ಶನಿವಾರ, ಜೂನ್ 19, 2021
23 °C

ಕೋವಿಡ್ ಹೋರಾಟಕ್ಕೆ ₹2 ಕೋಟಿ ದೇಣಿಗೆ ನೀಡಿದ ವಿರಾಟ್-ಅನುಷ್ಕಾ ದಂಪತಿ

ಪಿಟಿಐ‌ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್-19 ವಿರುದ್ಧದ ಹೋರಾಟಕ್ಕೆ ಕೈಜೋಡಿಸಿಕೊಂಡಿರುವ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ, ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿ ₹2 ಕೋಟಿ ದೇಣಿಗೆ ನೀಡಿದ್ದು, ಒಟ್ಟು ₹7 ಕೋಟಿ ನಿಧಿ ಸಂಗ್ರಹಿಸುವ ಗುರಿ ಹೊಂದಿದ್ದಾರೆ.

ಕ್ರೌಡ್ ಫಂಡಿಂಗ್ 'ಕೆಟ್ಟೊ' ಮೂಲಕ ವಿರಾಟ್-ಅನುಷ್ಕಾ ತಾರಾ ದಂಪತಿಯು ಏಳು ಕೋಟಿ ರೂ.ಗಳ ದೇಣಿಗೆಯನ್ನು ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: 

#InThisTogether ಎಂಬ ಅಭಿಮಾನದಡಿಯಲ್ಲಿ ದೇಣಿಗೆ ಸಂಗ್ರಹಿಸಲಾಗುತ್ತಿದೆ. ಇದರಂತೆ ಕೊಹ್ಲಿ-ಅನುಷ್ಕಾ ಜೋಡಿಯು ಎರಡು ಕೋಟಿ ರೂ. ಧನ ಸಹಾಯ ನೀಡಿ ಅಭಿಯಾನ ಪ್ರಾರಂಭಿಸಿದ್ದಾರೆ.

 

 

 

ಈ ಅಭಿಯಾನವು ಕೆಟ್ಟೊದಲ್ಲಿ ಒಂದು ವಾರದ ವರೆಗೆ ಮುಂದುವರಿಯಲಿದೆ. ಇಲ್ಲಿ ಸಂಗ್ರಹಿಸಲಾಗುವ ದೇಣಿಗೆಯನ್ನು ಕೋವಿಡ್ ಸಾಂಕ್ರಾಮಿಕ ರೋಗದಿಂದ ತೊಂದರೆ ಎದುರಿಸುತ್ತಿರುವವರಿಗೆ ಆಮ್ಲಜನಕ, ವೈದ್ಯಕೀಯ ನೆರವು ಪೂರೈಕೆ ಹಾಗೂ ಲಸಿಕೆ ಜಾಗೃತಿ ಮೂಡಿಸಲು ನೆರವಾಗಲಿದೆ.

 

'ದೇಶದ ಇತಿಹಾಸದಲ್ಲೇ ಅತ್ಯಂತ ಸಂಕಷ್ಟದ ಸಮಯದಿಂದ ನಾವು ಹಾದು ಹೋಗುತ್ತಿದ್ದೇವೆ. ಜನರನ್ನು ಒಗ್ಗೂಡಿಸಿ ಸಾಧ್ಯವಾದಷ್ಟು ಜನರ ಜೀವ ಉಳಿಸುವ ಅಗತ್ಯವಿದೆ. ಕಳೆದ ವರ್ಷ ಎದುರಿಸಿದ ಸಂಕಷ್ಟವನ್ನು ನೋಡಿ ನನಗೆ ಹಾಗೂ ಅನುಷ್ಕಾಳಿಗೆ ಆಘಾತವಾಗಿದೆ' ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

 

 

 

'ಅಗತ್ಯವಿರುವ ಜನರಿಗೆ ಸಹಾಯ ಮಾಡುವ ಇರಾದೆಯೊಂದಿಗೆ ನಾವು ದೇಣಿಗೆ ಸಂಗ್ರಹಿಸುವ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಸಂಕಷ್ಟದಲ್ಲಿರುವವರನ್ನು ಬೆಂಬಲಿಸಲು ಜನರು ಮುಂದೆ ಬರುತ್ತಾರೆ ಎಂಬ ವಿಶ್ವಾಸ ನನಗಿದೆ. ನಾವೆಲ್ಲರೂ ಒಗ್ಗಟ್ಟಾಗಿದ್ದು, ಈ ಕಷ್ಟದ ಸಮಯವನ್ನು ಜಯಿಸಲಿದ್ದೇವೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

 

'ಜೀವಗಳನ್ನು ರಕ್ಷಿಸಲು ಆರೋಗ್ಯ ವ್ಯವಸ್ಥೆ ಹೆಣಗಾಡುತ್ತಿರುವಾಗ ಜನರ ಸಂಕಷ್ಟವನ್ನು ನೋಡುವುದು ನನಗೆ ಹಾಗೂ ವಿರಾಟ್‌ಗೆ ಅತೀವ ನೋವುಂಟುಮಾಡಿದೆ' ಎಂದು ಅನುಷ್ಕಾ ಶರ್ಮಾ ಉಲ್ಲೇಖಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು