ವಡೋದರಾ: ನ್ಯಾಟ್ ಶಿವರ್ ಬ್ರಂಟ್ ಅವರ ಆಲ್ರೌಂಡ್ ಆಟದ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡವು ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಜಯಭೇರಿ ಬಾರಿಸಿತು.

ಮಂಗಳವಾರ ಇಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಬ್ರಂಟ್ (26ಕ್ಕೆ2 ಹಾಗೂ 57) ಅವರ ಆಟದಿಂದ ಮುಂಬೈ ತಂಡವು 5 ವಿಕೆಟ್ಗಳಿಂದ ಗುಜರಾತ್ ಜೈಂಟ್ಸ್ ವಿರುದ್ಧ ಗೆದ್ದಿತು. ಟೂರ್ನಿಯಲ್ಲಿ ಮುಂಬೈ ತಂಡಕ್ಕೆ ಇದು ಮೊದಲ ಜಯ. ತನ್ನ ಪ್ರಥಮ ಪಂದ್ಯದಲ್ಲಿ ಮುಂಬೈ ತಂಡವು ಡೆಲ್ಲಿ ಕ್ಯಾಪಿಟಲ್ಸ್ ಎದುರು ಸೋತಿತ್ತು.

ಮುಂಬೈ ಇಂಡಿಯನ್ಸ್ ತಂಡವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಬ್ರಂಟ್, ಆಫ್ಸ್ಪಿನ್ನರ್ ಹೆಲಿ ಮ್ಯಾಥ್ಯೂಸ್ (16ಕ್ಕೆ3) ಹಾಗೂ ಅಮೆಲಿಯಾ ಕೆರ್ (22ಕ್ಕೆ2) ಅವರ ಬೌಲಿಂಗ್ ಮುಂದೆ ಗುಜರಾತ್ ತಂಡವು ಗುಜರಾತ್ ತಂಡವು 20 ಓವರ್ಗಳಲ್ಲಿ 120 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು.

ಗುಜರಾತ್ ತಂಡದ ಆಟಗಾರ್ತಿಯರು ಆಕ್ರಮಣಶೈಲಿಯ ಆಟವಾಡುವತ್ತ ಗಮನ ನೀಡಿದರು. ಆದರೆ ಮುಂಬೈ ಇಂಡಿಯನ್ಸ್ ಬೌಲರ್ಗಳು ಇದಕ್ಕೆ ಅವಕಾಶ ನೀಡಲಿಲ್ಲ. ಹಾಗೂ ಅವರ ಬೌಲಿಂಗ್ ರಂಗೇರಿತು.

79 ರನ್ಗಳಿಗೆ 7 ವಿಕೆಟ್ ಕಳೆದುಕೊಂಡ ಗುಜರಾತ್ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಆತಂಕ ಎದುರಿಸಿತ್ತು. ಆದರೆ ಹರ್ಲಿನ್ ಡಿಯೊಲ್ (32; 31ಎಸೆತ) ಹಾಗೂ ಕಾಶ್ವಿ ಗೌತಮ್ (20 ರನ್) ಅವರು ಒಂದಿಷ್ಟು ಹೋರಾಟ ಮಾಡಿದರು. ಅದರಿಂದಾಗಿ ತಂಡದ ಮೊತ್ತವು ಮೂರಂಕಿ ದಾಟಿತು.

ಗುರಿ ಬೆನ್ನಟ್ಟಿದ ಮುಂಬೈ ತಂಡಕ್ಕೆ ಗುಜರಾತ್ ತಂಡದ ಬೌಲರ್ಗಳಾದ ಪ್ರಿಯಾ ಮಿಶ್ರಾ ಮತ್ತು ಕಾಶ್ವಿ ಅವರು ಆರಂಭಿಕ ಪೆಟ್ಟು ನೀಡಿದರು. ಆದರೆ ಮುಂಬೈ ಆತಂಕವನ್ನು ಬ್ರಂಟ್ ದೂರ ಮಾಡಿದರು. 39 ಎಸೆತಗಳಲ್ಲಿ 57 ರನ್ ಗಳಿಸಿದರು. 11 ಬೌಂಡರಿ ಹೊಡೆದರು. ತಂಡವು 16.1 ಓವರ್ಗಳಲ್ಲಿ 5 ವಿಕೆಟ್ಗಳಿಗೆ 122 ರನ್ ಗಳಿಸಿತು.

ಸಂಕ್ಷಿಪ್ತ ಸ್ಕೋರು

ಗುಜರಾತ್ ಜೈಂಟ್ಸ್: 20 ಓವರ್ಗಳಲ್ಲಿ 120 (ಆ್ಯಷ್ಲೆ ಗಾರ್ಡನರ್ 10, ಹರ್ಲಿನ್ ಡಿಯೊಲ್ 32, ಕಾಶ್ವಿ ಗೌತಮ್ 20, ತನುಜಾ ಕನ್ವರ್ 13, ಸಯಾಲಿ ಸಾತಗರೆ ಔಟಾಗದೆ 13, ನ್ಯಾಟ್ ಶಿವರ್ ಬ್ರಂಟ್ 26ಕ್ಕೆ2, ಹೆಲಿ ಮ್ಯಾಥ್ಯೂಸ್ 16ಕ್ಕೆ3, ಅಮೆಲಿಯಾ ಕೆರ್ 22ಕ್ಕೆ2)

ಮುಂಬೈ ಇಂಡಿಯನ್ಸ್: 16.1 ಓವರ್ಗಳಲ್ಲಿ 5ಕ್ಕೆ122 (ಹೆಲಿ ಮ್ಯಾಥ್ಯೂಸ್ 17, ನ್ಯಾಟ್ ಶಿವರ್ ಬ್ರಂಟ್ 57, ಅಮೆಲಿಯಾ ಕೇರ್ 19, ಪ್ರಿಯಾ ಮಿಶ್ರಾ 40ಕ್ಕೆ2, ಕಾಶ್ವಿ ಗೌತಮ್ 15ಕ್ಕೆ2) ಫಲಿತಾಂಶ: ಮುಂಬೈ ಇಂಡಿಯನ್ಸ್ ತಂಡಕ್ಕೆ 5 ವಿಕೆಟ್ ಜಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.