ಬೆಂಗಳೂರು: ರನ್ ಮೆಶಿನ್ ಖ್ಯಾತಿಯ ವಿರಾಟ್ ಕೊಹ್ಲಿ ಗಳಿಸಿದ ಅಮೋಘ ಶತಕದ ಬಲದಿಂದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ಗೆಲುವು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫ್ಲೇ-ಆಫ್ ಪ್ರವೇಶವು ಜೀವಂತವಾಗಿದೆ.

ಐಪಿಎಲ್‌ನಲ್ಲಿ ನಾಲ್ಕು ವರ್ಷಗಳ ಬಳಿಕ ಶತಕದ ಬರ ನೀಗಿಸಿದ ವಿರಾಟ್, ಆರನೇ ಶತಕ ಗಳಿಸಿದರು.

ಈ ಮೂಲಕ ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ವೆಸ್ಟ್‌ಇಂಡೀಸ್‌ನ ಮಾಜಿ ದಿಗ್ಗಜ ಕ್ರಿಸ್ ಗೇಲ್ ದಾಖಲೆಯನ್ನು ಸರಿಗಟ್ಟಿದರು.

ಒಟ್ಟಾರೆಯಾಗಿ ಟಿ20 ಕ್ರಿಕೆಟ್‌ನಲ್ಲಿ ವಿರಾಟ್ ಏಳು ಶತಕಗಳ ಸಾಧನೆ ಮಾಡಿದ್ದಾರೆ. ಅಲ್ಲದೆ ಭಾರತೀಯ ಬ್ಯಾಟರ್‌ಗಳ ಪಟ್ಟಿಯಲ್ಲಿ ಕೆ.ಎಲ್. ರಾಹುಲ್ ಹಾಗೂ ರೋಹಿತ್ ಶರ್ಮಾ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.

ಇದೇ ಪಂದ್ಯದಲ್ಲಿ ಹೈದರಾಬಾದ್‌ನ ಹೆನ್ರಿಚ್ ಕ್ಲಾಸೆನ್ ಶತಕ ಗಳಿಸಿದರು. ಈ ಮೂಲಕ ಒಂದೇ ಐಪಿಎಲ್ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ಶತಕಗಳ ದೃಷ್ಟಾಂತ ಇದೇ ಮೊದಲ ಬಾರಿಗೆ ದಾಖಲಾಯಿತು.

ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಬ್ಯಾಟರ್‌ಗಳ ಪಟ್ಟಿ:

ಕ್ರಿಸ್ ಗೇಲ್: 6

ವಿರಾಟ್ ಕೊಹ್ಲಿ: 6

ಜೋಸ್ ಬಟ್ಲರ್: 5

ಕೆ.ಎಲ್. ರಾಹುಲ್: 4

ಶೇನ್ ವಾಟ್ಸನ್: 4

ಡೇವಿಡ್ ವಾರ್ನರ್: 4

ಸಂಜು ಸ್ಯಾಮ್ಸನ್: 3

ಎಬಿ ಡಿವಿಲಿಯರ್ಸ್: 3

ಹಾಶೀಮ್ ಆಮ್ಲಾ: 2

ಬೆನ್ ಸ್ಟೋಕ್ಸ್: 2

ಆ್ಯಡಂ ಗಿಲ್‌ಕ್ರಿಸ್ಟ್: 2

ಕ್ವಿಂಟನ್ ಡಿ ಕಾಕ್: 2

ವೀರೇಂದ್ರ ಸೆಹ್ವಾಗ್: 2

ಮುರಳಿ ವಿಜಯ್: 2

ಬ್ರೆಂಡನ್ ಮೆಕಲಮ್: 2

ಅಜಿಂಕ್ಯ ರಹಾನೆ: 2

ಶಿಖರ್ ಧವನ್: 2

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.