ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಮನ್ಸ್ ಸ್ಫೋಟಕ ಆಟ; ಐರ್ಲೆಂಡ್‌ ವಿರುದ್ಧ ಜಯಿಸಿದ ವೆಸ್ಟ್‌ ಇಂಡೀಸ್‌

Last Updated 20 ಜನವರಿ 2020, 13:17 IST
ಅಕ್ಷರ ಗಾತ್ರ

ಬ್ಯಾಸೆಟೆರ್‌, ವೆಸ್ಟ್‌ ಇಂಡೀಸ್‌ : ಆರಂಭದ ಆಟಗಾರ ಲೆಂಡ್ಲ್‌ ಸಿಮನ್ಸ್ ಸಿಡಿಸಿದ ಹತ್ತು ಸಿಕ್ಸರ್‌ಗಳ ಬಲದಿಂದ ವೆಸ್ಟ್‌ ಇಂಡೀಸ್‌ ತಂಡ ಐರ್ಲೆಂಡ್‌ ತಂಡವನ್ನು 9 ವಿಕೆಟ್‌ಗಳಿಂದ ಮಣಿಸಿತು. ಇದರೊಂದಿಗೆ ಮೂರು ಪಂದ್ಯಗಳ ಟ್ವೆಂಟಿ–20 ಸರಣಿ 1–1ರಿಂದ ಸಮಗೊಂಡಿತು.

ವಾರ್ನರ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆದ ಮೂರನೇ ಹಾಗೂ ಅಂತಿಮ ಹಣಾಹಣಿಯಲ್ಲಿ ಸಿಮನ್ಸ್ 40 ಎಸೆತಗಳಲ್ಲಿ ಔಟಾಗದೆ 91 ರನ್‌ ಸಿಡಿಸಿದರು. ಅದರಲ್ಲಿ ಐದು ಬೌಂಡರಿಗಳೂ ಇದ್ದವು. ಟ್ವೆಂಟಿ–20 ಮಾದರಿಯಲ್ಲಿ ಇದು ಅವರ ವೈಯಕ್ತಿಕ ಗರಿಷ್ಠ ಸ್ಕೋರ್‌.

ಐರ್ಲೆಂಡ್‌ ನೀಡಿದ 139 ರನ್‌ ಗುರಿಯನ್ನು ಕೆರಿಬಿಯನ್‌ ನಾಡಿನ ತಂಡ 54 ಎಸೆತಗಳು ಬಾಕಿಯಿರುವಂತೆ ತಲುಪಿತು. ಕಳೆದುಕೊಂಡಿದ್ದು ಒಂದು ವಿಕೆಟ್‌ ಮಾತ್ರ. ಎವಿನ್‌ ಲೂಯಿಸ್‌ (46, 4 ಬೌಂಡರಿ, 3 ಸಿಕ್ಸರ್‌), ಸಿಮನ್ಸ್‌ ಅವರಿಗೆ ಉತ್ತಮ ಬೆಂಬಲ ನೀಡಿದರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ್ದ ಐರ್ಲೆಂಡ್‌ ತಂಡ ಕೀರನ್‌ ಪೊಲಾರ್ಡ್‌ (17ಕ್ಕೆ 3) ಹಾಗೂ ಡ್ವೇನ್‌ ಬ್ರಾವೊ (19ಕ್ಕೆ 3) ಬೌಲಿಂಗ್‌ ದಾಳಿಗೆ ತತ್ತರಿಸಿ ಸಾಧಾರಣ ಮೊತ್ತ ಪೇರಿಸಿತ್ತು.

ಸರಣಿಯ ಮೊದಲ ಪಂದ್ಯವನ್ನು ಐರ್ಲೆಂಡ್‌ ನಾಲ್ಕು ರನ್‌ಗಳಿಂದ ಜಯಿಸಿತ್ತು. ಎರಡನೇ ಪಂದ್ಯ ಮಳೆಯಿಂದ ರದ್ದಾಗಿತ್ತು.

ಸಂಕ್ಷಿಪ್ತ ಸ್ಕೋರ್‌: ಐರ್ಲೆಂಡ್‌ 19.1 ಓವರ್‌ಗಳಲ್ಲಿ 138 ಆಲೌಟ್‌ (ಕೆವಿನ್‌ ಓಬ್ರಿಯನ್‌ 36, ಆ್ಯಂಡಿ ಬಲ್‌ಬೈರ್ನ್‌ 28; ಡ್ವೇನ್‌ ಬ್ರಾವೊ 19ಕ್ಕೆ 3, ಕೀರನ್‌ ಪೊಲಾರ್ಡ್‌ 17ಕ್ಕೆ 3, ಸೆರ್ಫೆನ್‌ ರುದರ್ಫೋರ್ಡ್‌ 27ಕ್ಕೆ 1) ವೆಸ್ಟ್‌ ಇಂಡೀಸ್‌ 11 ಓವರ್‌ಗಳಲ್ಲಿ 1 ವಿಕೆಟ್‌ಗೆ 140 (ಲೆಂಡ್ಲ್‌ ಸಿಮನ್ಸ್ 91, ಎವಿನ್‌ ಲೂಯಿಸ್‌ 46; ಸಿಮಿ ಸಿಂಗ್‌ 41ಕ್ಕೆ 1) ಫಲಿತಾಂಶ: ವೆಸ್ಟ್‌ ಇಂಡೀಸ್ ತಂಡಕ್ಕೆ 9 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT