ಶನಿವಾರ, ಜನವರಿ 18, 2020
25 °C

ತೇವದ ಪಿಚ್ ಮೇಲೆ ರಂಗೋಲಿ ಬಿಡಿಸಿದರೇ ಕೊಹ್ಲಿ!: ಟ್ರೋಲ್ ಆಯ್ತು ಕ್ಯಾಪ್ಟನ್ ಫೋಟೊ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುವಾಹಟಿ: ಜನಪ್ರಿಯ ವ್ಯಕ್ತಿಗಳು ಟ್ರೋಲಿಗರ ಕಾಟದಿಂದ ತಪ್ಪಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಚೂರು ಎಚ್ಚರ ತಪ್ಪಿದರೂ ಟ್ರೋಲ್‌ಗಳಿಗೆ ಆಹಾರವಾಗುವುದು ಕಟ್ಟಿಟ್ಟ ಬುತ್ತಿ. ಕೆಲವೊಮ್ಮೆ ತಪ್ಪು ಮಾಡದಿದ್ದರೂ, ಫೋಟೊಶಾಪ್‌ ಕರಾಮತ್ತಿಗೆ ಸಿಲುಕಿ ಹಾಸ್ಯಕ್ಕೊಳಗಾಗುವುದುಂಟು. ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಇದಕ್ಕೊಂದು ತಾಜಾ ಉದಾಹರಣೆ.

ಮಳೆ ಹಾಗೂ ಪಿಚ್‌ನಲ್ಲಿನ ತೇವದಿಂದಾಗಿ ಮೊನ್ನೆ ಗುವಾಹಟಿಯ ಬರ್ಸಾಪುರ ಮೈದಾನದಲ್ಲಿ ನಡೆಯಬೇಕಿದ್ದ ಶ್ರೀಲಂಕಾ ವಿರುದ್ಧದ ಮೊದಲ ಟಿ20 ಪಂದ್ಯ ರದ್ದಾಗಿತ್ತು. ಒಂದೂ ಎಸೆತ ಕಾಣದ ಪಂದ್ಯವನ್ನು ರದ್ದು ಪಡಿಸುವ ಮೊದಲು ಶ್ರೇಯಸ್‌ ಅಯ್ಯರ್‌ ಜೊತೆಗೆ ಮೈದಾನಕ್ಕೆ ಬಂದ ವಿರಾಟ್‌, ಪಿಚ್‌ ಮೇಲೆ ಮಂಡಿಯೂರಿ ಕುಳಿತು ನೆಲ ಮುಟ್ಟಿ ತಪಾಸಣೆ ನಡೆಸಿದ್ದರು.

ಇದನ್ನೂ ಓದಿ: 

ಈ ವೇಳೆ ತೆಗೆಯಲಾದ ಚಿತ್ರವನ್ನು ಬಳಸಿಕೊಂಡಿರುವ ಟ್ರೋಲಿಗರು, ಪಿಚ್‌ ಮೇಲೆ ಕೊಹ್ಲಿ ರಂಗೋಲಿ ಬಿಡಿಸುತ್ತಿರುವಂತೆ, ಬಟ್ಟೆ ಇಸ್ತ್ರಿ ಮಾಡುತ್ತಿರುವಂತೆ, ಗಿಡ ನೆಡುತ್ತಿರುವಂತೆ ಎಡಿಟ್‌ ಮಾಡಿದ್ದಾರೆ. ಮಾತ್ರವಲ್ಲದೆ ಹೆಂಡತಿ ಅನುಷ್ಕಾ ಶರ್ಮಾ, ಕೊಹ್ಲಿಯನ್ನತೇ ನೋಡುತ್ತಾ ಕುಳಿತಿರುವಂತೆಯೂ ಚಿತ್ರಸಲಾಗಿದೆ. ಈ ಚಿತ್ರಗಳು ಟ್ವಿಟರ್‌ನಲ್ಲಿ ಸಾಕಷ್ಟು ವೈರಲ್‌ ಆಗಿವೆ.

ಭಾರತ ಹಾಗು ಶ್ರೀಲಂಕಾ ನಡುವಣ ಮೂರು ಪಂದ್ಯಗಳ ಸರಣಿಯ ಎರಡನೇ ಪಂದ್ಯವು ಇಂದು ರಾತ್ರಿ ಇಂದೋರ್‌ನ  ಹೋಳ್ಕರ್‌ ಮೈದಾನದಲ್ಲಿ ನಡೆಯಲಿದೆ.

ಇದನ್ನೂ ಓದಿ: 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು