ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ಕ್ರಿಕೆಟ್: ಕಿವೀಸ್‌ಗೆ ಅರಬ್ ಎಮಿರೆಟ್ಸ್ ಆಘಾತ

ಅಯಾನ್, ಜವಾದುಲ್ಲಾ ಅಮೋಘ ಬೌಲಿಂಗ್, ವಸೀಂ ಅರ್ಧಶತಕ
Published 20 ಆಗಸ್ಟ್ 2023, 14:40 IST
Last Updated 20 ಆಗಸ್ಟ್ 2023, 14:40 IST
ಅಕ್ಷರ ಗಾತ್ರ

ದುಬೈ: ಅಯಾನ್ ಖಾನ್ (20ಕ್ಕೆ3) ಹಾಗೂ ಮೊಹಮ್ಮದ್ ಜವಾದುಲ್ಲಾ (16ಕ್ಕೆ2) ಅವರ  ಅಮೋಘ ಬೌಲಿಂಗ್ ನೆರವಿನಿಂದ ಯುನೈಟೆಡ್ ಅರಬ್ ಎಮಿರೆಟ್ಸ್ ತಂಡವು ಶನಿವಾರ ತಡರಾತ್ರಿ ಮುಕ್ತಾಯವಾದ ಟಿ20 ಕ್ರಿಕೆಟ್ ಪಂದ್ಯದಲ್ಲಿ ಬಲಿಷ್ಠ ನ್ಯೂಜಿಲೆಂಡ್ ತಂಡಕ್ಕೆ ಸೋಲಿನ ಆಘಾತ ನೀಡಿತು.

ಯುಎಇ ತಂಡವು ಕಿವೀಸ್ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿತು. ಯುಎಇ ತಂಡಕ್ಕೆ ಇದು ನ್ಯೂಜಿಲೆಂಡ್ ಎದುರು ಮೊಟ್ಟಮೊದಲ ಜಯವಾಗಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯಲ್ಲಿ 1–1ರ ಸಮಬಲ ಸಾಧಿಸಿತು.

ಟಾಸ್ ಗೆದ್ದ ಯುಎಇ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನ್ಯೂಜಿಲೆಂಡ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 142 ರನ್ ಗಳಿಸಿತು. ಮಾರ್ಕ್ ಚಾಪ್‌ಮನ್ (63; 46ಎ, 4X3, 6X3) ಅರ್ಧಶತಕ ಗಳಿಸಿ ತಂಡವು ಗೌರವಯುತ ಮೊತ್ತ ಗಳಿಸಲು ನೆರವಾದರು.

ಗುರಿ ಬೆನ್ನಟ್ಟಿದ ಯುಎಇ ತಂಡವು ನ್ಯೂಜಿಲೆಂಡ್‌ನ ಅನುಭವಿ ಬೌಲಿಂಗ್ ಪಡೆಯನ್ನು ದಿಟ್ಟತನದಿಂದ ಎದುರಿಸಿತು. ಆರಂಭಿಕ ಬ್ಯಾಟರ್, ನಾಯಕ ಮೊಹಮ್ಮದ್ ವಸೀಂ (55; 29ಎಸೆತ) ಮತ್ತು ಆಸಿಫ್ ಖಾನ್ (ಅಜೇಯ 48; 29ಎ) ಅವರ ಬ್ಯಾಟಿಂಗ್ ನೆರವಿನಿಂದ 15.4 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 144 ರನ್ ಗಳಿಸಿ ಜಯಿಸಿತು. ವಸೀಂ ನಾಲ್ಕು ಬೌಂಡರಿ ಮೂರು ಸಿಕ್ಸರ್ ಸಿಡಿಸಿದರು. ಆಸಿಫ್ 5 ಬೌಂಡರಿ ಮತ್ತು 1 ಸಿಕ್ಸರ್ ಹೊಡೆದರು.

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 142 (ಚಾದ್ ಬೊವೆಸ್ 21, ಮಾರ್ಕ್ ಚಾಪ್‌ಮನ್ 63, ಜಿಮ್ಮಿ ನಿಶಾಮ್ 21, ಮೊಹಮ್ಮದ್ ಜವಾದುಲ್ಲಾ 16ಕ್ಕೆ2, ಅಯಾನ್ ಖಾನ್ 20ಕ್ಕೆ3) ಯುಎಇ: 15.4 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 144 (ಮೊಹಮ್ಮದ್ ವಸೀಂ 55, ವೃತ್ಯಾ ಅರವಿಂದ್ 25, ಆಸಿಫ್ ಖಾನ್ ಅಜೇಯ 48, ಟಿಮ್ ಸೌಥಿ 32ಕ್ಕೆ1, ಮಿಚೆಲ್ ಸ್ಯಾಂಟನರ್ 26ಕ್ಕೆ1, ಕೈಲ್ ಜೆಮಿಸನ್ 30ಕ್ಕೆ1) ಫಲಿತಾಂಶ: ಯುಎಇಗೆ 7 ವಿಕೆಟ್‌ಗಳ ಜಯ. ಸರಣಿಯಲ್ಲಿ 1–1ರ ಸಮಬಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT