಾರತವೇಈ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡ ಎನಿಸಿದೆ.

1988:ಪಾಕಿಸ್ತಾನಕ್ಕೆ68 ರನ್‌ ಜಯ
1998:ಭಾರತಕ್ಕೆ 5 ವಿಕೆಟ್‌ ಜಯ
2002:ಪಾಕಿಸ್ತಾನಕ್ಕೆ 2 ವಿಕೆಟ್‌ ಜಯ
2004:ಪಾಕಿಸ್ತಾನಕ್ಕೆ 5 ವಿಕೆಟ್‌ ಜಯ(ಸೆಮಿಫೈನಲ್‌)
2006:ಪಾಕಿಸ್ತಾನಕ್ಕೆ 38ರನ್‌ ಗೆಲುವು(ಫೈನಲ್‌)
2010:ಪಾಕಿಸ್ತಾನಕ್ಕೆ 2 ವಿಕೆಟ್‌ ಜಯ(ಕ್ವಾರ್ಟರ್‌ ಪೈನಲ್‌)
2012:ಭಾರತಕ್ಕೆ 1 ವಿಕೆಟ್‌(ಕ್ವಾರ್ಟರ್‌ ಪೈನಲ್‌)
2014:ಭಾರತಕ್ಕೆ 40 ರನ್‌ ಗೆಲುವು
2018:ಭಾರತಕ್ಕೆ 203 ರನ್‌ಜಯ (ಸೆಮಿಫೈನಲ್‌)

ಭಾರತ2000, 2008, 2012 ಮತ್ತು 2018ರಲ್ಲಿ ಚಾಂಪಿಯನ್‌ ಆಗಿದೆ.
ಪಾಕಿಸ್ತಾನ2004 ಹಾಗೂ2006ರಲ್ಲಿಚಾಂಪಿಯನ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT