ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CWC 2023: ಭಾರತ–ಪಾಕಿಸ್ತಾನ ಪಂದ್ಯಕ್ಕೆ ಪಶ್ಚಿಮ ರೈಲ್ವೆಯಿಂದ 2 ವಿಶೇಷ ರೈಲು

Published 12 ಅಕ್ಟೋಬರ್ 2023, 4:30 IST
Last Updated 12 ಅಕ್ಟೋಬರ್ 2023, 4:30 IST
ಅಕ್ಷರ ಗಾತ್ರ

ಮುಂಬೈ: ಅ.14ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಕ್ರಿಕೆಟ್‌ ಪಂದ್ಯಕ್ಕೆ ಎರಡು ವಿಶೇಷ ಸೂಪರ್‌ಫಾಸ್ಟ್‌ ರೈಲುಗಳು ಕಾರ್ಯಾಚರಿಸಲಿವೆ ಎಂದು ಪಶ್ಚಿಮ ರೈಲ್ವೆ ತಿಳಿಸಿದೆ.

ಸಂಚಾರ ದಟ್ಟಣೆ ತಡೆಯುವ ಸಲುವಾಗಿ ಮುಂಬೈ ಸೆಂಟ್ರಲ್‌ ಹಾಗೂ ಅಹಮದಾಬಾದ್‌ ನಿಲ್ದಾಣದ ನಡುವೆ ಈ ವಿಶೇಷ ರೈಲು ಓಡಾಡಲಿದೆ.

ಮುಂಬೈ ಸೆಂಟ್ರಲ್‌ – ಅಹಮದಾಬಾದ್‌ ನಡುವಿನ ವಿಶೇಷ ರೈಲು ಶುಕ್ರವಾರ ರಾತ್ರಿ 9.30ಕ್ಕೆ ಹೊರಡಲಿದೆ. ಮರುದಿನ ಬೆಳಿಗ್ಗೆ 5.30ಕ್ಕೆ ಅಹಮದಾಬಾದ್‌ ತಲುಪಲಿದೆ. ಅಹಮದಾಬಾದ್‌–ಮುಂಬೈ ವಿಶೇಷ ರೈಲು ಭಾನುವಾರ ಬೆಳಿಗ್ಗೆ 4 ಗಂಟೆಗೆ ಹೊರಟು, ಅದೇ ದಿನ ಮಧ್ಯಾಹ್ನ 12.10ಕ್ಕೆ ಮುಂಬೈ ಸೆಂಟ್ರಲ್‌ ತಲುಪಲಿದೆ ಎಂದು ಪಶ್ಚಿಮ ರೈಲ್ವೆ ತಿಳಿಸಿದೆ.

ಈ ರೈಲುಗಳಿಗೆ ವಿಶೇಷ ದರ ನಿಗದಿಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

‘ಭಾರತ–ಪಾಕಿಸ್ತಾನ ನಡುವಿನ ಪಂದ್ಯ ವೀಕ್ಷಣೆ ಮಾಡುವ ಕ್ರಿಕೆಟ್‌ ಅಭಿಮಾನಿಗಳಿಗೆ ಇದು ದೊಡ್ಡ ಕೊಡುಗೆಯಾಗಿದೆ’ ಎಂದು ಪಶ್ಚಿಮ ರೈಲ್ವೆ ಹೇಳಿದೆ.

ಈ ವಿಶೇಷ ರೈಲಿನಲ್ಲಿ ಎ.ಸಿ 2 ಟೈರ್‌, ಎ.ಸಿ 3 ಟೈರ್‌, ಸ್ಲೀಪರ್‌ ಕ್ಲಾಸ್‌ ಹಾಗೂ ಜನರಲ್‌ ಕ್ಲಾಸ್‌ಗಳ ಬೋಗಿ ಇರಲಿವೆ. ದಾದರ್, ಬೊರಿವಾಲಿ, ಪಾಲ್ಗರ್‌ಮ ವಾಪಿ, ವಲ್ಸಾಡ್‌, ನವಸಾರಿ, ಸೂರತ್‌ ಹಾಗೂ ವಡೋದರದಲ್ಲಿ ನಿಲ್ಲಲಿದೆ.

ಅ.12ರಿಂದ ಬುಕ್ಕಿಂಗ್‌ ಅರಂಭವಾಗಲಿದೆ. ಎಲ್ಲಾ ಪಿಆರ್‌ಎಸ್ ಕೌಂಟರ್ ಹಾಗೂ ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT