ಚಿತ್ತಗಾಂವ್:ಕೈಲ್ ಮಯರ್ಸ್ ಅವರು ಪದಾರ್ಪಣೆ ಟೆಸ್ಟ್ನ ನಾಲ್ಕನೇ ಇನಿಂಗ್ಸ್ನಲ್ಲಿ ದ್ವಿಶತಕ (ಔಟಾಗದೆ 210, 310 ಎಸೆತ, 20 ಬೌಂಡರಿ, 7 ಸಿಕ್ಸರ್) ಬಾರಿಸಿದ ಮೊದಲ ಆಟಗಾರ ಎನಿಸಿಕೊಂಡರು. ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ತಂಡವು ಭಾನುವಾರ ಕೊನೆಗೊಂಡ ಬಾಂಗ್ಲಾದೇಶ ತಂಡದ ಎದುರಿನ ಮೊದಲ ಪಂದ್ಯವನ್ನು ಮೂರು ವಿಕೆಟ್ಗಳಿಂದ ಗೆದ್ದುಕೊಂಡಿತು.

395 ರನ್ಗಳ ಗುರಿ ಬೆನ್ನತ್ತಿದ ವೆಸ್ಸ್ ಇಂಡೀಸ್, ಐದನೇ ದಿನದಾಟವಾದ ಭಾನುವಾರ ಏಳು ವಿಕೆಟ್ ಕಳೆದುಕೊಂಡು ಜಯಭೇರಿ ಮೊಳಗಿಸಿತು. ಟೆಸ್ಟ್ ಮಾದರಿಯಲ್ಲಿ ಇದು ಐದನೇ ಗರಿಷ್ಠ ರನ್ ಚೇಸಿಂಗ್ ಆಗಿದೆ.

ಮೊದಲ ಇನಿಂಗ್ಸ್ನಲ್ಲಿ 40 ರನ್ ಗಳಿಸಿದ್ದ ಕೈಲ್ ಒಟ್ಟಾರೆ 250 ರನ್ ಕಲೆಹಾಕುವ ಮೂಲಕ, ಪದಾರ್ಪಣೆ ಪಂದ್ಯದಲ್ಲಿ ಅತಿ ಹೆಚ್ಚು ರನ್ ಗಳಿಸಿದ ವೆಸ್ಸ್ ಇಂಡೀಸ್ನ ಎರಡನೇ ಆಟಗಾರ ಎನಿಸಿಕೊಂಡರು.

ಇದೇ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದ ಮತ್ತೊಬ್ಬ ಆಟಗಾರ ಕ್ರುಮಾ ಬೊನ್ನರ್ (86) ಜೊತೆ ಕೈಲ್ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 216 ರನ್ ಪೇರಿಸಿದರು.

ಬಾಂಗ್ಲಾ ತಂಡದ ಆಫ್ಸ್ಪಿನ್ನರ್ ಮಹದಿ ಹಸನ್ (113ಕ್ಕೆ 4) ಹಾಗೂ ತೈಜುಲ್ ಇಸ್ಲಾಂ (91ಕ್ಕೆ 2) ಬೌಲಿಂಗ್ನಲ್ಲಿ ಮಿಂಚಿದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಬಾಂಗ್ಲಾದೇಶ: 430: ವೆಸ್ಟ್ ಇಂಡೀಸ್: 96.1 ಓವರ್ಗಳಲ್ಲಿ 259: ಎರಡನೇ ಇನಿಂಗ್ಸ್: ಬಾಂಗ್ಲಾದೇಶ: 67.5 ಓವರ್ಗಳಲ್ಲಿ 8 ವಿಕೆಟ್ಗೆ 223 ಡಿಕ್ಲೇರ್ಡ್: ವೆಸ್ಟ್ ಇಂಡೀಸ್: 127.3 ಓವರ್ಗಳಲ್ಲಿ 7 ವಿಕೆಟ್ಗೆ 395 (ಕೈಲ್ ಮಯರ್ಸ್ ಔಟಾಗದೆ 210, ಕುಮ್ರಾ ಬೊನ್ನರ್ 86, ಜಾನ್ ಕ್ಯಾಂಪ್ಬೆಲ್ 23, ಕ್ರೇಗ್ ಬ್ರಾಥ್ವೇಟ್ 20; ಮಹದಿ ಹಸನ್ 113ಕ್ಕೆ 4, ತೈಜುಲ್ ಇಸ್ಲಾಂ 91ಕ್ಕೆ 2). ಫಲಿತಾಂಶ: ವೆಸ್ಟ್ ಇಂಡೀಸ್ ತಂಡಕ್ಕೆ ಮೂರು ವಿಕೆಟ್ಗಳ ಗೆಲುವು. ಪಂದ್ಯಶ್ರೇಷ್ಠ: ಕೈಲ್ ಮಯರ್ಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.