ಭಾನುವಾರ, ಜೂನ್ 26, 2022
21 °C
ಹಿಂದಿನ ಅನುಭವ ಕೈ ಹಿಡಿಯಲಿದೆ: ಇಂಗ್ಲೆಂಡ್ ಪ್ರವಾಸಕ್ಕೆ ಮುನ್ನ ಭಾರತ ತಂಡದ ನಾಯಕನ ಹೇಳಿಕೆ

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ | ಅಭ್ಯಾಸದ ಕೊರತೆ ಕಾಡಲಾರದು: ವಿರಾಟ್ ಕೊಹ್ಲಿ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ನ್ಯೂಜಿಲೆಂಡ್ ಎದುರಿನ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್ ಪಂದ್ಯಕ್ಕೆ ಸಿದ್ಧತೆ ನಡೆಸಲು ಸಮಯಾವಕಾಶ ಸಿಗಲಿಲ್ಲ ನಿಜ. ಆದರೆ ಇದರಿಂದ ತಂಡದ ಸಾಮರ್ಥ್ಯದ ಮೇಲೆ ‍ಪರಿಣಾಮ ಉಂಟಾಗದು ಎಂದು ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಮತ್ತು ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗಾಗಿ ಪ್ರವಾಸ ಹೊರಡುವ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇಂಗ್ಲೆಂಡ್‌ನಲ್ಲಿ ಈ ಹಿಂದೆ ಆಡಿರುವ ಅನುಭವ ತಂಡದ ಕೈಹಿಡಿಯಲಿದೆ ಎಂದರು.

ಸೌತಾಂಪ್ಟನ್‌ನಲ್ಲಿ ಜೂನ್ 18ರಂದು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಆರಂಭವಾಗಲಿದೆ. ಅದಕ್ಕೂ ಮುನ್ನ ನ್ಯೂಜಿಲೆಂಡ್ ತಂಡ ಇಂಗ್ಲೆಂಡ್ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಭಾರತ ತಂಡ ಅಲ್ಲಿಗೆ ತಲುಪಿದ ಕೂಡಲೇ ಕ್ವಾರಂಟೈನ್‌ಗೆ ಒಳಗಾಗಲಿದೆ. ಈ ಪೈಕಿ ಮೊದಲ ಮೂರು ದಿನ ಆಟಗಾರರು ಹೋಟೆಲ್ ಕೊಠಡಿಯಲ್ಲೇ ಇರುವರು.  

‘ಈ ಹಿಂದೆ ಪರಿಸ್ಥಿತಿ ಚೆನ್ನಾಗಿರುವಾಗ ಕೂಡ ಕೇವಲ ಮೂರು ದಿನಗಳ ಹಿಂದೆ ಅಲ್ಲಿಗೆ ತಲುಪಿದ್ದೇವೆ. ಆದರೂ ಉತ್ತಮ ಸಾಧನೆ ಮಾಡಿ ಸರಣಿ ಗೆದ್ದಿದ್ದೇವೆ. ಭಾರತ ತಂಡ ಇಂಗ್ಲೆಂಡ್‌ನಲ್ಲಿ ಹಿಂದೆಯೂ ಸಾಕಷ್ಟು ಕ್ರಿಕೆಟ್ ಆಡಿದೆ. ಆದ್ದರಿಂದ ಅಲ್ಲಿನ ಪರಿಸ್ಥಿತಿಗೆ ಆಟಗಾರರು ಬೇಗ ಒಗ್ಗಿಕೊಳ್ಳಲಿದ್ದಾರೆ. ಮನಸ್ಥಿತಿ ಚೆನ್ನಾಗಿದ್ದರೆ ಎಲ್ಲವೂ ಸರಿಹೋಗುತ್ತದೆ’ ಎಂದು ಅವರು ನುಡಿದರು.

‘ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ಗೂ ಮೊದಲು ನಾಲ್ಕು ದಿನ ಅಭ್ಯಾಸ ನಡೆಯಲಿದೆ. ತಂಡದ ಸಾಮರ್ಥ್ಯ ಹೆಚ್ಚಿಸಲು ಅಷ್ಟು ಸಮಯ ಸಾಕಾಗಲಿದೆ. ಈ ಅವಧಿಯಲ್ಲಿ ಯುವ ಆಟಗಾರರನ್ನು ಕೂಡ ಸಜ್ಜುಗೊಳಿಸಲು ಸಾಧ್ಯ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು