ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನನ್ನು ಏಕೆ ಕೊಹ್ಲಿಗೆ ಹೋಲಿಸುತ್ತೀರಿ: ಪಾಕ್‌ ಕ್ರಿಕೆಟಿಗ ಬಾಬರ್ ಅಜಮ್‌ ಆಕ್ಷೇಪ

Last Updated 3 ಜುಲೈ 2020, 6:24 IST
ಅಕ್ಷರ ಗಾತ್ರ

ಕರಾಚಿ: ಪಾಕಿಸ್ತಾನದ ಸೀಮಿತ ಓವರ್‌ಗಳ ನಾಯಕ ಬಾಬರ್ ಅಜಮ್ ಅವರು ತಮ್ಮನ್ನು ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅವರೊಂದಿಗೆ ಸಮೀಕರಿಸುತ್ತಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೆ ಹೋಲಿಕೆ ಮಾಡುವುದಿದ್ದರೆ ಪಾಕಿಸ್ತಾನದ ಶ್ರೇಷ್ಠ ಆಟಗಾರರೊಂದಿಗೆ ಹೋಲಿಕೆ ಮಾಡಬೇಕಿತ್ತು ಎಂದು ಅವರು ಹೇಳಿದ್ದಾರೆ.

ರಾಷ್ಟ್ರೀಯ ತಂಡದೊಂದಿಗೆ ಇಂಗ್ಲೆಂಡ್‌ನಲ್ಲಿರುವ 25 ವರ್ಷದ ಅಜಮ್‌, ಆನ್‌ಲೈನ್ ಮಾಧ್ಯಮ ಸಂವಾದದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ‘ನೀವು ನನ್ನನ್ನು ಜಾವೇದ್ ಮಿಯಾಂದಾದ್, ಮುಹಮ್ಮದ್ ಯೂಸುಫ್ ಅಥವಾ ಯೂನಿಸ್ ಖಾನ್ ಅವರೊಂದಿಗೆ ಹೋಲಿಸಿದ್ದಿದ್ದರೆ ನನಗೆ ಹೆಚ್ಚು ಸಂತೋಷವಾಗುತ್ತದೆ. ನನ್ನನ್ನು ಕೊಹ್ಲಿ ಅಥವಾ ಯಾವುದೇ ಭಾರತೀಯ ಆಟಗಾರನೊಂದಿಗೆ ಏಕೆ ಹೋಲಿಕೆ ಮಾಡುತ್ತೀರಿ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್‌ ಬದುಕಿನಲ್ಲಿ ಬಾಬರ್ 16 ಶತಕಗಳನ್ನು ಗಳಿಸಿದ್ದಾರೆ. ಏಕದಿನ ಮತ್ತು ಟಿ20ಗಳಲ್ಲಿ 50 ಕ್ಕಿಂತ ಹೆಚ್ಚಿನ ಸರಾಸರಿ ಹೊಂದಿದ್ದಾರೆ. 26 ಟೆಸ್ಟ್ ಪಂದ್ಯಗಳಲ್ಲಿ 45.12 ಸರಾಸರಿ ಮೂಲಕ 1850 ರನ್ ಗಳಿಸಿದ್ದಾರೆ.

ಪಾಕಿಸ್ತಾನದಲ್ಲಿ ವಿರಾಟ್‌ ಕೊಹ್ಲಿಗೆ ಹೋಲಿಕೆ ಮಾಡಲಾಗುತ್ತಿರುವ ಬಾಬರ್‌ ಕೊಹ್ಲಿಗಿಂತಲೂ ಆರು ವರ್ಷ ಕಿರಿಯರು. ಅಲ್ಲದೆ, ಕ್ರಿಕೆಟ್‌ ಬದುಕಿನಲ್ಲಿ 70 ಶತಕಗಳನ್ನು ಹೊಂದಿರುವ, ಎಲ್ಲಾ ಮೂರು ಮಾದರಿಗಳಲ್ಲಿ 50 ಕ್ಕಿಂತ ಹೆಚ್ಚಿನ ಸರಾಸರಿ ಹೊಂದಿರುವ ವಿರಾಟ್‌ ಕೊಹ್ಲಿ ಅವರನ್ನು ಸಮೀಪಿಸಲು ಬಾಬರ್‌ ಬಹಳಷ್ಟು ದೂರ ಸಾಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT