ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Women's U19 T20 World Cup | ಶಫಾಲಿ, ಶ್ವೇತಾ ಆಟ: ಭಾರತಕ್ಕೆ ಭರ್ಜರಿ ಜಯ

19 ವರ್ಷದೊಳಗಿನ ಮಹಿಳೆಯರ ಟಿ20 ವಿಶ್ವಕಪ್‌ ಕ್ರಿಕೆಟ್‌
Last Updated 16 ಜನವರಿ 2023, 14:15 IST
ಅಕ್ಷರ ಗಾತ್ರ

ಬೆನೊನಿ, ದಕ್ಷಿಣ ಆಫ್ರಿಕಾ: ನಾಯಕಿ ಶಫಾಲಿ ವರ್ಮಾ ಹಾಗೂ ಆರಂಭಿಕ ಬ್ಯಾಟರ್ ಶ್ವೇತಾ ಶೆರಾವತ್‌ ಅವರ ಅಮೋಘ ಅರ್ಧಶತಕಗಳ ಬಲದಿಂದ ಭಾರತ ತಂಡವು 19 ವರ್ಷದೊಳಗಿನ ಮಹಿಳೆಯರ ಟಿ20 ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಗೆಲುವಿನ ಓಟ ಮುಂದುವರಿಸಿತು.

ಸೋಮವಾರ ಇಲ್ಲಿ ನಡೆದ ಪಂದ್ಯದಲ್ಲಿ ಭಾರತದ ಮಹಿಳೆಯರು 122 ರನ್‌ಗಳಿಂದ ಯುನೈಟೆಡ್‌ ಅರಬ್ ಎಮಿರೇಟ್ಸ್ (ಯುಎಇ) ತಂಡವನ್ನು ಪರಾಭವಗೊಳಿಸಿದರು.

ಪಂದ್ಯದಲ್ಲಿ ಟಾಸ್ ಗೆದ್ದ ಯುಎಇ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ಶಫಾಲಿ (78; 34ಎ, 4X12, 6X4) ಮತ್ತು ಶ್ವೇತಾ (ಔಟಾಗದೆ 74; 49 ಎ, 4X10) ಅವರ ನೆರವಿನಿಂದ ಮೂರು ವಿಕೆಟ್‌ ಕಳೆದುಕೊಂಡು 219 ರನ್ ಕಲೆಹಾಕಿತು. ಮೊದಲ ವಿಕೆಟ್‌ ಜೊತೆಯಾಟದಲ್ಲಿ ಇವರಿಬ್ಬರು 111 ರನ್‌ ಸೇರಿಸಿದರು.

ರಿಚಾ ಘೋಷ್‌ (49) ಕೂಡ ಕೊಡುಗೆ ನೀಡಿದರು. ಗುರಿ ಬೆನ್ನತ್ತಿದ ಯುಎಇ ನಿಗದಿತ ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 97 ರನ್‌ ಮಾತ್ರ ಗಳಿಸಿತು. ಈ ಗೆಲುವಿನೊಂದಿಗೆ ಭಾರತ ತಂಡವು ಡಿ ಗುಂಪಿನಲ್ಲಿ ಅಗ್ರಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿತು.

ಭಾರತ ಮುಂದಿನ ಪಂದ್ಯದಲ್ಲಿ ಬುಧವಾರ ಸ್ಕಾಟ್ಲೆಂಡ್ ತಂಡವನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 219 (ಶ್ವೇತಾ ಶೆರಾವತ್‌ ಔಟಾಗದೆ 74, ಶಫಾಲಿ ವರ್ಮಾ 78, ರಿಚಾ ಘೋಷ್‌ 49, ಇಂದುಜಾ ನಂದಕುಮಾರ್ 47ಕ್ಕೆ 1, ಮಹಿಕಾ ಗೌರ್ 53ಕ್ಕೆ 1, ಸಮೈರಾ ಧರಣಿಧರಕಾ 33ಕ್ಕೆ 1). ಯುನೈಟೆಡ್‌ ಅರಬ್ ಎಮಿರೇಟ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 97 (ತೀರ್ಥಾ ಸತೀಶ್‌ 16, ಲಾವಣ್ಯ ಕೆನಿ 24, ಮಹಿಕಾ ಗೌರ್ 26; ಶಬ್ನಂ ಎಂ.ಡಿ. 21ಕ್ಕೆ 1, ಟೈಟಸ್‌ ಸಧು 14ಕ್ಕೆ 1, ಮನ್ನತ್ ಕಶ್ಯಪ್‌ 14ಕ್ಕೆ 1). ಫಲಿತಾಂಶ: ಭಾರತ ತಂಡಕ್ಕೆ 122 ರನ್‌ಗಳ ಜಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT