ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ–ರೋಹಿತ್‌ ಜೊತೆಯಾಟ ಮುರಿಯಲು ಅಂಪೈರ್‌ ಸಲಹೆ ಕೇಳಿದ್ದ ಫಿಂಚ್‌!

Last Updated 10 ಜೂನ್ 2020, 10:26 IST
ಅಕ್ಷರ ಗಾತ್ರ

ಲಂಡನ್‌: ಭಾರತ ತಂಡದ ಬ್ಯಾಟ್ಸ್‌ಮನ್‌ಗಳಾದ ವಿರಾಟ್‌ ಕೊಹ್ಲಿ–ರೋಹಿತ್‌ ಶರ್ಮಾ ಜೋಡಿ ವಿಶ್ವದ ಯಾವುದೇ ತಂಡದ ಬೌಲಿಂಗ್‌ ದಾಳಿಸಾಮಾನ್ಯ ಎನ್ನುವಂತೆ ಮಾಡಬಲ್ಲದು. ಇಂಥದ್ದೊಂದು ಸಂದರ್ಭದಲ್ಲಿ ಹತಾಶರಾದ ಎದುರಾಳಿ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರನ್‌ ಫಿಂಚ್‌, ಈ ಜೋಡಿಯನ್ನು ಬೇರ್ಪಡಿಸಲು ಸಲಹೆ ಕೇಳಿದ್ದು ಅಂಪೈರ್‌ ಅವರಲ್ಲಿ..

ಹೌದು. ಆ ಪಂದ್ಯದಲ್ಲಿ ಅಂಪೈರ್‌ ಆಗಿದ್ದ ಇಂಗ್ಲೆಂಡ್‌ನ ಮೈಕೆಲ್‌ ಗಫ್‌ ಅವರೇ ಈ ಸ್ವಾರಸ್ಯಕರಪ್ರಸಂಗವನ್ನು ನೆನಪಿಸಿಕೊಂಡಿದ್ದಾರೆ.

40 ವರ್ಷದ ಗಫ್‌, ಇಲ್ಲಿಯವರೆಗೆ 62 ಏಕದಿನ ಪಂದ್ಯಗಳಲ್ಲಿ ಅಂಪೈರ್‌ ಆಗಿ ಕಾರ್ಯನಿರ್ವಹಿಸಿದ್ದಾರೆ. 2019 ಹಾಗೂ 2020ರಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವಿನ ಸರಣಿಗಳು ಇದರಲ್ಲಿ ಸೇರಿವೆ.

‘ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಆ ಪಂದ್ಯದಲ್ಲಿ ವಿರಾಟ್‌ ಹಾಗೂ ರೋಹಿತ್ ಭರ್ಜರಿ ಜೊತೆಯಾಟದಲ್ಲಿ ಭಾಗಿಯಾಗಿದ್ದರು. ನಾನು ಸ್ಕ್ವೇರ್‌ಲೆಗ್‌ನಲ್ಲಿ ಅಂಪೈರಿಂಗ್‌ ಮಾಡುತ್ತಿದ್ದೆ. ನನ್ನ ಪಕ್ಕ ನಿಂತಿದ್ದ ಫಿಂಚ್‌, ಈ ಇಬ್ಬರು ಶ್ರೇಷ್ಠ ಆಟಗಾರು ನಂಬಲು ಕಷ್ಟವಾಗುವ ರೀತಿ ಆಡುತ್ತಿದ್ದಾರೆ’ ಎಂದು ನನಗೆ ಹೇಳಿದ್ದರು’ ಎಂದು ಗಫ್‌ ವಿಸ್ಡನ್‌ ನಿಯತಕಾಲಿಕಕ್ಕೆ ತಿಳಿಸಿದ್ದಾರೆ.

‘ಅವರಿಗೆ ಬೌಲಿಂಗ್‌ ಮಾಡುವುದು ಹೇಗೆ ಎಂದು ಫಿಂಚ್‌ ಅವರು ನನಗೆ ಕೇಳಿದರು. ನನಗೆ ಮಾಡಬೇಕಾದ ಕೆಲಸ ಸಾಕಷ್ಟಿದೆ. ನಿನ್ನದನ್ನು ನೀನು ನೋಡಿಕೊ ಎಂದು ನಾನು ಉತ್ತರಿಸಿದ್ದೆ’ ಎಂದು ಗಫ್ ಆ‌ ಘಟನೆಯನ್ನು ಮೆಲುಕು ಹಾಕಿದ್ದಾರೆ.

ಈ ವರ್ಷದ ಜನವರಿಯಲ್ಲಿ ಉಭಯ ತಂಡಗಳ ಮಧ್ಯೆ ಬೆಂಗಳೂರಿನಲ್ಲಿ ನಡೆದ ಮೂರನೇ ಏಕದಿನ ಪಂದ್ಯವು, ಗಫ್‌ ಹೇಳಿದ ಪ್ರಸಂಗಕ್ಕೆ ಸಾಕ್ಷಿಯಾಗಿರುವ ಸಾಧ್ಯತೆಯಿದೆ.

ಕೊಹ್ಲಿ (89) ಹಾಗೂ ರೋಹಿತ್‌ (119) ಅವರು ಈ ಪಂದ್ಯದಲ್ಲಿ ಎರಡನೇ ವಿಕೆಟ್‌ ಜೊತೆಯಾಟದಲ್ಲಿ 137 ರನ್‌ ಸೇರಿಸಿದ್ದರು. 286 ರನ್‌ಗಳ ಗುರಿಯನ್ನು ಭಾರತ ಮೂರು ವಿಕೆಟ್‌ ಕಳೆದುಕೊಂಡು ತಲುಪಿತ್ತು. 2–1ರಿಂದ ಸರಣಿಯನ್ನೂ ತನ್ನದಾಗಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT