ರೋಹಿತ್ ಶತಕ ದಾಖಲೆ, ಭಾರತ ಭರ್ಜರಿ ಬ್ಯಾಟಿಂಗ್; ಬಾಂಗ್ಲಾಗೆ 315 ರನ್ ಗುರಿ

ಬರ್ಮಿಂಗಂ: ಎಜ್‌ಬಾಸ್ಟನ್ ಮೈದಾನದಲ್ಲಿ ಮಂಗಳವಾರ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಟೀಂ ಇಂಡಿಯಾ, ರಾಹುಲ್ ಮತ್ತು ರೋಹಿತ್ ಭರ್ಜರಿ ಜತೆಯಾಟ ನೆರವಿನಿಂದ ಉತ್ತಮ ಮೊತ್ತ ದಾಖಲಿಸಿತು. ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ರೋಹಿತ್ ಅತ್ಯಧಿಕ ರನ್ ಕಲೆ ಹಾಕಿದರು. ಉತ್ತಮ ಬೌಲಿಂಗ್ ಮಾಡಿದ ಮುಸ್ತಫಿಜರ್ 5 ವಿಕೆಟ್ ಸಾಧನೆ ಮಾಡಿದರು.
ಟೀಂ ಇಂಡಿಯಾ ನಿಗದಿತ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 314 ರನ್ ಗಳಿಸಿತು. ಉತ್ತಮ ರನ್ ರೇಟ್ ಹೊಂದಿದ್ದ ತಂಡಕ್ಕೆ 38ನೇ ಓವರ್‌ನಲ್ಲಿ ಮುಸ್ತಫಿಜರ್ ಕೊಹ್ಲಿ ಮತ್ತು ಪಾಂಡ್ಯ ವಿಕೆಟ್ ಪಡೆಯುವ ಮೂಲಕ ಒತ್ತಡ ಸೃಷ್ಟಿಸಿದರು. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಅದಾಗಲೇ ಲಯ ಕಂಡುಕೊಂಡಿದ್ದ ರಿಷಬ್ ಪಂತ್(48; 41 ಎಸೆತ, 6 ಬೌಂಡರಿ,1 ಸಿಕ್ಸರ್) ಬಿರುಸಿನ ಆಟದ ಮೂಲಕ ಅಭಿಮಾನಿಗಳನ್ನು ರಂಜಿಸಿದರು. ಮಹೇಂದ್ರ ಸಿಂಗ್ ಧೋನಿ(15) ಮತ್ತು ದಿನೇಶ್ ಕಾರ್ತಿಕ್ ಕಣದಲ್ಲಿದ್ದಾರೆ.
ಕ್ಷಣಕ್ಷಣದ ಸ್ಕೋರ್: https://bit.ly/2JjpaXa
ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಐದು ಸಿಕ್ಸರ್‌ಗಳ ಸಹಿತ 90 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ವಿಶ್ವಕಪ್‌ನಲ್ಲಿ ರೋಹಿತ್ ನಿರ್ಮಿಸಿದ ನಾಲ್ಕನೇ ಶತಕ ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 26ನೇ ಶತಕವಾಗಿದೆ.
ಇದನ್ನೂ ಓದಿ: ವಿಶ್ವಕಪ್ ಟೂರ್ನಿಯಲ್ಲಿ ಶತಕಗಳ ಸರದಾರ ರೋಹಿತ್; ದಾಖಲೆಗಳ ಮಳೆ
122*
57
140
1
18
102100* today, and he's still going.
