ಸೋಮವಾರ, ಜೂನ್ 1, 2020
27 °C
ಮಹಾನಗರಿಯಲ್ಲಿ ಹೆಚ್ಚುತ್ತಿರುವ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು

ವಿರಾಟ್, ರೋಹಿತ್ ಅಭ್ಯಾಸಕ್ಕೆ ಅಡ್ಡಿಯಾಗುವುದೇ ಮುಂಬೈ ಸ್ಥಿತಿ?

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ :  ಕೊರೊನಾ ವೈರಸ್ ಹಾವಳಿಯಿಂದ ತತ್ತರಿಸಿರುವ ಮುಂಬೈನಲ್ಲಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಅವರು ಮುಂದಿನ ವಾರದಿಂದ ಆರಂಭವಾಗಲಿರುವ ಅಭ್ಯಾಸದಿಂದ ವಂಚಿತರಾಗುವ ಸಾಧ್ಯತೆ ಇದೆ.

’ಲಾಕ್‌ಡೌನ್‌ನ ಮೂರನೇ ಹಂತವು ಸೋಮವಾರ ಮುಗಿಯಲಿದ್ದು, ಮುಂದಿನ ಹಂತದಲ್ಲಿ ಸರ್ಕಾರವು ರಿಯಾಯಿತಿ ಕೊಟ್ಟರೆ, ಆಟಗಾರರಿಗೆ ಅವರ ಮನೆಗಳ ಸಮೀಪದ ಕ್ರೀಡಾಂಗಣದಲ್ಲಿ ನೆಟ್ಸ್‌ ಅಭ್ಯಾಸಕ್ಕೆ ವ್ಯವಸ್ಥೆ ಮಾಡಲಾಗುವುದು‘ ಎಂದು ಬಿಸಿಸಿಐ ಖಜಾಂಚಿ ಅರುಣ ಧುಮಾಲ್ ಹೇಳಿದ್ದರು.

ಆದರೆ, ಮುಂಬೈನಲ್ಲಿ ದಿನದಿಂದ ದಿನಕ್ಕೆ ಕೊವಿಡ್ ಪೀಡಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಆದ್ದರಿಂದ ನಿರ್ಬಂಧಗಳು ಬಿಗಿಯಾಗಿವೆ. ಇದರಿಂದಾಗಿ ಕೊಹ್ಲಿ ಮತ್ತು ರೋಹಿತ್ ಅವರು ಹೊರಾಂಗಣದಲ್ಲಿ ಅಭ್ಯಾಸ ಮಾಡುವುದು ಸಾಧ್ಯವಾಗದಿರಬಹುದು‘ ಎಂದು ಧುಮಾಲ್ ಹೇಳಿದ್ದಾರೆ.

’ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯು ಕೊರೊನಾ ನಂತರದ ಕ್ರಿಕೆಟ್‌ ತಾಲೀಮು ಮತ್ತು ಚಟುವಟಿಕೆಗಳ ಕುರಿತ ರೂಪುರೇಷೆ ಸಿದ್ಧಗೊಳಿಸುತ್ತಿದೆ.  ಸರ್ಕಾರದಿಂದ ಜಾರಿಯಾಗುವ ನಿರ್ಬಂಧಗಳು ಮತ್ತು ನಿಯಮಗಳಿಗೆ ಅನುಗುಣವಾಗಿ ಎನ್‌ಸಿಎ ಯೋಜನೆ ರೂಪಿಸಲಿದೆ‘ ಎಂದು ತಿಳಿಸಿದರು.

ಮುಂಬೈನಲ್ಲಿ ಈಗಾಗಲೇ ಒಂದು ಸಾವಿರಕ್ಕೂ ಹೆಚ್ಚು ಮಂದಿ ಕೊರೊನಾದಿಂದಾಗಿ ಸಾವನ್ನಪ್ಪಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು