ತಂಡವಾಗಿ ಸೋತರು; ಪ್ರತ್ಯೇಕವಾಗಿ ಹೊರಟರು!

ಭಾನುವಾರ, ಜೂಲೈ 21, 2019
27 °C
ಸೆಮಿಫೈನಲ್ ಸೋಲು. ವಿರಾಟ್ ಬಳಗದಲ್ಲಿ ನಿರಾಶೆಯ ಛಾಯೆ

ತಂಡವಾಗಿ ಸೋತರು; ಪ್ರತ್ಯೇಕವಾಗಿ ಹೊರಟರು!

Published:
Updated:
Prajavani

ಮ್ಯಾಂಚೆಸ್ಟರ್: ಈ ಬಾರಿ ವಿಶ್ವಕಪ್ ಜಯಿಸುವ ನೆಚ್ಚಿನ ತಂಡ ಭಾರತದ ಅಭಿಯಾನ ಮುಗಿದಿದೆ. ನ್ಯೂಜಿಲೆಂಡ್‌ ನೀಡಿದ ಆಘಾತದಿಂದ ಚೇತರಿಸಿಕೊಳ್ಳುವ ಪ್ರಯತ್ನದಲ್ಲಿ ತಂಡದ ತಾರೆಗಳು ಇದ್ದಾರೆ.  ಹಿಂದಿನ ಏಳು ವಾರಗಳಿಂದ ಜೊತೆಯಾಗಿದ್ದವರು ಈಗ  ಬೇರೆ ಬೇರೆ ದಾರಿ ಹಿಡಿದಿದ್ದಾರೆ.

ತಂಡವಾಗಿ ಹೋಗಿದ್ದ ವಿರಾಟ್ ಕೊಹ್ಲಿ ಬಳಗದ ಬಹುತೇಕ ಎಲ್ಲ ಆಟ ಗಾರರು ಪ್ರತ್ಯೇಕವಾಗಿದ್ದಾರೆ. ತವರಿಗೆ ಮರಳುವ ಸಿದ್ಧತೆಯಲ್ಲಿದ್ದಾರೆ. ಮೇ 20ರಿಂದ  ಆಟಗಾರರು ಜೊತೆಗಿದ್ದರು. 22ರಂದು ಮುಂಬೈನಿಂದ ಇಂಗ್ಲೆಂಡ್‌ಗೆ ತಂಡವು ತೆರಳಿತ್ತು.  

ಓಲ್ಡ್‌ ಟ್ರಾಫರ್ಡ್‌ನಲ್ಲಿ ಬುಧವಾರ ನಡೆದಿದ್ದ ಸೆಮಿಫೈನಲ್‌ನಲ್ಲಿ ಭಾರತವು 18 ರನ್‌ಗಳಿಂದ ಕಿವೀಸ್ ವಿರುದ್ಧ ಸೋತಿತ್ತು. ವೆಸ್ಟ್ ಇಂಡೀಸ್‌ ವಿರುದ್ಧ ಸರಣಿಯ ಪ್ರವಾಸಕ್ಕೆ ಇನ್ನೂ ಎರಡು ವಾರಗಳು ಬಾಕಿಯಿವೆ. ಅದರಿಂದಾಗಿ ಸೋಲಿನ ಬೇಸರ ಮರೆಯುವ ಪ್ರಯತ್ನದಲ್ಲಿರುವ ತಂಡದ ಬಹುತೇಕ ಆಟಗಾರರು ತವರಿನತ್ತ ಮುಖ ಮಾಡಿದ್ದಾರೆ.

‘ಪ್ರಯಾಣದ ಉಸ್ತುವಾರಿ ವ್ಯವಸ್ಥಾಪಕರು ಈಗ ತಮ್ಮ ಕಾರ್ಯನಿರ್ವಹಿಸಲಿದ್ದಾರೆ. ಟಿಕೆಟ್‌ಗಳ ಲಭ್ಯತೆಯ ಆಧಾರದಲ್ಲಿ ಆಟಗಾರರು   ತಮ್ಮ ನಗರಗಳಿಗೆ ಪ್ರಯಾಣಿಸಲಿದ್ದಾರೆ. ಪ್ರತ್ಯೇಕ ಬ್ಯಾಚ್‌ಗಳಲ್ಲಿ ಮತ್ತು ಗುಂಪುಗಳಲ್ಲಿ ಆಟಗಾರರು ಪ್ರಯಾಣಿಸುವ ಸಾಧ್ಯತೆ ಇದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಕೆಲವು ಆಟಗಾರರು ಭಾರತಕ್ಕೆ ಮರಳುತ್ತಿದ್ದಾರೆ. ಇನ್ನೂ ಕೆಲವರು ಇಂಗ್ಲೆಂಡ್‌ನಲ್ಲಿಯೇ  ಇನ್ನೂ ಕೆಲವು ದಿನಗಳವರೆಗೆ ಉಳಿಯಲಿದ್ದಾರೆ.ಹಿರಿಯ ಆಟಗಾರ ಮಹೇಂದ್ರಸಿಂಗ್ ಧೋನಿ ಅವರ ಭವಿಷ್ಯದ ನಡೆಯ ಕುರಿತು ಇನ್ನೂ ಏನೂ ಮಾಹಿತಿ ಇಲ್ಲ.

‘ಧೋನಿ ತಮ್ಮ ನಿವೃತ್ತಿಯ ಕುರಿತು ಯಾವುದೇ ಮಾಹಿತಿ ನೀಡಿಲ್ಲ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ನಾಯಕ ವಿರಾಟ್ ಕೊಹ್ಲಿ ಹೇಳಿದ್ದರು. ಧೋನಿ ತವರಿಗೆ ಮರಳಿದ ನಂತರ ನಿರ್ಧಾರ ಕೈಗೊಳ್ಳುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.

ಭಾರತ ತಂಡವು ಆಗಸ್ಟ್‌ ಮೂರ ರಿಂದ ವಿಂಡೀಸ್‌ನಲ್ಲಿ ಸರಣಿ ಆಡಲಿದೆ. ಆ. 3 ರಿಂದ 8ರವರೆಗೆ ಮೂರು ಟ್ವೆಂಟಿ–20 ಪಂದ್ಯಗಳು ನಡೆಯಲಿವೆ. ಅದರಲ್ಲಿ ಎರಡು ಪಂದ್ಯಗಳು ಅಮೆರಿಕದ ಫ್ಲಾರಿಡಾದಲ್ಲಿ ನಡೆಯಲಿವೆ.

8ರಿಂದ 14ರವರೆಗೆ ಏಕದಿನ ಕ್ರಿಕೆಟ್ ಸರಣಿ ಆಯೋಜನೆಗೊಳ್ಳಲಿದೆ. ಆಗಸ್ಟ್‌  22ರಿಂದ ಸೆಪ್ಟೆಂಬರ್ 3ರವರೆಗೆ ಎರಡು ಟೆಸ್ಟ್ ಪಂದ್ಯಗಳ ಸರಣಿಯು ನಡೆಯಲಿದೆ. ವಿಂಡೀಸ್‌ನ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್‌ ಅವರು ಈ ಸರಣಿಯ ನಂತರ ಎಲ್ಲ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ.

ಬರಹ ಇಷ್ಟವಾಯಿತೆ?

 • 9

  Happy
 • 2

  Amused
 • 0

  Sad
 • 1

  Frustrated
 • 3

  Angry

Comments:

0 comments

Write the first review for this !