Rohit Sharma's #CWC19 campaign just gets better and better. #TeamIndia | #BANvIND pic.twitter.com/iYyZRYmI46
— Cricket World Cup (@cricketworldcup) July 2, 2019
ಉತ್ತಮ ಆಟವಾಡಿದ ಕೆ.ಎಲ್.ರಾಹುಲ್(77) ಮತ್ತು ರೋಹಿತ್ ಶರ್ಮಾ(104) ತಂಡದ ರನ್ ಗಳಿಕೆಗೆ ಭದ್ರ ಬುನಾದಿ ಹಾಕಿದರು. ಈ ಜೋಡಿ ಒಟ್ಟು 6 ಸಿಕ್ಸರ್ ಹಾಗೂ 13 ಬೌಂಡರಿ ಸಿಡಿಸಿತು. ನಾಲ್ಕನೇ ಓವರ್‌ನಲ್ಲಿ ರೋಹಿತ್ ಹೊಡೆತವನ್ನು ಹಿಡಿಯಲುವಲ್ಲಿ ತಮೀಮ್ ಇಕ್ಬಾಲ್ ವಿಫಲರಾದುದು ಬಾಂಗ್ಲಾ ಪಾಲಿಗೆ ಅಪಾಯಕಾರಿಯಾಯಿತು. ಸೌಮ್ಯಾ ಸರ್ಕಾರ್ ಎಸೆತದಲ್ಲಿ ರೋಹಿತ್ ಶರ್ಮಾ ಕ್ಯಾಚ್ ನೀಡಿ ಆಟ ಮುಗಿಸಿದರು. ರೋಹಿತ್ ಹಾದಿಯಲ್ಲೇ ರಾಹುಲ್ ಅವರೂ ಸೌಮ್ಯ ಸರ್ಕಾರ್ ಬೌಲಿಂಗ್‌ನಲ್ಲೇ ವಿಕೆಟ್ ಕೀಪರ್ ಲಿಟನ್ ದಾಸ್‌ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಭಾರೀ ಹೊಡೆತಗಳಿಗೆ ಮುಂದಾದ ವಿರಾಟ್ ಕೊಹ್ಲಿ(26) ಮುಸ್ತಫಿಜರ್ ರೆಹಮಾನ್ ಎಸೆತದಲ್ಲಿ ಕ್ಯಾಚ್ ನೀಡಿದರು. ಅದೇ ಓವರ್‌ನಲ್ಲಿ ಹಾರ್ದಿಕ್ ಪಾಂಡ್ಯ ಕೂಡ ವಿಕೆಟ್ ಒಪ್ಪಿಸಿದರು. ಉತ್ತಮ ಸ್ಕೋರ್ ದಾಖಲಿಸಿದ್ದ ಭಾರತ ತಂಡ್ಕಕೆ ಮುಸ್ತಫಿಜರ್ ಒಮ್ಮೆಗೆ 2 ವಿಕೆಟ್ ಕಬಳಿಸಿ ಆಘಾತ ನೀಡಿದರು. ಶಕೀಬ್ ಅಲ್ ಹಸನ್ ಎಸೆತದಲ್ಲಿ ರಿಷಬ್ ಪಂತ್ ಕ್ಯಾಚ್ ನೀಡಿದರು. ದಿನೇಶ್ ಕಾರ್ತಿಕ್(8) ಹಾಗೂ ಎಂ.ಎಸ್.ಧೋನಿ(35) ಸಹ ಮುಸ್ತಫಿಜರ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು.
Big, big wicket!
Mustafizur Rahman has gotten rid of #ViratKohli for 26. #BANvIND | #CWC19 pic.twitter.com/Y7e3GNNUSQ
— Cricket World Cup (@cricketworldcup) July 2, 2019
ಸೆಮಿಫೈನಲ್ ಹಂತ ಪ್ರವೇಶ ಜೀವಂತವಾಗಿರಿಸಲು ಬಾಂಗ್ಲಾ ಹುಲಿಗಳು ಗೆಲ್ಲಲೇಬೇಕಾದ ಅನಿವಾರ್ಯತೆಯಲ್ಲಿದ್ದಾರೆ.
India's fans certainly enjoyed watching Rohit Sharma get to his fifty!#BANvIND | #CWC19 pic.twitter.com/ikoXbs5Mr2
— Cricket World Cup (@cricketworldcup) July 2, 2019
50 up for Rohit Sharma! What a tournament he's having. #BANvIND | #CWC19 pic.twitter.com/DeWsgcQN5D
— Cricket World Cup (@cricketworldcup) July 2, 2019
ಭಾರತದ ತಂಡದಲ್ಲಿ ಆಲ್‌ರೌಂಡರ್ ಕೇದಾರ್ ಜಾದವ್ ಮತ್ತು ಸ್ಪಿನ್ನರ್ ಕುಲದೀಪ್ ಯಾದವ್ ಬದಲು ವೇಗದ ಬೌಲರ್ ಭುವನೇಶ್ವರ್ ಕುಮಾರ್ ಮತ್ತು ದಿನೇಶ್ ಕಾರ್ತಿಕ್ ಸ್ಥಾನ ಪಡೆದಿದ್ದಾರೆ.
#RiseOfTheTigers #TeamIndia#BANvIND | #CWC19 pic.twitter.com/ZjcTAFK2vy
— Cricket World Cup (@cricketworldcup) July 2, 2019
ಬಾಂಗ್ಲಾ ಪರ ಮಹಮುಲ್ಲಾ ಗಾಯಗೊಂಡಿದ್ದಾರೆ ಹಾಗೂ ಮೆಹಿದಿ ಹಸನ್ ಮಿರಾಜ್ ಬದಲು ಶಬ್ಬೀರ್ ರಹಮಾನ್ ಮತ್ತು ರುಬೆಲ್ ಹೊಸೇನ್ ಅಂಗಳದಲ್ಲಿದ್ದಾರೆ.
ಭಾನುವಾರ ಇದೇ ಅಂಗಳದಲ್ಲಿ ನಡೆದಿದ್ದ ಪಂದ್ಯದಲ್ಲಿ ತಂಡವು ಆತಿಥೇಯ ಇಂಗ್ಲೆಂಡ್‌ಗೆ ಶರಣಾಗಿತ್ತು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.