ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್‌ ಕೊಹ್ಲಿ ಕೆಲವು ಸಲ ಮನುಷ್ಯನಂತೆ ಕಾಣುವುದೇ ಇಲ್ಲ: ತಮೀಮ್‌ ಇಕ್ಬಾಲ್‌

Last Updated 24 ಅಕ್ಟೋಬರ್ 2018, 1:29 IST
ಅಕ್ಷರ ಗಾತ್ರ

ದುಬೈ: ಭಾರತ ಕ್ರಿಕೆಟ್‌ ತಂಡದ ನಾಯಕ ಹಾಗೂ ಟೆಸ್ಟ್‌, ಏಕದಿನ ಮಾದರಿ ಬ್ಯಾಟಿಂಗ್‌ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿರುವ ವಿರಾಟ್‌ ಕೊಹ್ಲಿ ಕೆಲವು ಸಲ ಮನುಷ್ಯನ ಹಾಗೆ ಕಾಣುವುದೇ ಇಲ್ಲ ಎಂದು ಬಾಂಗ್ಲಾದೇಶ ಕ್ರಿಕೆಟಿಗ ತಮೀಮ್‌ ಇಕ್ಬಾಲ್‌ ಹೇಳಿಕೊಂಡಿದ್ದಾರೆ.

‘ಬ್ಯಾಟಿಂಗ್‌ ಮಾಡಲು ಕ್ರೀಸ್‌ಗಿಳಿಯುವ ಸಂದರ್ಭದಲ್ಲಿ ಕೆಲವು ಸಲಆತ(ವಿರಾಟ್‌ ಕೊಹ್ಲಿ) ಮನುಷ್ಯನಲ್ಲ ಎಂದು ಭಾವಿಸುತ್ತೇನೆ. ಕೊಹ್ಲಿ ಬ್ಯಾಟಿಂಗ್‌ ಮಾಡುವ ರೀತಿ ನೋಡಿದರೆ ಪ್ರತಿ ಪಂದ್ಯದಲ್ಲೂ ಶತಕ ಬಾರಿಸುವ ಹಾಗೆ ತೋರುತ್ತದೆ’ ಎಂದು ಇಕ್ಬಾಲ್‌ ಸಂದರ್ಶನವೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.

‘ಕೊಹ್ಲಿ ತನ್ನದೇ ಆದ ರೀತಿಯಲ್ಲಿ ಅಂಗಳದಲ್ಲಿ ಕಾಣಿಸಿಕೊಳ್ಳುವುದು ಹಾಗೂ ಆಡುವ ರೀತಿಯನ್ನು ನಂಬಲಾಗದು. ಮೂರೂ ಮಾದರಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಕೊಹ್ಲಿ ಅದ್ಭುತ ಆಟಗಾರ ಎಂದು ಭಾವಿಸುತ್ತೇನೆ’ ಎಂದೂ ಹೇಳಿಕೊಂಡಿದ್ದಾರೆ.

ಏಕದಿನ ಮಾದರಿಯಲ್ಲಿ ಅತಿ ವೇಗವಾಗಿ 10 ಸಾವಿರ ರನ್‌ ಗಳಿಸಿದ ಸಾಧನೆ ಮಾಡಲು ವಿರಾಟ್‌ ಕೊಹ್ಲಿ 81ರನ್‌ ಗಳಿಸಬೇಕಿದೆ. ಇದುವರೆಗೆ 204 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿರುವ ಕೊಹ್ಲಿ 9,919ರನ್‌ ಗಳಿಸಿದ್ದಾರೆ.

ಸದ್ಯ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 10ಸಾವಿರ ರನ್‌ ಗಳಿಸಿದ ದಾಖಲೆ ಸಚಿನ್‌ ತೆಂಡೂಲ್ಕರ್‌ ಹೆಸರಿನಲ್ಲಿದೆ.ಅವರು 259 ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

‘ನಾನು 12 ವರ್ಷಗಳಿಂದ ಕ್ರಿಕೆಟ್‌ ಆಡುತ್ತಾ ಹಲವು ಅತ್ಯುತ್ತಮ ಆಟಗಾರರನ್ನು ನೋಡಿದ್ದೇನೆ. ಎಲ್ಲರೂ ತಮ್ಮದೇ ರೀತಿಯಲ್ಲಿ ಒಂದೊಂದು ವಿಭಾಗಗಳಲ್ಲಿ ಪ್ರಬಲರಾಗಿರುತ್ತಾರೆ. ಆದರೆ ವಿರಾಟ್‌ ಕೊಹ್ಲಿ ಎಲ್ಲ ವಿಭಾಗಗಳಲ್ಲೂ ಪ್ರಭುತ್ವ ಸಾಧಿಸಿದ್ದಾರೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT