ಮಂಗಳವಾರ, 4 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೋರ್ಬ್ಸ್| ನೂರು ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಸಲ್ಮಾನ್‌ರನ್ನು ಹಿಂದಿಕ್ಕಿದ ಕೊಹ್ಲಿ

ಸತತ ಮೂರು ವರ್ಷ ಅಗ್ರಸ್ಥಾನದಲ್ಲಿದ್ದ ಖಾನ್‌
Last Updated 20 ಡಿಸೆಂಬರ್ 2019, 8:56 IST
ಅಕ್ಷರ ಗಾತ್ರ

ನವದೆಹಲಿ: ಫೋರ್ಬ್ಸ್ ನಿಯತಕಾಲಿಕೆ ಬಿಡುಗಡೆ ಮಾಡಿರುವ ಭಾರತದ 100 ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಕ್ರಿಕೆಟ್ ತಂಡದ ನಾಯಕ ವಿರಾಟ್‌ ಕೊಹ್ಲಿ ಮೊದಲ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಬಾಲಿವುಡ್‌ ನಟರಾದ ಅಕ್ಷಯ್‌ ಕುಮಾರ್‌ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಕಳೆದ ಮೂರೂ ವರ್ಷಗಳಿಂದ ಮೊದಲ ಸ್ಥಾನ ಕಾಯ್ದುಕೊಂಡಿದ್ದ ಸಲ್ಮಾನ್‌ ಖಾನ್‌ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

ಅಕ್ಟೋಬರ್‌ 1, 2018 ರಿಂದ ಸೆಪ್ಟೆಂಬರ್ 30, 2019 ರವರ ಅವಧಿಯಲ್ಲಿ ವಿವಿಧ ಮೂಲಗಳಿಂದ ಗಳಿಸಿದ ಆದಾಯ ಹಾಗೂ ಮಾಧ್ಯಮಗಳಲ್ಲಿ ಹೊಂದಿರುವ ಜನಪ್ರಿಯತೆಯನ್ನು ಪರಿಗಣಿಸಿ ಪಟ್ಟಿ ತಯಾರಿಸಲಾಗಿದೆ. ಕೆಲವು ಸೆಲೆಬ್ರಿಟಿಗಳು ಹೆಚ್ಚು ಆದಾಯ ಹೊಂದಿದ್ದರೂ ಜನಪ್ರಿಯತೆಯ ಕಾರಣದಿಂದಸ್ಥಾನಗಳಲ್ಲಿ ವ್ಯತ್ಯಾಸವಾಗಿದೆ.

ಸದ್ಯಹೆಚ್ಚು ಜನಪ್ರಿಯತೆ ಹೊಂದಿರುವ ಹಾಗೂ ವಿವಿಧ ಮೂಲಗಳಿಂದ ₹ 252.72 ಕೋಟಿ ಆದಾಯ ಗಳಿಸಿರುವವಿರಾಟ್ ಕೊಹ್ಲಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಅತಿ ಹೆಚ್ಚು ಆದಾಯ ಗಳಿಸಿದ ಸೆಲೆಬ್ರಿಟಿ ಎಂಬ ಖ್ಯಾತಿ ಅಕ್ಷಯ್‌ ಕುಮಾರ್‌ ಅವರದ್ದು. ಅವರು ಒಟ್ಟು ₹ 293.25 ಕೋಟಿ ಆದಾಯ ಗಳಿಸಿದ್ದಾರೆ. ಕಳೆದ ವರ್ಷ ಅಕ್ಷಯ್ ಆದಾಯ ₹ 185 ಕೋಟಿ ಇತ್ತು.ಮೂರನೇ ಸ್ಥಾನದಲ್ಲಿರುವ ಸಲ್ಮಾನ್‌ ಖಾನ್‌ ಆದಾಯ ಈ ವರ್ಷ ₹ 229.25 ಕೋಟಿ ಆಗಿದೆ. 2018ರಲ್ಲಿ ಅವರ ಆದಾಯ ₹ 253.25 ಕೋಟಿ ಇತ್ತು.

ಬಿಗ್‌ ಬಿ ಖ್ಯಾತಿಯಬಾಲಿವುಡ್‌ ನಟ ಅಮಿತಾಬ್‌ ಬಚ್ಚನ್‌ ಹಾಗೂ ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ ಪಟ್ಟಿಯಲ್ಲಿ ನಾಲ್ಕು ಮತ್ತು ಐದನೇ ಸ್ಥಾನದಲ್ಲಿದ್ದಾರೆ. ಈ ಇಬ್ಬರೂ ಕ್ರಮವಾಗಿ ₹ 239.25ಕೋಟಿ ಹಾಗೂ ₹ 135.93 ಕೋಟಿ ಆದಾಯ ಸಂಪಾದಿಸಿದ್ದಾರೆ. ನಂತರದ ಸ್ಥಾನಗಳಲ್ಲಿ ಕ್ರಮವಾಗಿ ಶಾರುಖ್ ಖಾನ್‌ (₹ 124.38 ಕೋಟಿ) ಹಾಗೂ ರಣವೀರ್‌ ಸಿಂಗ್‌ (₹ 118.2 ಕೋಟಿ) ಇದ್ದಾರೆ.

ಉಳಿದಂತೆ ದೀಪಿಕಾ ಪಡುಕೋಣೆ ಹಾಗೂ ಆಲಿಯಾ ಭಟ್‌ ಮಾತ್ರವೇ ಪಟ್ಟಿಯ ಅಗ್ರ ಹತ್ತರಲ್ಲಿ ಕಾಣಿಡಿಕೊಂಡಿರುವ ಮಹಿಳೆಯರು. ಎಂಟನೇ ಸ್ಥಾನದಲ್ಲಿರುವ ಆಲಿಯಾ ಭಟ್‌ ₹ 59.21 ಕೋಟಿ ಆದಾಯ ಹೊಂದಿದ್ದರೆ, ದೀಪಿಕಾ ₹ 48 ಕೋಟಿ ಆದಾಯ ಗಳಿಸಿದ್ದಾರೆ.

₹ 76.96 ಕೋಟಿ ಆದಾಯ ಹೊಂದಿರುವ ಸಚಿನ್‌ ತೆಂಡೂಲ್ಕರ್‌ ಒಂಭತ್ತನೇ ಸ್ಥಾನದಲ್ಲಿದ್ದಾರೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT