IND vs WI- 3rd T20| ಟಾಸ್ ಗೆದ್ದ ವೆಸ್ಟ್ ಇಂಡೀಸ್, ಭಾರತ ಬ್ಯಾಂಟಿಂಗ್

ಕೋಲ್ಕತ್ತ: ಮೂರು ಟಿ20 ಪಂದ್ಯಗಳ ಸರಣಿಯ ಕಡೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.
ಕೋಲ್ಕತ್ತದ ಈಡನ್ ಗಾರ್ಡನ್ನಲ್ಲಿ ಟಿ20 ಪಂದ್ಯ ನಡೆಯುತ್ತಿದ್ದು, ಭಾರತವು ಮೊದಲು ಬ್ಯಾಟ್ ಮಾಡಲಿದೆ.
Kieron Pollard calls it right at the toss and West Indies will bowl first in the final T20I.
Ishan Kishan and Ruturaj Gaikwad to open for #TeamIndia.
Live - https://t.co/e1c4fOY0JR #INDvWI @Paytm pic.twitter.com/neUc2V1PX6
— BCCI (@BCCI) February 20, 2022
ಮೂರು ಪಂದ್ಯಗಳ ಪೈಕಿ ಭಾರತ ಈಗಾಗಲೇ ಮೊದಲೆರಡು ಪಂದ್ಯಗಳನ್ನು ಗೆದ್ದು ಸರಣಿಯನ್ನು ತನ್ನದಾಗಿಸಿಕೊಂಡಿದೆ. ಹೀಗಾಗಿ ಈ ಪಂದ್ಯ ಭಾರತಕ್ಕೆ ಅಷ್ಟೇನೂ ಮಹತ್ವದ್ದೆನಿಸಿಲ್ಲ.
ಈ ಪಂದ್ಯದಲ್ಲಿ ಇಶಾನ್ ಕಿಶನ್ ಮತ್ತು ಋತುರಾಜ್ ಗಾಯಕ್ವಾಡ್ ಅವರು ಓಪನಿಂಗ್ ಬರಲಿದ್ದಾರೆ.
ಟೀಂ ಇಂಡಿಯಾದ ಮಾಜಿ ಕ್ಯಾಪ್ಟನ್, ವಿರಾಟ್ ಕೊಹ್ಲಿ ಅವರಿಗೆ ಬಿಸಿಸಿಐ 10 ದಿನಗಳ ರಜೆ ನೀಡಿದ್ದು, ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.
ಆವೇಶ್ ಖಾನ್ ಈ ಟಿ20 ಮೂಲಕ ಅಂತರರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದಾರೆ.
ಭಾರತ ತಂಡ ಹೀಗಿದೆ
ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್, ಸೂರ್ಯ ಕುಮಾರ್ ಯಾದವ್, ವೆಂಕಟೇಶ್ ಐಯ್ಯರ್, ದೀಪಕ್ ಚಾಹರ್, ಹರ್ಷಲ್ ಪಟೇಲ್, ಶಾರ್ದೂಲ್ ಠಾಕೂರ್, ಆವೇಶ್ ಖಾನ್, ರವಿ ಬಿಶ್ನೋಯ್
3RD T20I. India XI: R Gaikwad, I Kishan (wk), R Sharma (c), S Iyer, S Yadav, V Iyer, D Chahar, H Patel, S Thakur, A Khan, R Bishnoi https://t.co/e1c4fOY0JR #INDvWI @Paytm
— BCCI (@BCCI) February 20, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.