ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

WPL2023: ಮುಂಬೈ ಇಂಡಿಯನ್ಸ್‌ ವಿರುದ್ಧ ಜಯ, ಅಗ್ರಸ್ಥಾನಕ್ಕೆ ಡೆಲ್ಲಿ ಕ್ಯಾಪಿಟಲ್ಸ್

Last Updated 21 ಮಾರ್ಚ್ 2023, 7:23 IST
ಅಕ್ಷರ ಗಾತ್ರ

ನವಿ ಮುಂಬೈ: ಡೆಲ್ಲಿ ಕ್ಯಾಪಿಟಲ್ಸ್‌ ತಂಡದವರು ಮುಂಬೈ ಇಂಡಿಯನ್ಸ್‌ ತಂಡವನ್ನು 9 ವಿಕೆಟ್‌ ಗಳಿಂದ ಮಣಿಸಿ ಡಬ್ಲ್ಯುಪಿಎಲ್‌ ಟಿ20 ಟೂರ್ನಿಯಲ್ಲಿ ಅಗ್ರಸ್ಥಾನಕ್ಕೇರಿದರು.

ಡೆಲ್ಲಿ ಮತ್ತು ಮುಂಬೈ ತಂಡಗಳು ಏಳು ಪಂದ್ಯಗಳಿಂದ ತಲಾ 10 ಪಾಯಿಂಟ್ಸ್‌ ಹೊಂದಿವೆ. ಉತ್ತಮ ರನ್‌ ರೇಟ್‌ ಹೊಂದಿರುವ ಮೆಗ್‌ ಲ್ಯಾನಿಂಗ್‌ ಬಳಗ ಅಗ್ರಸ್ಥಾನ ತನ್ನದಾಗಿಸಿಕೊಂಡಿದೆ.

ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಹರ್ಮನ್‌ಪ್ರೀತ್‌ ಕೌರ್‌ ಬಳಗ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 8 ವಿಕೆಟ್‌ಗಳಿಗೆ 109 ರನ್‌ ಮಾತ್ರ ಗಳಿಸಿತು. ಡೆಲ್ಲಿ 9 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು ಗೆಲುವಿನ ಗುರಿ ತಲುಪಿತು.

ಶಫಾಲಿ ವರ್ಮಾ (33 ರನ್, 15 ಎ.), ಅಲೀಸ್‌ ಕ್ಯಾಪ್ಸಿ (ಔಟಾಗದೆ 38, 17 ಎ., 4X1, 6X5) ಮತ್ತು ಮೆಗ್‌ ಲ್ಯಾನಿಂಗ್‌ (ಔಟಾಗದೆ 32, 22 ಎ.) ಅವರು ಡೆಲ್ಲಿ ಗೆಲುವಿನ ಹಾದಿ ಸುಗಮಗೊಳಿಸಿದರು.

ಸಂಕ್ಷಿಪ್ತ ಸ್ಕೋರ್‌: ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 109 (ಹರ್ಮನ್‌ಪ್ರೀತ್‌ ಕೌರ್‌ 23, ಪೂಜಾ ವಸ್ತ್ರಕರ್‌ 26, ಇಸಿ ವಾಂಗ್‌ 23, ಮೆರಿಜಾನೆ ಕಾಪ್‌ 13ಕ್ಕೆ 2, ಶಿಖಾ ಪಾಂಡೆ 21ಕ್ಕೆ 2, ಜೆಸ್‌ ಜೊನಾಸೆನ್‌ 25ಕ್ಕೆ 2) ಡೆಲ್ಲಿ ಕ್ಯಾಪಿಟಲ್ಸ್‌ 9 ಓವರ್‌ಗಳಲ್ಲಿ 1 ವಿಕೆಟ್‌ಗೆ 110 (ಮೆಗ್‌ ಲ್ಯಾನಿಂಗ್‌ ಔಟಾಗದೆ 32, ಶಫಾಲಿ ವರ್ಮಾ 33, ಅಲೀಸ್‌ ಕ್ಯಾಪ್ಸಿ ಔಟಾಗದೆ 38) ಫಲಿತಾಂಶ: ಡೆಲ್ಲಿ ಕ್ಯಾಪಿಟಲ್ಸ್‌ಗೆ 9 ವಿಕೆಟ್‌ ಗೆಲುವು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT