ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs WI ಟಿ20 ಕ್ರಿಕೆಟ್: ಮತ್ತೆರಡು ದಾಖಲೆಗಳ ಮೇಲೆ ಕ್ಯಾಪ್ಟನ್‌ ಕೊಹ್ಲಿ ಕಣ್ಣು

ಭಾರತ–ವಿಂಡೀಸ್‌ ಸರಣಿ
Last Updated 11 ಡಿಸೆಂಬರ್ 2019, 10:05 IST
ಅಕ್ಷರ ಗಾತ್ರ

ಬೆಂಗಳೂರು:ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಕ್ರಿಕೆಟ್‌ ಸರಣಿಯಲ್ಲಿ ಭರ್ಜರಿ ಬ್ಯಾಟಿಂಗ್‌ ನಡೆಸುವ ಮೂಲಕ ಚುಟುಕು ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್‌ ಹಾಗೂ ಅರ್ಧಶತಕ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿರುವ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ಮತ್ತೆರಡು ದಾಖಲೆಗಳನ್ನು ಬರೆಯಲು ಸಜ್ಜಾಗಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಇದುವರೆಗೆ 74 ಪಂದ್ಯಗಳ 69 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವಕೊಹ್ಲಿ,51.26ರ ಸರಾಸರಿಯಲ್ಲಿ 2563 ರನ್‌ ಗಳಿಸಿದ್ದಾರೆ. ಇದರಲ್ಲಿ ಅವರು ತವರಿನಲ್ಲಿ ಆಡಿರುವ ಪಂದ್ಯಗಳ ಸಂಖ್ಯೆ 29. ಇಷ್ಟು ಪಂದ್ಯಗಳಿಂದ ವಿರಾಟ್‌, 49.70 ಸರಾಸರಿಯಲ್ಲಿ 994ರನ್‌ ಗಳಿಸಿದ್ದಾರೆ. ಹೀಗಾಗಿ ವಿಂಡೀಸ್‌ ವಿರುದ್ಧದ ಮೂರನೇ ಪಂದ್ಯದಲ್ಲಿ ಕೊಹ್ಲಿ 6 ರನ್‌ ಗಳಿಸಿದರೆ ತವರಿನಲ್ಲಿ ಆಡಿದ ಚುಟುಕು ಕ್ರಿಕೆಟ್‌ನಲ್ಲಿ 1 ಸಾವಿರ ರನ್‌ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್‌ ಎನಿಸಿಕೊಳ್ಳಲಿದ್ದಾರೆ.

ತವರಿನಲ್ಲಿ ಹೆಚ್ಚು ರನ್‌ ಗಳಿಸಿದ ದಾಖಲೆ ಇರುವುದು ನ್ಯೂಜಿಲೆಂಡ್‌ನ ಮಾರ್ಟಿನ್‌ ಗಪ್ಟಿಲ್‌ ಹೆಸರಿನಲ್ಲಿ. ಅವರು 38 ಪಂದ್ಯಗಳ 37 ಇನಿಂಗ್ಸ್‌ಗಳಿಂದ 1430 ರನ್‌ ಪೇರಿಸಿದ್ದಾರೆ. ನಂತರದ ಸ್ಥಾನದಲ್ಲಿ ಅದೇ ದೇಶದ ಕಾಲಿನ್‌ ಮುನ್ರೋ (31 ಇನಿಂಗ್ಸ್‌ 1000 ರನ್‌) ಇದ್ದಾರೆ.

ಸರಣಿಯ ಮೊದಲ ಪಂದ್ಯದಲ್ಲಿ ಔಟಾಗದೆ 94 ರನ್‌ ಸಿಡಿಸಿದ್ದ ಕೊಹ್ಲಿ, ಎರಡನೇ ಪಂದ್ಯದಲ್ಲಿ 19 ರನ್‌ ಗಳಿಸಿದ್ದರು. ಒಂದು ವೇಳೆ ಮೂರನೇ ಪಂದ್ಯದಲ್ಲಿ ಅರ್ಧಶತಕ ಗಳಿಸಲು ಸಾಧ್ಯವಾದರೆ, ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನೂರು ಅರ್ಧಶತಕ ಗಳಿಸಿದವರ ಪಟ್ಟಿಗೆಸೇರ್ಪಡೆಯಾಗಲಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ 54, ಟೆಸ್ಟ್‌ನಲ್ಲಿ 22 ಹಾಗು ಟಿ20 ಕ್ರಿಕೆಟ್‌ನಲ್ಲಿ 23 ಅರ್ಧಶತಕಗಳು ಕೊಹ್ಲಿ ಖಾತೆಯಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT